ದೇಶದ ಅಗ್ರ ಹತ್ತು ಜನಪ್ರಿಯ ಕಾರುಗಳ ಪಟ್ಟಿ

ಗೂಗಲ್ ಹುಡುಕಾಟ ತಾಣದಲ್ಲಿ ಹೆಚ್ಚು ಜನರು ಹುಡುಕಾಡಿದ ಕಾರುಗಳಲ್ಲಿ ನಾಲ್ಕನೇ ಸ್ಥಾನವನ್ನು ಟಾಟಾ ಮಾಂಝಾ ಸೆಡಾನ್ ಪಡೆದಿದೆ. ಇದು ಹಲವು ಟ್ರಿಮ್ ಆವೃತ್ತಿಗಳಲ್ಲಿ ದೊರಕುತ್ತಿದ್ದು, ಅತ್ಯಧಿಕ ಮೈಲೇಜ್ ಕಾರು ಕೂಡ ಹೌದು. ಗೂಗಲ್ ಸರ್ಚ್‌ನಲ್ಲಿ ಐದನೇ ಸ್ಥಾನವನ್ನು ಮಾರುತಿ ಸುಜುಕಿ ಕಿಝಾಷಿ ಪಡೆದಿದೆ. ಇದರ ದರ ಸುಮಾರು 16.5 ಲಕ್ಷ ರುಪಾಯಿ ಇದೆ. ಮಾರುತಿ ಕಂಪನಿಯ ದುಬಾರಿ ಕಾರು ಹೆಚ್ಚಿನ ಜನರ ಕುತೂಹಲಕ್ಕೆ ಪಾತ್ರವಾಗಿದ್ದು ವಿಶೇಷ.

ಟೊಯೊಟಾ ಕಂಪನಿಯ ಎಟಿಯೋಸ್ ಕಾರು ಹುಡುಕಾಟವೂ ಹೆಚ್ಚಾಗಿತ್ತು. ಗೂಗಲ್ ಹುಡುಕಾಟದಲ್ಲಿ ಇದಕ್ಕೆ ಆರನೇ ಸ್ಥಾನ ದೊರಕಿದೆ. ಕಂಪನಿಯ ಎಂಟ್ರಿ ಲೆವೆಲ್ ಕಾರು ಕಂಪನಿಯ ಮಾರಾಟ ಹೆಚ್ಚಳಕ್ಕೂ ಗಮನಾರ್ಹ ನೆರವು ನೀಡಿದೆ. ಕಂಪನಿಯು ಡೀಸೆಲ್ ಎಟಿಯೋಸ್ ಪರಿಚಯಿಸಿದ್ದೂ ಕೂಡ ಹೆಚ್ಚಿನ ಜನರನ್ನು ಆಕರ್ಷಿಸಿದೆ. ಇದು ಸ್ವಿಫ್ಟ್, ಫಿಗೊ ಮತ್ತು ಐ20 ಕಾರುಗಳಿಗೆ ಪ್ರಬಲ ಪೈಪೋಟಿ ನೀಡಿದೆ.

ಹುಡುಕಾಟದಲ್ಲಿ ಏಳನೇ ಸ್ಥಾನವನ್ನು ಹ್ಯುಂಡೈ ಕಂಪನಿಯ ಫ್ಲೂಡಿಕ್ ವೆರ್ನಾ ಪಡೆದಿದೆ. ಫ್ಲೂಡಿಕ್ ವಿನ್ಯಾಸದಿಂದ ಆಗಮಿಸಿದ ಕಾರು ಅತ್ಯಧಿಕ ಬೇಡಿಕೆ ಪಡೆದುಕೊಂಡಿತ್ತು. ಸಿ ಸೆಗ್ಮೆಂಟಿನಲ್ಲಿ ಅತ್ಯಧಿಕ ಮಾರಾಟದ ಹೋಂಡಾ ಸಿಟಿಯನ್ನೇ ಇದು ಹಿಂದಿಕ್ಕಿತ್ತು. ಇದರ ವಿನೂತನ ವಿನ್ಯಾಸ, ಎಂಜಿನ್ ಆಯ್ಕೆ ಮತ್ತು ಆಕರ್ಷಕ ದರ ಹೆಚ್ಚು ಜನರನ್ನು ಸೆಳೆದಿದೆ.

