ಸಣ್ಣಕಾರಿನಿಂದ ಬ್ರಾಂಡ್ ಪ್ರತಿಷ್ಠೆಗೆ ಪೆಟ್ಟು: ಫೋಕ್ಸ್
ಮಾರುತಿ ಸುಜುಕಿ, ಹ್ಯುಂಡೈ, ಟಾಟಾ ಮತ್ತು ಷೆವರ್ಲೆ ಸಣ್ಣಕಾರುಗಳೊಂದಿಗೆ ದೇಶದಲ್ಲಿ ಪೈಪೋಟಿ ನಡೆಸುವ ಯೋಜನೆಯನ್ನು ವಿಶ್ವದ ಬೃಹತ್ ಕಾರು ತಯಾರಿಕಾ ಕಂಪನಿ ಫೋಕ್ಸ್ ವ್ಯಾಗನ್ ಮುಂದೂಡಿದೆ. ಕಂಪನಿಯ ಬ್ರಾಂಡ್ ಇಮೇಜಿಗೆ ಹಾನಿಯಾಗುವ ಸಾಧ್ಯತೆಯಿರುವ ಹಿನ್ನಲೆಯಲ್ಲಿ ಸದ್ಯ ಸಣ್ಣಕಾರು ಯೋಜನೆಯಿಂದ ಹಿಂದೆ ಸರಿದಿದೆ.
ಇದರಿಂದಾಗಿ ಫೋಕ್ಸ್ ವ್ಯಾಗನ್ ಸಹ ಸಂಸ್ಥೆ ಸ್ಕೋಡಾ ಕಂಪನಿಯ ಹ್ಯಾಚ್ ಬ್ಯಾಕ್ ಶೀಘ್ರದಲ್ಲಿ ಆಗಮಿಸುವ ನಿರೀಕ್ಷೆ ಠುಸ್ಸಾಗಿದೆ. ಫಾಬಿಯಾಕ್ಕಿಂತ ಸಣ್ಣಕಾರೊಂದನ್ನು ಪರಿಚಯಿಸಲು ಕಂಪನಿ ಯೋಜಿಸಿದೆ. ಈ ಯೋಜನೆ ಸುಮಾರು ಮೂರು ವರ್ಷದಷ್ಟು ಮುಂದೂಡಲ್ಪಟ್ಟಿದೆ.
ಬಹುನಿರೀಕ್ಷಿತ ಫೋಕ್ಸ್ ವ್ಯಾಗನ್ ಅಪ್ ಎಂಬ ಸಣ್ಣಕಾರು ರಸ್ತೆಗಿಳಿಯುವುದು ಕೂಡ ಸಂದೇಹ ಎನ್ನಲಾಗಿದೆ. ಸದ್ಯ ದೇಶದಲ್ಲಿ ಫೋಕ್ಸ್ ವ್ಯಾಗನ್ ಪೊಲೊ ಮತ್ತು ಸ್ಕೋಡಾ ಫಾಬಿಯಾ ಕಾರು ಜನಪ್ರಿಯತೆ ಪಡೆದಿದೆ. ಇವೆರಡು ಕಾರುಗಳ ಎಕ್ಸ್ ಶೋರೂಂ ದರ ಕ್ರಮವಾಗಿ 4.7 ಲಕ್ಷ ರು. ಮತ್ತು 4.65 ಲಕ್ಷ ರು. ಆಸುಪಾಸಿನಲ್ಲಿದೆ. (ಕನ್ನಡ ಡ್ರೈವ್ ಸ್ಪಾರ್ಕ್ )


Click it and Unblock the Notifications









