ಲಿಮಿಟೆಡ್ ಅಡಿಷನ್: ಟೊಯೊಟಾದಿಂದ ಎಟಿಯೋಸ್ ಟಿಆರ್‌ಡಿ ಸ್ಪೋರ್ಟಿವೊ ಬಿಡುಗಡೆ
ಎಟಿಯಾಸ್ ಲಿವಾ, ಕೊರೊಲ್ಲಾ ಅಲ್ಟಿಸ್ ಹಾಗೂ ಇನ್ನೋವಾ ಬಳಿಕವೀಗ ಟೊಯೊಟಾ ನೂತನ ಎಟಿಯೋಸ್ ಸೆಡಾನ್ ಆವೃತ್ತಿಯನ್ನು ರಸ್ತೆಗಿಳಿಸಿದೆ. ಲಿಮಿಟೆಡ್ ಅಡಿಷನ್‌ಗಳಲ್ಲಿ ಮಾತ್ರ ಲಭ್ಯವಿರುವ ಎಟಿಯೋಸ್ ಟಿಆರ್‌ಡಿ ಸ್ಪೋರ್ಟಿವ್ ಇತರ ಮಾದರಿಗಳಿಗಿಂತಲೂ ಹೆಚ್ಚು ಸ್ಪೋರ್ಟಿವ್ ಲುಕ್ ಹೊಂದಿದೆ.
ಪೆಟ್ರೋಲ್ ಎಂಜಿನ್ ಎಟಿಯೋಸ್ ಟಿಆರ್‌ಡಿ ಸ್ಪೋರ್ಟಿವೊ ದರ: 6,25,322 ರು.
ಡೀಸೆಲ್ ಎಂಜಿನ್ ಟಿಆರ್‌ಡಿ ಸ್ಪೋರ್ಟಿವೊ ದರ: 7,31,445 ರು.
(ದೆಹಲಿ ಎಕ್ಸ್-ಶೋರೂಂಗಳಲ್ಲಿ)
ಉಳಿದಂತೆ ಕಳೆದ ಜುಲೈನಲ್ಲಿ ಬಿಡುಗಡೆ ಮಾಡಿದ ಲಿಮಿಟೆಡ್ ಅಡಿಷನ್ ಸೆಡಾನ್ ಆವೃತ್ತಿಯಂತೆ ಇಟಿಯೋಸ್ ಲಿವಾ ಟಿಆರ್‌ಡಿ ಸ್ಪೋರ್ಟಿವ್ ಕೂಡಾ ಸಮಾನ ಫೀಚರ್ಸ್‌ಗಳನ್ನು ಹೊಂದಿದೆ. ಈ ನೂತನ ಆವೃತ್ತಿ ಮುಖಾಂತರ ಮುಂಬರುವ ವಾಹನ ಮೇಳದಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯಲು ಕಂಪನಿ ಗುರಿಯಿರಿಸಿಕೊಂಡಿದೆ.
ನೂತನ ಕಾರಿಗೆ ಜಪಾನ್ ವಾಹನ ತಯಾರಕರು ಕಾಸ್ಮೆಟಿಕ್ಸ್ ಟ್ವೀಕ್ ವೆರಿಯೆಂಟ್ ಬಳಸಿದ್ದು, ಸದ್ಯದಲ್ಲೇ ಫೋರ್ಚುನರ್ ಹಾಗೂ ಕಾಮ್ರಿ ಆವೃತ್ತಿಗಳನ್ನು ಸಹ ಬಿಡುಗಡೆ ಮಾಡಲಿವೆ. ನೂತನ ಎಟಿಯೋಸ್ ಸೆಡಾನ್ ಟಿಆರ್‌ಡಿ ಸ್ಪೋರ್ಟಿವೊ ಲಿಮಿಟೆಡ್ ಅಡಿಷನ್ ಕಾರುಗಳು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ.
ಪ್ರಮುಖವಾಗಿ ಯುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಹೊರತರಲಾಗಿದೆ. ನೂತನ ಕಾರಿನ ಬಂಪರ್ ಹಾಗೂ ಸೈಡ್ ಸ್ಕರ್ಟ್‌ಗಳನ್ನು ಟೊಯೊಟಾ ರೇಸಿಂಗ್ ಡೆವಲಪ್ ಮೆಂಟ್ ವಿಭಾಗವು (ಟಿಆರ್‌ಡಿ) ವಿನ್ಯಾಸಗೊಳಿಸಿದೆ.


Click it and Unblock the Notifications









