ಮಾರುತಿ ವಾಸ್ತು; ದೈವಜ್ಞ ಸೋಮಯಾಜಿ ಪೌರೋಹಿತ್ಯ

ಬೆಂಗಳೂರು, ಜು 31: ಮಾನೆಸರ್ ಘಟಕದ ವಾಸ್ತು ಸರಿಪಡಿಸಿಕೊಡುವಂತೆ ದೇಶದ ಬೃಹತ್ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಬೆಂಗಳೂರು ವೈದಿಕ ಜ್ಯೋತಿಷ್ಯರ ಮೊರೆಹೋಗಿದೆ. ದೈವಜ್ಞ ಸೋಮಯಾಜಿ ನೇತೃತ್ವದಲ್ಲಿ ಮಾನೆಸರ್ ಘಟಕದ ವಾಸ್ತು ಸರಿಪಡಿಸುವ ಕೆಲಸ ಶೀಘ್ರದಲ್ಲಿ ಆರಂಭವಾಗಲಿದೆ.

ಕಾರು ಕಂಪನಿಯು ಘಟಕದ ವಾಸ್ತು ಸರಿಪಡಿಸಲು ಆಮಂತ್ರಿಸಿರುವುದನ್ನು ದೈವಜ್ಞ ಸೋಮಯಾಜಿ ಖಚಿತಪಡಿಸಿದ್ದಾರೆ. " ಘಟಕದಲ್ಲಿ ಆರಂಭವಾದ ಬಾಧೆಗಳು ಉಳಿದ ಘಟಕಗಳಿಗೆ ಹಬ್ಬುವ ಮುನ್ನ ವಾಸ್ತು ಸರಿಪಡಿಸುವುದು ಸೂಕ್ತ. ಇದನ್ನು ಮಾರುತಿ ಅಧಿಕಾರಿಗಳಿಗೆ ತಿಳಿಸಿಹೇಳಿದ್ದೇನೆ" ಎಂದು ಸೋಮಯಾಜಿ ಹೇಳಿದ್ದಾರೆ.

ಸೋಮಯಾಜಿ ಭಾನುವಾರವೇ ವಾಸ್ತು ಸರಿಪಡಿಸುವ ಕೈಂಕರ್ಯ ಆರಂಭಿಸಿದ್ದಾರೆ ಎಂದು ಕೆಲವು ವರದಿಗಳು ಹೇಳಿವೆ. ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಮಾರುತಿ ಸುಜುಕಿ ನಿರಾಕರಿಸಿದೆ. ಮಾರುತಿ ಸುಜುಕಿ ಘಟಕದಲ್ಲಿನ ದುಷ್ಟಶಕ್ತಿ ಹೊರಹಾಕುವ ಕೆಲಸಕ್ಕೆ ಎಷ್ಟು ಸಮಯ ಬೇಕಿದೆ ಎಂದು ಸ್ಪಷ್ಟವಾಗಿಲ್ಲ.

ಮಾರುತಿ ಮಾನೆಸರ್ ಘಟಕದ ಭೂಮಿಯು ಈ ಹಿಂದೆ ಸ್ಮಶಾನ ಪ್ರದೇಶವಾಗಿತ್ತು ಎಂದು ಹೇಳಲಾಗಿದೆ. ಇದೇ ಸ್ಥಳದಲ್ಲಿ ಮೂರು ದೇವಸ್ಥಾನಗಳು ಕೂಡ ಇದ್ದವಂತೆ. ಸ್ಮಶಾನದ ಮೇಲೆಯೇ ಘಟಕ ನಿರ್ಮಿಸಿರುವುದು ಮಾರುತಿ ಸುಜುಕಿಗೆ ಪೀಡೆ ಉಂಟುಮಾಡುತ್ತಿದೆಯಂತೆ ಎಂಬೆಲ್ಲ ಅಂತೆಕಂತೆಗಳು ಈಗ ಮರುಜೀವ ಪಡೆದಿವೆ.

ಕೆಲವು ವರ್ಷಗಳ ಹಿಂದೆ ಮಾನೆಸರ್ ನಲ್ಲಿ ಕಂಪನಿಯು ಎ, ಬಿ ಮತ್ತು ಸಿ ಎಂಬ ಮೂರು ಘಟಕಗಳನ್ನು ಸ್ಥಾಪಿಸಿತ್ತು. ಇದರಲ್ಲಿ ಎ ಘಟಕ ಉತ್ತಮವಾಗಿದ್ದು, ಕಂಪನಿಗೆ ಆದಾಯ ತಂದುಕೊಡುತ್ತಿದೆ. ಆದರೆ ಬಿ ಘಟಕದಲ್ಲಿ ನೌಕರರ ಪ್ರತಿಭಟನೆ, ಗಲಭೆ, ಉತ್ಪಾದನೆ ಹಿನ್ನಡೆ ಇತ್ಯಾದಿ ಸಮಸ್ಯೆಗಳು ಕಂಡುಬರುತ್ತಿವೆ.

ವಾಸ್ತು ಪೂಜೆಯ ಕುರಿತು ಕಂಪನಿಯ ಮುಖ್ಯಸ್ಥ ಶಿಂಝೊ ನಕನಿಶಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಿಮ್ಮ ಕಾರುಗಳ ಬಣ್ಣಕ್ಕೆ ಅನುಗುಣವಾಗಿ ಭವಿಷ್ಯ ತಿಳಿದುಕೊಳ್ಳಬೇಕೆ. ಈ ಲೇಖನ ಓದಿ.

ವಾಸ್ತು ಸರಿಪಡಿಸಿಕೊಳ್ಳುವಂತಹ ಸಮಸ್ಯೆ ಮಾರುತಿಗ್ಯಾಕೆ?

More from DriveSpark

Article Published On: Tuesday, July 31, 2012, 11:38 [IST]
English summary
Maruti Suzuki is seeking help from Bangalore based Vaastu expert Deivajna K N Somayaji to help sort any Vaastu issues in the Manesar plant. He is planning to visit the Manesar plant and conductive extensive poojas to remove any negative energy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+