ಆಲ್ಟೊ vs ನ್ಯಾನೊ: ಯಾವುದನ್ನು ಖರೀದಿಸಬಹುದು?

Tata Nano vs Maruti Alto K10
ಮಾರುತಿ ಸುಜುಕಿ ಆಲ್ಟೊ ಮತ್ತು ಟಾಟಾ ನ್ಯಾನೊ ಕಾರುಗಳ ಹೊರವಿನ್ಯಾಸ, ಇಂಟಿರಿಯರ್, ಎಂಜಿನ್, ವಿಶೇಷತೆ, ಕಾರ್ಯಕ್ಷಮತೆ ಮತ್ತು ದರಗಳ ನಡುವಿನ ಹೋಲಿಕೆಗಳನ್ನು ಇಲ್ಲಿ ನೀಡಲಾಗಿದೆ.

ಎಕ್ಸ್ ಟೀರಿಯರ್: ಯುರೋಪ್ ಕಾರು ವಿನ್ಯಾಸದ ಮಾದರಿಯಲ್ಲಿ ಆಕರ್ಷಕ ವಿನ್ಯಾಸದೊಂದಿಗೆ ಪುಟ್ಟ ನ್ಯಾನೊ ಕಾರು ಆಗಮಿಸಿದೆ. ಇದರ ಬಾಡಿ ವಿನ್ಯಾಸ ನ್ಯಾನೊಗೆ ಕ್ಯೂಟ್ ಲುಕ್ ನೀಡಿದೆ. ಅಂದವಾಗಿ ಕಾಣುವ ಹೆಡ್ ಲ್ಯಾಂಪ್, ಬಾಡಿ ಬಣ್ಣದ ಬಂಪರುಗಳು, ಡೋರ್ ಹ್ಯಾಂಡಲ್ ಮತ್ತು ಸೈಡ್ ಮಿರರ್ ಇಷ್ಟವಾಗುತ್ತದೆ. ಅಗ್ಗದ ಕಾರು ಬಯಸುವರಿಗೆ ಇದರ ಕೂಲ್ ಆದ ವಿನ್ಯಾಸ ಗಮನಸೆಳೆಯಬಹುದು.

ಹೊರವಿನ್ಯಾಸದ ವಿಷಯದಲ್ಲಿ ಮಾರುತಿ ಆಲ್ಟೊ ಕೆ10 ಆಕರ್ಷಕವಾಗಿ ಮತ್ತು ಸರಳವಾಗಿ ಕಾಣುತ್ತದೆ. ಅದರ ಶಾರ್ಪ್ ಹೆಡ್ ಲ್ಯಾಂಪ್ ಮತ್ತು ಕಂಪನಿಯ ಆಕರ್ಷಕ ಲೊಗೊ ಕಾರಿಗೊಂದು ಗಂಭೀರತೆಯನ್ನು ತಂದುಕೊಟ್ಟಿದೆ. ಆಲ್ಟೊ ಮತ್ತು ನ್ಯಾನೊ ವಿನ್ಯಾಸ ನೋಡಲು ವಿಭಿನ್ನತೆಯಿಂದ ಕೂಡಿದೆ.

ಇಂಟಿರಿಯರ್:
ನೂತನ ನ್ಯಾನೊ ಕಾರಿನ ಇಂಟಿರಿಯರ್ ನೊಳಗೆ ಇಣುಕಿದಾಗ ಹಲವು ವಿನೂತನ ಫೀಚರುಗಳು ಗಮನಸೆಳೆಯುತ್ತವೆ. ಮುಂದಿನ ತಲೆಮಾರಿನ ಡ್ಯೂಯಲ್ ಟೋನ್ ಡ್ಯಾಷ್ ಬೋರ್ಡ್, ಅಡ್ವಾನ್ಸಡ್ ಇಸ್ಟ್ರುಮೆಂಟ್ ಕ್ಲಸ್ಟರ್ ಇತ್ಯಾದಿಗಳಿವೆ. ಫ್ಯಾಬ್ರಿಕ್ ಸೀಟ್, ರಿಯರ್ ಪಾರ್ಸೆಲ್ ಸೆಲ್ಪ್, ಎಲೆಕ್ಟ್ರಾನಿಕ್ ಟ್ರಿಪ್ ಮೀಟರ್ ಇತ್ಯಾದಿ ಫೀಚರುಗಳು ಕ್ಯಾಬಿನೊಳಗಿದ್ದು ಹ್ಯಾಚ್ ಬ್ಯಾಕ್ ಕಾರಿನ ಒಳಾಂಗಣ ಸೌಂದರ್ಯವನ್ನು ಹೆಚ್ಚಿಸಿವೆ. ಆದ್ರೆ ಒಳಗಿನ ಸ್ಥಳಾವಕಾಶ ಕೊಂಚ ಇಕ್ಕಟ್ಟು ಅನಿಸಬಹುದು.

ನ್ಯಾನೊಗೆ ಹೋಲಿಸಿದರೆ ಮಾರುತಿ ಸುಜುಕಿ ಆಲ್ಟೊ ಕಾರಿನ ಕ್ಯಾಬಿನ್ ಮತ್ತು ಬೂಟ್ ಸ್ಥಳಾವಕಾಶ ಹೆಚ್ಚಿದೆ. ಇದರ ಡೈನಾಮಿಕ್ ಮತ್ತು ಟ್ರೆಂಡಿ ಇಂಟಿರಿಯರ್ ಕಣ್ಮನ ಸೆಳೆಯುತ್ತದೆ. ಪವರ್ ಸ್ಟಿಯರಿಂಗ್, ಡ್ಯೂಯಲ್ ಟೋನ್ ಇಂಟಿರಿಯರ್ ಮತ್ತು ಪವರ್ ವಿಂಡೋ ಇತ್ಯಾದಿಗಳಿಂದ ನ್ಯಾನೊ ಕಾರಿಗಿಂತ ತುಂಬಾ ಮುಂದಿದೆ. ಹೀಗಾಗಿ ಇಂಟಿರಿಯರ್ ಹೆಚ್ಚು ಇಷ್ಟವಾಗೋದು ಆಲ್ಟೊ ಕಾರಿನದ್ದು.

ಆಲ್ಟೊ ಇಂಟಿರಿಯರ್ ನೆದುರು ನ್ಯಾನೊ ಇಂಟಿರಿಯರ್ ಸಪ್ಪೆ ಎನಿಸುತ್ತದೆ. ಆದ್ರೆ ಆಲ್ಟೊ ಕಾರನ್ನು ಮೀರಿಸುವ ಗುಣವೊಂದು ನ್ಯಾನೊ ಕಾರಿನಲ್ಲಿದೆ. ಯಾವುದದು? ಮುಂದಿನ ಪುಟ ನೋಡಿ.

More from DriveSpark

Article Published On: Tuesday, February 28, 2012, 10:26 [IST]
English summary
Car Comparison: Tata Nano and Maruti Suzuki Alto K10. Exteriors, Interiors, Engine, Specifications, Performance and Price Comparison.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+