ಟೊಯೊಟಾ ಕಾರುಗಳಿಗೆ ಡಿಮಾಂಡಪ್ಪೋ ಡಿಮಾಂಡು

ದೇಶದಲ್ಲೀಗ ಮತ್ತೆ ಟೊಯೊಟಾ ಹವಾ ಆರಂಭವಾದಂತಿದೆ. ದಿನಕಳೆದಂತೆ ಕಂಪನಿಯ ಕಾರುಗಳಿಗೆ ಬೇಡಿಕೆ ಗಮನಾರ್ಹವಾಗಿ ಏರಿಕೆ ಕಾಣುತ್ತಿದೆ. ಈಗ ಕಂಪನಿಯು ವರ್ಷಕ್ಕೆ 2.10 ಲಕ್ಷ ವಾಹನ ಉತ್ಪಾದಿಸುತ್ತಿದೆ. ಇದನ್ನು 3.10 ಲಕ್ಷ ಯುನಿಟಿಗೆ ಹೆಚ್ಚಿಸುವ ಯೋಜನೆಯಲ್ಲಿ ಕಂಪನಿಯಿದೆ.

ಬೆಂಗಳೂರಿನ ಬಿಡದಿಯ ಎರಡು ಘಟಕದಲ್ಲಿ ಕಂಪನಿಯು ಕಾರುಗಳನ್ನು ಉತ್ಪಾದಿಸುತ್ತಿದೆ. ಟೊಯೊಟಾ ಕಾರುಗಳಲ್ಲಿ ಅತ್ಯಧಿಕ ಬೇಡಿಕೆಯಿರುವ ಕಾರು ಯಾವುದೆಂಬ ಪ್ರಶ್ನೆ ನಿಮ್ಮಲ್ಲಿರಬಹುದು. ನಿಮ್ಮ ಊಹೆ ಸರಿಯಾಗಿದೆ. ಟೊಯೊಟಾ ಕಂಪನಿಯ ಅತ್ಯಧಿಕ ಬೇಡಿಕೆಯ ಕಾರುಗಳಲ್ಲಿ ಟೊಯೊಟಾ ಅಗ್ರ ಸ್ಥಾನದಲ್ಲಿದೆ.

ಟೊಯೊಟಾ ಇನ್ನೋವಾ ವೇಟಿಂಗ್ ಪಿರೆಯಿಡ್ 15 ದಿನದಿಂದ 1 ತಿಂಗಳಿಗೆ ಹೆಚ್ಚಾಗಿರುವುದು ಬೇಡಿಕೆ ಹೆಚ್ಚಳಕ್ಕೆ ಪ್ರಮುಖ ಸಾಕ್ಷಿ. ಇನ್ನೋವಾ ಎಂಪಿವಿ ದೇಶದ ಹೆಚ್ಚಿನ ಜನರ ನೆಚ್ಚಿನ ಬಂಡಿ. ರಾಜಕಾರಣಿಗಳು, ಸ್ವಾಮೀಜಿಗಳು, ಉದ್ಯಮಿಗಳಿಗೆ ಇನ್ನೋವಾ ಅಚ್ಚುಮೆಚ್ಚು(ವಿಮರ್ಶೆ ಓದಿ).

ಇನ್ನೋವಾದ ನಂತ್ರ ಹೆಚ್ಚು ಬೇಡಿಕೆ ಇರೋ ಕಾರುಗಳಲ್ಲಿ ಫಾರ್ಚ್ಯುನರ್, ಎಟಿಯೋಸ್ ಮತ್ತು ಕರೊಲ್ಲಾ ಆಲ್ಟಿಸ್ ಇದೆ. ಇವೆಲ್ಲ ಕಂಪನಿಯ ಅತ್ಯಧಿಕ ಮಾರಾಟದ ಕಾರುಗಳು. ಈ ಕಾರುಗಳನ್ನು ಕಂಪನಿಯು ಬಿಡದಿಯ ಎರಡನೇ ಘಟಕದಲ್ಲಿ ಉತ್ಪಾದಿಸುತ್ತಿದೆ. ಇನ್ನೋವಾ ಕಾರುಗಳನ್ನು ಮೊದಲ ಘಟಕದಲ್ಲಿ ಉತ್ಪಾದಿಸುತ್ತಿದೆ.

ಪ್ರಡೊ, ಪ್ರಯಾಸ್ ಮತ್ತು ಲ್ಯಾಂಡ್ ಕ್ರೂಷರ್ ಕಾರುಗಳನ್ನು ಕಂಪನಿಯು ದೇಶಕ್ಕೆ ಆಮದು ಮಾಡಿಕೊಳ್ಳುತ್ತಿದೆ. ಇತ್ತೀಚೆಗೆ ಕಂಪನಿಯು ದೇಶದ ರಸ್ತೆಗೆ ನೂತನ ಕ್ಯಾಮ್ರಿ ಕಾರನ್ನು ಪರಿಚಯಿಸಿತ್ತು. ಇದು ಆಕರ್ಷಕ ಅದ್ದೂರಿ ಕಾರು. ಇದರ ಆರಂಭಿಕ ದರ 23.8 ಲಕ್ಷ ರುಪಾಯಿ.

ಇಷ್ಟೊಂದು ಬೇಡಿಕೆ ಹೆಚ್ಚಿದಾಗ ಟೊಯೊಟಾ ಇನ್ನೋವಾ ಏನು ಮಾಡುತ್ತಿದೆ? ಕಂಪನಿಯು ತಕ್ಷಣ ಉತ್ಪಾದನೆ ಹೆಚ್ಚಳದ ಮಂತ್ರವ ಜಪಿಸುತ್ತಿದೆ. ಹೊಸ ಕಾರುಗಳಿಗೆ ಇನಷ್ಟು ಹೂಡಿಕೆ ಮಾಡುವುದಾಗಿ ಹೇಳಿದೆ. ಅಂದಹಾಗೆ ಕೇಳೊಕ್ಕೆ ಮರೆತೆ. ನಿಮಗೆ ಟೊಯೊಟಾ ಕಾರುಗಳಲ್ಲಿ ಅತ್ಯಂತ ಇಷ್ಟವಾದ ಕಾರು ಯಾವುದು? ಫಾರ್ಚ್ಯುನರಾ? ಇನ್ನೋವಾನ? ಅಥವಾ ಎಟಿಯೋಸ್, ಲಿವಾ? ಯಾವುದು ಅಂತ ಹೇಳಿದ್ರೆ ಒಳ್ಳೇದಿತ್ತು.

Most Read Articles

Kannada
English summary
Toyota cars are receiving huge demands in India. The company is looking to cater to these demands immediately. Currently the production plant, rolls out 2,10,000 units. Toyota is looking to bump up these units to 3,10,000 annually.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X