ಬಜೆಟ್ ಮುಂಚಿನ ದರದಲ್ಲೇ ಕಾರು ಬೈಕ್ ಖರೀದಿಸಿ

2012-13ನೇ ಸಾಲಿನ ಬಜೆಟಿನಲ್ಲಿ ಕಾರುಗಳಿಗೆ ಅಬಕಾರಿ ಸುಂಕ ಹೆಚ್ಚಾಗಿದೆ. ಕಾರು ಕಂಪನಿಗಳು ತಾ ಮುಂದು, ತಾ ಮುಂದು ಎನ್ನುತ ದರ ಹೆಚ್ಚಳ ಪ್ರಕಟಿಸುತ್ತಿವೆ. ಕಾರು ಖರೀದಿ ಕನಸಿನಲ್ಲಿದ್ದವರೆಲ್ಲ ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.

ಆದರೆ ನಿಮಗೊಂದು ಸಂತೋಷದ ಸುದ್ದಿಯಿಂದೆ. ಬಜೆಟಿಗಿಂತ ಮೊದಲಿದ್ದ ದರಕ್ಕೆ ನೀವು ಕಾರು ಅಥವಾ ಬೈಕು ಖರೀದಿಸಬಹುದಾಗಿದೆ. ನೀವು ಬಜೆಟಿಗಿಂತ ಮುನ್ನವೇ ವಾಹನ ಬುಕ್ ಮಾಡಿದ್ದರೆ ಅಥವಾ ಡೀಲರು ಹಳೆಯ ಸ್ಟಾಕ್ ಮಾರಾಟ ಮಾಡುತ್ತಿದ್ದರೆ ನಿಮಗೆ ಹಿಂದಿನ ದರಕ್ಕೆ ಕಾರು ಅಥವಾ ಬೈಕ್ ದೊರಕಲಿದೆ.

ಮಾರ್ಚ್ ಹದಿನಾರರ ನಂತರ ಪೂರೈಕೆ ಮಾಡಿದ ವಾಹನಗಳಿಗೆ ಮಾತ್ರ ದರ ಹೆಚ್ಚಿಸಲಾಗುವುದು ಎಂದು ಕಾರು ಕಂಪನಿಗಳು ಹೇಳಿವೆ. ತಿಂಗಳ ಮಧ್ಯೆ ಬಜೆಟ್ ಬಂದ ಕಾರಣ ಡೀಲರುಗಳ ಗೋಡಾನಿನಲ್ಲಿ ಹಳೆಯ ಸ್ಟಾಕ್ ಇದ್ದೇ ಇರುತ್ತದೆ. ಹೀಗಾಗಿ ಹಳೆಯ ದರಕ್ಕೆ ಖರೀದಿಸಬಹುದು.

ಆದರೆ ಕೆಲವು ಡೀಲರುಗಳಲ್ಲಿ ಓಲ್ಡ್ ಸ್ಟಾಕ್ ಇರುವುದಿಲ್ಲ. ಅವರಿಂದ ಹೊಸ ದರಕ್ಕೆ ಖರೀದಿಸುವುದು ಅನಿವಾರ್ಯ. ಹಳೆಯ ಸ್ಟಾಕ್ ಗಳಿಗೆ ದರ ಹೆಚ್ಚಳವಿಲ್ಲವೆಂದು ಹ್ಯುಂಡೈ, ಮಹೀಂದ್ರ ಆಂಡ್ ಮಹೀಂದ್ರ ಮುಂತಾದ ಕಂಪನಿಗಳು ಅಧಿಕೃತವಾಗಿಯೇ ತಿಳಿಸಿವೆ.

ಕೆಲವು ಡೀಲರುಗಳು ಹಳೆಯ ಸ್ಟಾಕ್ ಹೊಂದಿದ್ದರೂ ಹೊಸ ದರಕ್ಕೆ ಮಾರಾಟ ಮಾಡುವ ಸಾಧ್ಯತೆಯಿದೆ. ಯಾವುದಕ್ಕೂ ಕೊಂಚ ಬಾರ್ಗೈನ್ ಮಾಡಲು ಮರೆಯದಿರಿ ಎನ್ನುವುದು ಕನ್ನಡ ಡ್ರೈವ್ ಸ್ಪಾರ್ಕ್ ಕಿವಿಮಾತು.

More from DriveSpark

Article Published On: Tuesday, March 20, 2012, 11:41 [IST]
English summary
People can still buy cars at pre-budget prices if they are buying old stock models that have been dispatched before the budget was presented. People need to ask dealers for a lower price before purchasing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+