ಹ್ಯುಂಡೈ ವೆರ್ನಾದ ನಂತರದ ಸ್ಥಾನವನ್ನು ನಿಸ್ಸಾನ್ ಸನ್ನಿ ಪಡೆದಿದೆ. ಸನ್ನಿ ನೆರವಿನಿಂದ ನಿಸ್ಸಾನ್ ಕಂಪನಿಯು ಮಾರಾಟವನ್ನು ಎರಡು ಪಟ್ಟು ಹೆಚ್ಚಿಸಿಕೊಂಡಿತ್ತು. ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತದೆ. ಇದು ಬೆಸ್ಟ್ ಸಿಟಿ ಕಾರು ಕೂಡ ಹೌದು.

ನಂತರದ ಸ್ಥಾನವನ್ನು ಸ್ಕೋಡಾ ರಾಪಿಡ್ ಪಡೆದಿದೆ. ಸ್ಕೋಡಾದ ಎಂಟ್ರಿ ಲೆವೆಲ್ ಕಾರು ಮತ್ತು ಫೋಕ್ಸ್ ವ್ಯಾಗನ್ ವೆಂಟೊ ಆಧರಿತ ಕಾರು ರಾಪಿಡ್ ಇಂಟರ್ನೆಟಿನಲ್ಲಿ ಹೆಚ್ಚು ಜನರ ಹುಡುಕಾಟಕ್ಕೆ ಪಾತ್ರವಾಗಿದೆ. ನೂತನ ಸ್ಕೋಡ ರಾಪಿಡ್ ದರ 6.9 ಲಕ್ಷ ರುಪಾಯಿಯಿಂದ 9.5 ಲಕ್ಷ ರುಪಾಯಿವರೆಗಿದೆ.

ಗೂಗಲ್ ಸರ್ಚ್ ಎಂಜಿನಿನಲ್ಲಿ ಹೆಚ್ಚು ಜನರು ಹುಡುಕಾಡಿದ ಕಾರುಗಳಲ್ಲಿ ಹತ್ತನೇ ಸ್ಥಾನವನ್ನು ಫೋರ್ಡ್ ಫಿಯೆಸ್ಟಾ ಪಡೆದಿದೆ. ನೂತನ ಫಿಯೆಸ್ಟಾ ಕಾರನ್ನು ಕಂಪನಿಯು ಪ್ರಪ್ರಥಮ ಬಾರಿಗೆ ಜಾಗತಿಕ ಪ್ಲಾಟ್ ಫಾರ್ಮ್‌ನಲ್ಲಿ ಅಭಿವೃದ್ಧಿಪಡಿಸಿದೆ. ಇದರ ನೂತನ ವಿನ್ಯಾಸ ಮತ್ತು ಸೆಂಟ್ರಲ್ ಕನ್ಸೋಲ್ ಕುರಿತು ನೆಟ್ಟನಿಗರು ಸಾಕಷ್ಟು ಚರ್ಚೆ ಮಾಡಿದ್ದಾರೆ. ಕಂಪನಿಯು ಇತ್ತೀಚೆಗೆ ಆಟೋಮ್ಯಾಟಿಕ್ ಫಿಯೆಸ್ಟಾ ಆವೃತ್ತಿಯನ್ನೂ ಪರಿಚಯಿಸಿದೆ.

More from DriveSpark

Article Published On: Monday, June 25, 2012, 13:08 [IST]
English summary
The Tata Manza sedan is the fourth highest searched new car. We are back to hatchbacks in sixth place that is occupied by the Toyota Etios Liva. Next highest searched new cars goes to Hyundai's Fluidic Verna. Read Top 10 Most Searched New Cars In India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+