ಡ್ಯಾಡಿ-ಮಮ್ಮಿ ಶಾಪಿಂಗ್ ಮೋಜಿಗೆ 2ರ ಬಾಲಕಿ ಬಲಿ
ಬಹುತೇಕ ಹೆತ್ತವರು ತಮ್ಮ ಮಕ್ಕಳನ್ನು ಶಾಪಿಂಗ್ ಮುಂತಾದ ಜನನಿಬಿಡ ಪ್ರದೇಶಗಳಿಗೆ ಕೊಂಡೊಯ್ಯಲು ಬಯಸುವುದಿಲ್ಲ. ಅದರಲ್ಲೂ ವಿಶೇಷವಾಗಿಯೂ ಎಲೆ ಕೂಸುಗಳನ್ನು ಮನೆಯಲ್ಲೇ ಹಿರಿಯರ ಬಳಿ ಬಿಟ್ಟು ಶಾಪಿಂಗ್ ಹೋಗಲು ಇಚ್ಛಿಸುತ್ತಾರೆ.
ಆದರೆ ಇಲ್ಲೊಂದು ದುರಂತ ಘಟನೆ ಸಂಭವಿಸಿದ್ದು, ಶಾಪಿಂಗ್‌ಗೆ ಕರೆದುಕೊಂಡು ಹೋದ ಮಗಳನ್ನು ಒಂದು ತಾಸುಗಳಷ್ಟು ಹೊತ್ತು ಕಾರಿನಲ್ಲೇ ಲಾಕ್ ಮಾಡಿದ್ದರಿಂದ ಬಾಲಕಿ ಮೃತಪಟ್ಟಿರುವ ದುರಂತ ವಾರ್ತೆ ರಾಮಘರದಿಂದ ವರದಿಯಾಗಿದೆ.
ಶಾಪಿಂಗ್‌ಗೆ ತೆರಳಿದ ಹೆತ್ತವರು 2ರ ಹರೆಯದ ಬಾಲಕಿಯನ್ನು ಕಾರಿನಲ್ಲೇ ಒಂದು ತಾಸುಗಳಷ್ಟು ಹೊತ್ತು ಕೂರಿಸಿದ್ದರು. ಕಾರಿನ ಎಲ್ಲ ಬಾಗಿಲನ್ನು ಮುಚ್ಚಿದ್ದರಿಂದ ಉಸಿರಾಟದ ತೊಂದರ ಅನುಭವಿಸಿದ ಮಗು ಅಸುನೀಗಿತ್ತು.
ಬಳಿಕ ಶಾಪಿಂಗ್ ಮಜಾ ಉಡಾಯಿಸಿದ್ದ ತಂದೆ-ತಾಯಿ ಹಿಂತಿರುಗಿದ್ದ ವೇಳೆ ಮಗು ಒದ್ದಾಡುವ ಪರಿಸ್ಥಿತಿಯಲ್ಲಿತ್ತು. ತಕ್ಷಣವೇ ಮಗಳನ್ನು ಆಸ್ಪತ್ರೆಗೆ ಸಾಗಿಸಿತ್ತಾದರೂ ಯಾವುದೇ ಪ್ರಯೋಜನವುಂಟಾಗಲಿಲ್ಲ. ಪ್ರತ್ಯಕ್ಷ ದರ್ಶಿಗಳ ಪ್ರಕಾರ ಕಾರಿನಲ್ಲಿ ಮೂವರು ಮಕ್ಕಳಿದ್ದು, ಈ ಪೈಕಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.


Click it and Unblock the Notifications









