ಆಲ್ಟೊ vs ನ್ಯಾನೊ: ಮೈಲೇಜ್ ಮತ್ತು ದರ

ಆಲ್ಟೊ ಕೆ10 ಕಾರು 998ಸಿಸಿಯ ಕೆ10 ಎಂಜಿನ್ ಹೊಂದಿದೆ. ಇದು 68 ಪಿಎಸ್ ಪವರ್ ಮತ್ತು 90ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಇದು 5 ಸ್ಪೀಡಿನ ಮ್ಯಾನುಯಲ್ ಟ್ರಾನ್ಸ್ ಮಿಷನ್ ಹೊಂದಿದೆ. ಕೇವಲ 13.3 ಸೆಕೆಂಡಿನಲ್ಲಿ 0-100 ಕಿ.ಮೀ. ವೇಗ ಪಡೆಯಬಹುದು.
ಆಲ್ಟೊ ಕಾರಲ್ಲಿ ಗಂಟೆಗೆ ಗರಿಷ್ಠವೆಂದರೆ 137 ಕಿ.ಮೀ. ವೇಗದಲ್ಲಿ ಹೋಗಬಹುದು. ಇದು ಪ್ರತಿಲೀಟರ್ ಪೆಟ್ರೋಲಿಗೆ ಸಿಟಿ ರಸ್ತೆಯಲ್ಲಿ 18.0 ಕಿ.ಮೀ ಮತ್ತು ಹೆದ್ದಾರಿಯಲ್ಲಿ 22.5 ಕಿ.ಮೀ. ಮೈಲೇಜ್ ನೀಡುತ್ತದೆ.
ಇಂಧನ ದಕ್ಷತೆಯಲ್ಲಿ ನ್ಯಾನೊ ಇಷ್ಟವಾಗುತ್ತದೆ. ಆದರೆ ಉಳಿದ ಎಲ್ಲಾ ವಿಷ್ಯಗಳಲ್ಲೂ ಆಲ್ಟೊ ಮುಂದಿದೆ. ಕೆಲವು ಕಿ.ಮೀ. ಮೈಲೇಜ್ ಆಸೆಗಾಗಿ ಆಲ್ಟೊ ಕೈ ಬಿಡುವುದು ಸಾಧುವಲ್ಲ.
ದರ: ಟಾಟಾ ನ್ಯಾನೊ ಈಗ ಒಂದು ಲಕ್ಷ ರುಪಾಯಿಯಲ್ಲಿ ಉಳಿದಿಲ್ಲ. ಇದರ ದರ ಸುಮಾರು 1.27 ಲಕ್ಷ ರುಪಾಯಿಯಿಂದ 1.96 ಲಕ್ಷ ರು.ವರೆಗಿದೆ. ಆದರೆ ಆಲ್ಟೊ ದರ ಇದರ ಡಬಲ್ ಇದೆ. ಅಂದರೆ ಆಲ್ಟೊ ಕೆ10 ದರ 3.08 ಲಕ್ಷ ರುಪಾಯಿಯಿಂದ 3.21 ಲಕ್ಷ ರು.ವರೆಗಿದೆ. ಇವೆಲ್ಲ ಎಕ್ಸ್ ಶೋರೂಂ ದರ. ಆನ್ ರೋಡಿಗೆ ಬಂದಾಗ ಇನ್ನಷ್ಟು ಹೆಚ್ಚಾದೀತು.
ಈ ಎರಡು ಕಾರುಗಳ ಹೋಲಿಕೆಗಳಲ್ಲಿ ಆಲ್ಟೊಗೆ ಹೆಚ್ಚು ಅಂಕ ನೀಡಲಾಗಿದೆ. ದ್ವಿಚಕ್ರ ವಾಹನದಿಂದ ನಾಲ್ಕು ಚಕ್ರದ ವಾಹನದತ್ತ ಶಿಫ್ಟ್ ಆಗೋ ಸಂದರ್ಭದಲ್ಲಿ ಮಾರುತಿ ಆಲ್ಟೊ ಖಂಡಿತವಾಗಿಯೂ ಸೂಕ್ತ ಕಾರು. ಸಿಟಿ ರಸ್ತೆಯಲ್ಲಿ ಕಡಿಮೆ ಸವಾರಿಗೆ ಬೇಕಾದ್ರೆ ನ್ಯಾನೊ ಖರೀದಿಸಬಹುದು.


Click it and Unblock the Notifications








