ಟಾಟಾ ನ್ಯಾನೊ vs ಆಲ್ಟೊ ಕೆ10: ನಾನಾ? ನೀನಾ?
ಬೈಕ್, ಸ್ಕೂಟರ್ ಸಹವಾಸ ಸಾಕು. ಕುಟುಂಬ ಸಮೇತ ಸವಾರಿ ಮಾಡೋಕೆ ಕಾರೊಂದು ಖರೀದಿಸಬೇಕು. ಆದ್ರೆ ಆರಂಭಿಕರಿಗೆ ಯಾವ ಕಾರು ಸೂಕ್ತ ಎಂದು ಯೋಚಿಸುವರ ಮುಂದೊಂದು ತೊಡಕು ಎದುರಾಗಿದೆ. ಕಣ್ಣ ಮುಂದೆ ಎರಡು ಕಾರಿದೆ. ಅಗ್ಗದ ಸಣ್ಣಕಾರು ನ್ಯಾನೊ ಮತ್ತು ಆಲ್ಟೊ. ಯಾವುದು ಬೆಸ್ಟ್? ಟೋಟಲ್ ಕನ್ ಫ್ಯೂಸ್.
ನಿಧಾನವಾಗಿ ಟಾಟಾ ಮೋಟರ್ಸ್ ಕಂಪನಿಯ ಪುಟ್ಟಕಾರು ನ್ಯಾನೊ ನೂತನ ಆವೃತ್ತಿ ಗ್ರಾಹಕರಿಂದ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದೆ. ಕಂಪನಿಯ ಮಾರುಕಟ್ಟೆಯ ಸದೃಢತೆ ಹೆಚ್ಚಿಸಲು ನ್ಯಾನೊ ಸಹಕರಿಸಿರುವುದು ಸುಳ್ಳಲ್ಲ.
ಮಾರುತಿ ಸುಜುಕಿ ಕಂಪನಿ ಕೂಡ ತನ್ನ ಆಲ್ಟೊ ಕೆ10 ಯಶಸ್ವಿನಿಂದ ಬೀಗುತ್ತಿದೆ. ಈಗಲೂ ಆಲ್ಟೊ ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಈ ಎಂಟ್ರಿ ಲೆವೆಲ್ ಕಾರು ಯಾವತ್ತಿಗೂ ಕಂಪನಿಯ ಪಾಲಿಗೆ ಚಿನ್ನದ ಮೊಟ್ಟೆಯಿಡುವ ಕೋಳಿ ಅಥವಾ ಬೆಸ್ಟ್ ಸೆಲ್ಲರ್.
ಟಾಟಾ ನ್ಯಾನೊ ಮತ್ತು ಮಾರುತಿ ಸುಜುಕಿ ಆಲ್ಟೊ ಕಾರುಗಳನ್ನು ನಡುವೆ ಸಾಕಷ್ಟು ಭಿನ್ನತೆ ಮತ್ತು ಸಾಮ್ಯತೆಗಳಿವೆ. ಗ್ರಾಹಕರಿಗೆ ಈಗಲೂ ಇವೆರಡು ಕಾರುಗಳ ಕುರಿತಾಗ ಗೊಂದಲಗಳಿವೆ. ಅದನ್ನು ಪರಿಹರಿಸುವ ಪುಟ್ಟ ಪ್ರಯತ್ನ ಇಲ್ಲಿದೆ. ಎರಡು ಪುಟ್ಟಕಾರುಗಳನ್ನು ಹೋಲಿಸಿ ನೋಡಲು ಮುಂದಿನ ಪುಟಕ್ಕೆ ಪ್ರಯಾಣ ಬೆಳೆಸಿರಿ.


Click it and Unblock the Notifications









