ಗೂಗಲ್‌ನಲ್ಲಿ ಹುಡುಕಾಡಿದ ಟಾಪ್10 ಹೊಸ ಕಾರುಗಳು

Posted By:
<ul id="pagination-digg"><li class="next"><a href="/four-wheelers/2012/top-10-most-searched-new-cars-india-002496.html">Next »</a></li></ul>

ವಾಹನಗಳ ಬಗ್ಗೆ ತಿಳಿಯಲು ಈತ ಹೆಚ್ಚಿನ ಜನರು ಅಂತರ್‌ಜಾಲವನ್ನೇ ಪ್ರಮುಖವಾಗಿ ಅವಲಂಬಿಸಿದ್ದಾರೆ. ಅದಕ್ಕಾಗಿ ಹೆಚ್ಚಿನ ಜನರು ಗೂಗಲ್ ಸರ್ಚ್ ಎಂಜಿನ್ ಬಳಸುತ್ತಾರೆ. ದೇಶದ ರಸ್ತೆಗೆ ಇತ್ತೀಚೆಗೆ ಆಗಮಿಸಿದ ಕಾರುಗಳಲ್ಲಿ ಹೆಚ್ಚು ಜನರು ಹುಡುಕಾಟ ನಡೆಸಿದ ಕಾರು ಯಾವುದು ಎನ್ನುವ ಪ್ರಶ್ನೆಗೆ ಗೂಗಲ್ ಉತ್ತರ ನೀಡಿದೆ.

ಗೂಗಲ್ ತಾಣದಲ್ಲಿ ಇತ್ತೀಚೆಗೆ ಹೆಚ್ಚು ಜನರು ಸ್ಪೋರ್ಟ್ಸ್ ಕಾರುಗಳನ್ನು ಹುಡುಕುತ್ತಿದ್ದಾರೆ ಎಂದು ಗೂಗಲ್ ವರದಿ ಹೇಳಿದೆ. ನಂತರದ ಸ್ಥಾನವನ್ನು ಪ್ರೀಮಿಯಂ ಕಾರುಗಳು ಪಡೆದಿವೆ. ಸೆಡಾನ್ ಕಾರುಗಳ ಹುಡುಕಾಟಕ್ಕೆ 3ನೇ ಸ್ಥಾನ, ಐಷಾರಾಮಿ ಕಾರುಗಳ ಹುಡುಕಾಟಕ್ಕೆ ನಾಲ್ಕನೇ ಸ್ಥಾನ ದೊರಕಿದೆ. ದೇಶದಲ್ಲಿ ಅತ್ಯಧಿಕವಾಗಿ ಮಾರಾಟವಾಗುವ ಹ್ಯಾಚ್ ಬ್ಯಾಕ್ ಕಾರುಗಳ ಹುಡುಕಾಟಕ್ಕೆ 5ನೇ ಸ್ಥಾನ ದೊರಕಿದೆ.

ಹೆಚ್ಚು ಜನರು ಹುಡುಕಾಡಿದ ಕಾರುಗಳಲ್ಲಿ ಹ್ಯುಂಡೈ ಇಯಾನಿಗೆ ಅಗ್ರ ಸ್ಥಾನ ದೊರಕಿದೆ. ದೇಶದ ಅತ್ಯಧಿಕ ಮಾರಾಟದ ಆಲ್ಟೊ ಕಾರಿಗೆ ಪೈಪೋಟಿ ನೀಡಲು ಬಂದ ಇಯಾನ್ ಕಾರಿನ ಕುರಿತು ಹೆಚ್ಚು ಜನರು ಕುತೂಹಲಗೊಂಡಿದ್ದರು. 2.74 ಲಕ್ಷ ರುಪಾಯಿಯಿಂದ 3.8 ಲಕ್ಷ ರು. ಆಸುಪಾಸಿನಲ್ಲಿ ದೊರಕುವ ಇಯಾನ್ ಕಾರು ಹ್ಯುಂಡೈನ ಎರಡನೇ ಅತ್ಯಧಿಕ ಮಾರಾಟದ ಕಾರು ಕೂಡ ಹೌದು.

