ಲಕ್ಷ ಗಡಿದಾಟಿದ ಟೊಯೊಟಾ ಎಟಿಯೋಸ್ ಮಾರಾಟ
ಮಾರುಕಟ್ಟೆಯಲ್ಲಿ ವಾಹನಗಳ ಬೇಡಿಕೆ ಕುಸಿಯುತ್ತಿದ್ದರೂ ಗ್ರಾಹಕರಿಂದ ಎಟಿಯೋಸ್ ಮತ್ತು ಲಿವಾ ಆವೃತ್ತಿಗಳಿಗೆ ಸಕಾರಾತ್ಮಕ ಬೇಡಿಕೆ ಬಂದಿರುವುದು ಮಾರಾಟ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದು ಕಂಪನಿ ಹೇಳಿದೆ.
"ಎಟಿಯೋಸ್ ಮಾರಾಟದಲ್ಲಿನ ಹೊಸ ಮೈಲುಗಲ್ಲು ನಮಗೆ ಮುಖ್ಯವಾಗುತ್ತದೆ. ಇದಕ್ಕೆ ನೆರವಾದ ನಮ್ಮ ಲಕ್ಷ ಗ್ರಾಹಕರಿಗೆ ಹೃದಯಪೂರ್ವಕ ಕೋಟಿ ನಮನಗಳು. ಜಪಾನಿನ ಸುನಾಮಿ ಮತ್ತು ನೆರೆಹಾವಳಿಯ ಹಿನ್ನೆಡೆಯ ನಡುವೆಯೂ ಇಷ್ಟೊಂದು ಮಾರಾಟವಾಗಿರುವುದು ಎಟಿಯೋಸ್ ಜನಪ್ರಿಯತೆಗೆ ಸಾಕ್ಷಿ" ಎಂದು ಟೊಯೊಟಾ ಕಿರ್ಲೊಸ್ಕರ್ ಮೋಟರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಹಿರೊಶಿ ನಕಗವಾ ಹೇಳಿದ್ದಾರೆ.
ಕಂಪನಿಯು ಈಗ ವರ್ಷಕ್ಕೆ ಸುಮಾರು 1.20 ಲಕ್ಷ ಕಾರುಗಳನ್ನು ಉತ್ಪಾದಿಸುತ್ತಿದೆ. ಮುಂದಿನ ವರ್ಷದ ಆರಂಭದಿಂದ ಇದನ್ನು ವರ್ಷಕ್ಕೆ 2.10 ಲಕ್ಷ ಯುನಿಟ್‌ಗೆ ತಲುಪಿಸಲು ಕಂಪನಿ ಯೋಜಿಸಿದೆ.
ದೇಶದ ರಸ್ತೆಗೆ ಪೂರಕವಾಗಿ ಟೊಯೊಟಾ ಕಂಪನಿಯು ಎಟಿಯೋಸ್ ಆವೃತ್ತಿಗಳನ್ನು ಅಭಿವೃದ್ಧಿಪಡಿಸಿದೆ. ಕಂಪನಿಯು ಕಳೆದ ತಿಂಗಳು ಎಟಿಯೋಸ್ ಆವೃತ್ತಿಗಳನ್ನು ದಕ್ಷಿಣ ಆಫ್ರಿಕಾಕ್ಕೆ ರಪ್ತು ಮಾಡಲು ಆರಂಭಿಸಿದೆ.


Click it and Unblock the Notifications









