ಉದಯಪುರ ಮಹಾರಾಜರ ರೋಲ್ಸ್ ರಾಯ್ಸ್ ಕಾರಿಗೆ ಬಹುಮಾನ

ವಾಷಿಂಗ್ಟನ್, ಆ 22: ಕ್ಯಾಲಿಫೋರ್ನಿಯಾದ ಪೆಬ್ಲಿ ಬೀಚಿನಲ್ಲಿ ಐದು ದಿನಗಳ ನಡೆದ ಪ್ರತಿಷ್ಠಿತ ವಿಂಟೇಜ್ ಕಾರುಗಳ ಪ್ರದರ್ಶನದಲ್ಲಿ ದೇಶದ ಮಹಾರಾಜರೊಬ್ಬರು ಬಳಸಿದ್ದ ರೋಲ್ಸ್ ರಾಯ್ಸ್ ಕಾರೊಂದು ಲ್ಯೂಸಿಯಸ್ ಬಿಬಿ ಟ್ರೋಪಿ ಗೆದ್ದಿದೆ. ಪೆಬ್ಲಿ ಬೀಚಿನಲ್ಲಿ ಪ್ರತಿಷ್ಠಿತ ಲ್ಯೂಸಿಯಸ್ ಬಿಬಿ ಟ್ರೋಪಿ ಗೆದ್ದ ದೇಶದ ಮೊದಲ ಕಾರೆಂಬ ಹೆಮ್ಮೆಗೂ ಇದು ಪಾತ್ರವಾಗಿದೆ.

ಉದಯಪುರ ಮಹಾರಾಜ ಅರವಿಂದ್ ಸಿಂಗ್ ಮೆವಾರ್ ಬಳಿಯಿದ್ದ 1924ರ ವಿಂಟೇಜ್ ಕಾರು ರೋಲ್ಸ್ ರಾಯ್ಸ್ ಗೆ ಈ ಟ್ರೋಪಿ ದೊರಕಿದೆ. ಈ ಕಾರಿನ ಪೂರ್ತಿ ಹೆಸರು 1924 ರೋಲ್ಸ್ ರಾಯ್ಸ್ 20 ಎಚ್ ಪಿ ಬಾರ್ಕರ್ ಟೂರರ್. ಕ್ಯಾಲಿಫೋರ್ನಿಯಾದ ಪೆಡಲ್ ಬೀಚಿನಲ್ಲಿ ಐದು ದಿನಗಳ ಕಾಲ ನಡೆದ ಪ್ರದರ್ಶನದಲ್ಲಿ ಜಗತ್ತಿನ ನೂರಾರು ಪ್ರಮುಖ ವಿಂಟೇಜ್ ಬ್ಯೂಟಿಗಳು ಭಾಗವಹಿಸಿದ್ದವು.

ರೋಲ್ಸ್ ರಾಯ್ಸ್ ಜಿಎಲ್ಕೆ 21 ಕಾರು ಹಲವು ವರ್ಷಗಳ ಕಾಲ ಉದಯಪುರ ಅರಮನೆಯ ಜೆನಾನಾ ಮೆಹಲ್ಲಿನಲ್ಲಿ ತುಕ್ಕುಹಿಡಿಯುತ್ತಿತ್ತು. ಇದನ್ನು ಅರವಿಂದ್ ಸಿಂಗ್ ಮರುನಿರ್ಮಾಣ ಮಾಡಿದ್ದಾರೆ. ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮೆವಾರ್ 194 ಪುಟಗಳ ಪುಸ್ತಕವೊಂದನ್ನು ಅನಾವರಣ ಮಾಡಿದ್ದಾರೆ. ಈ ಪುಸ್ತಕದಲ್ಲಿ ಉದಯಪುರದ ರೋಲ್ಸ್ ರಾಯ್ಸ್ ಕಾರು ಮತ್ತು ಅದಕ್ಕೆ ಸಂಬಂಧಿಸಿದ ಇತಿಹಾಸದ ಘಟನೆಗಳ ವಿವರಣೆಗಳು ಇವೆ.

"ಭಾರತದ ರಾಜಮಹಾರಾಜರುಗಳಿಗೆ ರೋಲ್ಸ್ ರಾಯ್ಸ್ ಕಾರುಗಳು ಅಚ್ಚುಮೆಚ್ಚು. ವಿಹಾರಕ್ಕೆ, ಭೇಟೆಗೆ ಹೋಗುವ ಸಂದರ್ಭದಲ್ಲಿ ರಾಜರು ಪರಿವಾರ ಸಮೇತ ಇಂತಹ ಅದ್ದೂರಿ ಕಾರುಗಳನ್ನು ಬಳಸುತ್ತಿದ್ದರು" ಎಂದು ಅರವಿಂದ್ ಸಿಂಗ್ ಮೆವಾರ್ ಹೇಳಿದ್ದಾರೆ.

ಇಂತಹ ಅದ್ದೂರಿ ಕಾರು ಸಂಗ್ರಹಕ್ಕೆ ಮೈಸೂರು ಅರಮನೆ ಕೂಡ ಜನಪ್ರಿಯವಾಗಿದೆ. 1902ರಿಂದ 1940ರವರೆಗೆ ಮೈಸೂರಿನಲ್ಲಿ ಆಳ್ವಿಕೆ ನಡೆಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಕೂಡ ಅಪ್ಪಟ ಕಾರುಪ್ರೇಮಿಯಾಗಿದ್ದರು. ಅವರಲ್ಲಿ ರೋಲ್ಸ್ ರಾಯ್ಸ್ ಸಿಲ್ವರ್ ಘೋಸ್ಟ್ ಸೇರಿದಂತೆ ಹಲವು ಕಾರುಗಳಿತ್ತು. ಈಗಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಗೂ ಅದ್ದೂರಿ ಕಾರುಗಳೆಂದರೆ ಅಚ್ಚುಮೆಚ್ಚು.(ಓದಿ: ಮೈಸೂರು ರಾಜರ ಕಾರು)

ಅಮೆರಿಕ ಪ್ರತಿಷ್ಠಿತ ವಿಂಟೇಜ್ ಕಾರು ಹಬ್ಬಕ್ಕೆ ಬೆಂಗಳೂರಿನಿಂದಲೂ ವಿಂಟೇಜ್ ಕಾರುಗಳು ಹೋಗಿದ್ದವು. 180ಕ್ಕೂ ಹೆಚ್ಚು ವಿಂಟೇಜ್ ಕಾರುಗಳ ಸಂಗ್ರಹ ಹೊಂದಿರುವ ಬೆಂಗಳೂರಿನ ಡಾಕ್ಟರ್ ರವಿಪ್ರಕಾಶ್ ಅಮೆರಿಕ ಹಬ್ಬದಲ್ಲಿ ತನ್ನೆರಡು ವಿಂಟೇಜ್ ಕಾರುಗಳಾದ 1930ರ ಡೆಲಾಗ್ ಡಿ 8 ಮತ್ತು 1907ರ ಲೊಕೊಮೊಬೈಲ್ ವೆಟರ್ನ್ ಕಾರುಗಳನ್ನು ಪ್ರದರ್ಶಿಸಿದ್ದರು.

More from DriveSpark

Article Published On: Wednesday, August 22, 2012, 10:54 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+