ಟಾಟಾ ಪವನ ಕಾರ್ ಟೆಸ್ಟ್ ಯಶಸ್ವಿ, ಉತ್ಪಾದನೆ ಶುರು?
ಪೆಟ್ರೋಲ್ ಅಥವಾ ಡೀಸೆಲ್ ಕುಡಿಯುವ ಕಾರುಗಳಿಂದ ಬೇಸೆತ್ತವರು ಪವನ ಶಕ್ತಿಯಿಂದ ಚಲಿಸುವ ಕಾರಿಗಾಗಿ ಕಾಯಬಹುದು. ಸಂಕುಚಿತ ಗಾಳಿಯಿಂದ ಚಲಿಸುವ ಕಾರುಗಳನ್ನು ರಸ್ತೆಯಲ್ಲಿ ನೋಡುವ ಕಾಲವಿನ್ನು ದೂರವಿಲ್ಲ.
ಸಂಕುಚಿತ ಗಾಳಿಯಿಂದ ಚಲಿಸುವ ಎರಡು ಕಾರುಗಳ ಟೆಸ್ಟ್ ಯಶಸ್ವಿಯಾಗಿರುವುದಾಗಿ ಟಾಟಾ ಮೋಟರ್ಸ್ ಪ್ರಕಟಿಸಿದೆ. ಇನ್ಮುಂದೆ ಕಂಪನಿಯು ಒಪ್ಪಂದದ ಎರಡನೇ ಭಾಗವಾದ ಸಂಕುಚಿತ ಕಾರು ಉತ್ಪಾದನೆಯತ್ತ ಮುಖ ಮಾಡಲಿದೆ.
ಟಾಟಾ ಮತ್ತು ಎಂಡಿಐ ಕಂಪನಿಗಳೆರಡು 2007ರಲ್ಲಿ ಮಾರುತ ಚಾಲಿತ ಕಾರನ್ನು ಅಭಿವೃದ್ಧಿಪಡಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದವು. ಎಂಡಿಐ ತಂತ್ರಜ್ಞಾನ ಬಳಸಿ ದೇಶದಲ್ಲಿ ಗಾಳಿ ಕಾರುಗಳನ್ನು ಟಾಟಾ ಮೋಟರ್ಸ್ ಮಾರಾಟ ಮಾಡುವ ಒಪ್ಪಂದ ಇದಾಗಿದೆ.
ಈ ಒಪ್ಪಂದವು ಎರಡು ಹಂತಗಳನ್ನು ಹೊಂದಿದೆ. ಕಂಪನಿಯು ತಂತ್ರಜ್ಞಾನವನ್ನು ಎರಡು ಕಾರುಗಳಿಗೆ ಅಳವಡಿಸಿ ಪರೀಕ್ಷಿಸುವ ಮೂಲಕ ಮೊದಲ ಹಂತವನ್ನು ಪೂರೈಸಿದೆ. ಯಾವುದಾದರೂ ನಿರ್ದಿಷ್ಟ ಕಾರಿಗೆ ಸಂಕುಚಿತ ಪವನ ತಂತ್ರಜ್ಞಾನದ ಎಂಜಿನ್ ಗಳನ್ನು ಅಳವಡಿಸಿ ಉತ್ಪಾದನೆ ಕೈಗೊಳ್ಳುವುದು ಎರಡನೇ ಹಂತವಾಗಿದೆ.
ಮುಂದಿನ ಕೆಲವೇ ವರ್ಷಗಳಲ್ಲಿ ಪವನಚಾಲಿತ ಕಾರುಗಳು ರಸ್ತೆಯಲ್ಲಿರುವ ನಿರೀಕ್ಷೆಯಿದೆ.


Click it and Unblock the Notifications









