ಬೆಂಗ್ಳೂರಿನಲ್ಲಿ ಇಂದಿನಿಂದ ಟಿಂಟೆಡ್ ಬ್ಯಾನ್, ದಂಡವೆಷ್ಟು?
"ಈ ಮೊದಲು ಟಿಂಟೆಡ್ ಗ್ಲಾಸ್ ತೆಗೆಯಲು ಮೇ 19ರವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ ಕಾರು ಮಾಲಿಕರು ಮತ್ತು ವಿವಿಧ ಸಂಘ ಸಂಸ್ಥೆಗಳ ಮನವಿ ಮೇರೆಗೆ ಗಡವನ್ನು ಜೂನ್ 5ರವರೆಗೆ ವಿಸ್ತರಿಸಲಾಗಿತ್ತು. ಇಂದಿಗೆ ಗಡುವು ಕೊನೆಗೊಂಡಿದ್ದು, ನಿಯಮ ಉಲ್ಲಂಘಿಸುವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ" ಎಂದು ಅವರು ಹೇಳಿದ್ದಾರೆ.
ದಂಡ ಮತ್ತು ಶಿಕ್ಷೆ ವಿವರ: ಜೂನ್ ಐದರಿಂದ ಪ್ರತಿ ಟ್ರಾಫಿಕ್ ಸಿಗ್ನಲ್ ಬಳಿ, ಟ್ರಾಫಿಕ್ ವೃತ್ತಗಳ ಬಳಿ ಟ್ರಾಫಿಕ್ ಪೊಲೀಸರು ಕಾರುಗಳ ಕಿಟಕಿಗಳನ್ನು ಪರಿಶೀಲಿಸಲಿದ್ದಾರೆ. ಪ್ರಪ್ರಥಮ ಬಾರಿಗೆ ಟಿಂಟೆಡ್ ಗ್ಲಾಸ್ ತೆಗೆಯದೇ ಸಿಕ್ಕಿಬಿದ್ದವರಿಗೆ 100 ರುಪಾಯಿ ದಂಡ ವಿಧಿಸಲಾಗುವುದು ಎಂದು ಮಿರ್ಜಿ ಮಾಹಿತಿ ನೀಡಿದ್ದಾರೆ.
ಎರಡನೇ ಬಾರಿ ಸಿಕ್ಕಿ ಬಿದ್ದವರಿಗೆ 300 ರು. ದಂಡ ವಿಧಿಸಲಾಗುವುದು. ಮೂರನೇ ಬಾರಿ ಸಿಕ್ಕಿ ಬಿದ್ದವರಿಗೆ 300 ರು. ದಂಡ ವಿಧಿಸಿ ಚಾಲನಾ ಪರವಾನಗಿ ರದ್ದು ಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ.
1989ರ ವಾಹನ ಕಾಯಿದೆಯಲ್ಲಿ ಸೂಚಿಸಿದಂತೆ ಅನುಮತಿ ಇರುವುದಕ್ಕಿಂತ ಹೆಚ್ಚು ಪ್ರಮಾಣದ ಟಿಂಟೆಡ್ ಗ್ಲಾಸ್ ಬಳಸುವುದನ್ನು ನಿಷೇಧಿಸುವ ಕಾನೂನನ್ನು ಮೇ 4ರಿಂದ ಕಡ್ಡಾಯವಾಗಿ ಅನುಷ್ಠಾನಗೊಳಿಸುವಂತೆ ಇತ್ತೀಚೆಗೆ ಕೋರ್ಟ್ ಆದೇಶಿಸಿತ್ತು. ದೆಹಲಿ ಮತ್ತು ಮುಂಬೈ ನಗರಗಳಲ್ಲಿ ಇದನ್ನು ತಕ್ಷಣದಿಂದಲೇ ಜಾರಿಗೊಳಿಸಲಾಗಿತ್ತು. ಆದರೆ ಬೆಂಗಳೂರಿನಲ್ಲಿ ಗಡುವು ವಿಸ್ತರಿಸಲಾಗಿತ್ತು.
ಟಿಪ್ಸ್: ಸನ್ ಫಿಲ್ಮ್ ನೀವೇ ತೆಗೆಯಿರಿ


Click it and Unblock the Notifications









