ದೆಹಲಿಗೆ ಫಿಯೆಟ್ ಆಗಮನ ಗ್ಯಾರಂಟಿ
ಮುಂದಿನ ವರ್ಷದ ದೆಹಲಿ ಆಟೋ ಎಕ್ಸ್‌ಪೋ ಇಟಲಿ ಮೂಲದ ಪುರಾತನ ಕಾರು ಕಂಪನಿಗಳಲ್ಲಿ ಒಂದಾದ ಫಿಯೆಟ್ ಪಾಲಿಗೆ ನಿರ್ಣಾಯಕೆನಿಸಲಿದೆ. ಯಾಕೆಂದರೆ ಇದೇ ಆಟೋ ಎಕ್ಸ್‌ಪೋದಲ್ಲಿ ಫಿಯೆಟ್ ಬಹುನಿರೀಕ್ಷಿತ 2014 ಲಿನಿಯಾ ಫೇಸ್‌ಲಿಫ್ಟ್ ವರ್ಷನ್ ಅನಾವರಣಗೊಳ್ಳಲಿದೆ. ಇದು ದೇಶದ ಗ್ರಾಹಕರನ್ನು ಆಕರ್ಷಿಸುವಲ್ಲಿ ಎಷ್ಟರ ಮಟ್ಟಿಗೆ ಯಶ ಸಾಧಿಸಲಿದೆ ಎಂಬುದು ಕುತೂಹಲವೆನಿಸಿದೆ.
ವಾಹನೋದ್ಯಮದ ಕ್ಷಣಕ್ಷಣದ ರೋಚಕ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡಿರಿ
ನಿಮ್ಮ ಮಾಹಿತಿಗಾಗಿ, ಎಂಟು ವರ್ಷಗಳ ಹಿಂದೆ ಫಿಯೆಟ್ ಲಿನಿಯಾ ಸಲೂನ್ ಕಾರು ಭಾರತ ಮಾರುಕಟ್ಟೆ ಪ್ರವೇಶಿಸಿತ್ತು. ತದಾ ಬಳಿಕ ಒಂದೇ ಒಂದು ಫೇಸ್‌ಲಿಫ್ಟ್ ವರ್ಷನ್ ಕೂಡಾ ಲಾಂಚ್ ಆಗಿರಲಿಲ್ಲ.

ಜಾಗತಿಕ ಮಾರುಕಟ್ಟೆಯಲ್ಲಿ ಅಪ್‌ಡೇಟಡ್ ವರ್ಷನ್ ಬಿಡುಗಡೆಯಾಗುತ್ತಿರುವ ಹೊರತಾಗಿಯೂ ಭಾರತದಲ್ಲಿ ಮಾತ್ರ ಯಾವುದೇ ಸ್ಪೆಷಲ್ ಎಡಿಷನ್‌ಗಳ ಎಂಟ್ರಿಯಾಗಿರಲಿಲ್ಲ. ಈ ನಿಟ್ಟಿನಲ್ಲಿ 2014 ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋ ಫಿಯೆಟ್ ಪಾಲಿಗೆ ನಿರ್ಣಾಯಕವೆನಿಸಲಿದೆ.
ಅಂದ ಹಾಗೆ ನೂತನ ಫಿಯೆಟ್ ಲಿನಿಯಾ ಎನೆಲ್ಲ ವೈಶಿಷ್ಟ್ಯಗಳನ್ನು ಪಡೆದುಕೊಳ್ಳುಲಿದೆ ಎಂಬುದಕ್ಕೆ ಸಂಬಂಧಪಟ್ಟಂತೆ ನಿಖರ ಮಾಹಿತಿಗಳು ಲಭ್ಯವಾಗಿಲ್ಲ. ಹಾಗಿದ್ದರೂ ವಿನ್ಯಾಸದಲ್ಲಿ ಬದಲಾವಣೆ ಕಂಡುಬರಲಿದೆ ಎಂಬುದು ತಿಳಿದು ಬಂದಿದೆ.
ಒಟ್ಟಿನಲ್ಲಿ ಸದ್ಯ ಚಾಲ್ತಿಯಲ್ಲಿರುವ ಆವೃತ್ತಿಗಿಂತಲೂ ಹೆಚ್ಚು ಪ್ರೀಮಿಯಂ ವೈಶಿಷ್ಟ್ಯಗಳನ್ನು ನೂತನ ಫಿಯೆಟ್ ಲಿನಿಯಾ ಪಡೆದುಕೊಳ್ಳಲಿದೆ. ಅಂದ ಹಾಗೆ ಮುಂದಿನ ಮೂರು ವರ್ಷಗಳಲ್ಲಿ ಅಬರ್ತ್ ಹ್ಯಾಚ್‌ಬ್ಯಾಕ್ ಸೇರಿದಂತೆ ಎಂಟು ನೂತನ ಮಾದರಿಗಳನ್ನು ದೇಶಕ್ಕೆ ಪರಿಚಯಿಸಲು ಫಿಯೆಟ್ ಯೋಜನೆ ಹೊಂದಿದೆ.


Click it and Unblock the Notifications