ಗೂಗಲ್ ಹುಡುಕಾಟ ತಾಣದಲ್ಲಿ ಹೆಚ್ಚು ಜನರು ಹುಡುಕಾಡಿದ ಎರಡನೇ ಕಾರು ಮಹೀಂದ್ರ ಎಕ್ಸ್‌ಯುವಿ 500. ಇದು ರಸ್ತೆಗಿಳಿಯುವ ಮುನ್ನವೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ದೇಶದ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಪ್ರೀಯರ ಹೃದಯದ ಬಡಿತ ಹೆಚ್ಚಿಸಿದ ಈ ಕಾರು ಅತ್ಯಧಿಕ ಬೇಡಿಕೆ ಪಡೆದುಕೊಂಡಿದೆ. ಕಂಪನಿ ಕಷ್ಟಪಟ್ಟು ಮೂರುತಿಂಗಳಲ್ಲಿ ಉತ್ಪಾದಿಸಿದ ಎಕ್ಸ್‌ಯುವಿಗಳೆಲ್ಲ ಕೇವಲ 10 ದಿನದಲ್ಲಿ ಖಾಲಿಯಾಗಿತ್ತು.

ಮಹೀಂದ್ರ ಕಂಪನಿಯು ಇತ್ತೀಚೆಗೆ ಎಕ್ಸ್‌ಯುವಿ ಬುಕ್ಕಿಂಗ್ ಪುನಾರಂಭಿಸಿದೆ. ಈಗಲೂ ಈ ಕಾರಿಗೆ ಜನರು ಮುಗಿಬೀಳುತ್ತಿದ್ದಾರೆ. ಎಕ್ಸ್ ಯುವಿ 500 ದರ ಸುಮಾರು 11-14 ಲಕ್ಷ ರು. ಆಸುಪಾಸಿನಲ್ಲಿ ದೊರಕುತ್ತದೆ. ಇತರ ಎಸ್‌ಯುವಿಗಳಿಗೆ ಹೋಲಿಸಿದರೆ ಇದರ ದರ ಬಲು ಅಗ್ದ. ಇದು ಕೂಡ ಇದರ ಬೇಡಿಕೆ ಹೆಚ್ಚಲು ಪ್ರಮುಖ ಕಾರಣ.

ಗೂಗಲ್ ಸರ್ಚ್ ಎಂಜಿನಿನಲ್ಲಿ ಹೆಚ್ಚು ಜನರು ಹುಡುಕಾಡಿದ ಅಗ್ರ ಮೂರನೇ ಕಾರಿನ ಹೆಸರು ಹೋಂಡಾ ಬ್ರಿಯೊ. ಇದು ಹೋಂಡಾ ಕಂಪನಿಯ ಪ್ರಮುಖ ಎಂಟ್ರಿ ಲೆವೆಲ್ ಮಾದರಿಯಾಗಿದೆ. ಇದು ಕಳೆದ ವರ್ಷ ರಸ್ತೆಗಿಳಿದಿತ್ತು. ಇದರ ಆರಂಭಿಕ ದರ 3.99 ಲಕ್ಷ ರುಪಾಯಿ ಇದೆ. ಹೋಂಡಾ ಕಂಪನಿಯು ದೇಶದಲ್ಲಿ ಮಾರಾಟ ಮಾಡುತ್ತಿರುವ ಅಗ್ಗದ ಕಾರು ಇದಾಗಿದೆ.

<ul id="pagination-digg"><li class="next"><a href="/four-wheelers/2012/top-10-most-searched-new-cars-india-002496.html">Next »</a></li></ul>
English summary
Google is probably the first place people go online to know more about new cars. The search engine has commissioned AC Neilsen to understand how people are searching for recently launched new cars in India and has now come out with a report. The report is a clear indicator of how popular the new cars launche
Story first published: Monday, June 25, 2012, 13:11 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark