ಬಸ್ ದರ ಏರಿಕೆ; ಪ್ರಯಾಣಿಕರ ಗೋಳು ಕೇಳುವವರು ಯಾರು?

Posted By:

ದಿನಬಳಕೆಯ ಅಗತ್ಯ ಸಾಮಾನುಗಳ ಬೆಲೆಯೇರಿಕೆಯಿಂದಾಗಿ ಕಂಗೆಟ್ಟು ಹೋಗಿರುವ ಜನಸಾಮಾನ್ಯರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರಯಾಣ ದರ ಏರಿಕೆ ಮಾಡುವ ಮೂಲಕ ಮತ್ತೊಂದು ಆಘಾತ ನೀಡಿದೆ.

ಎರಡೂ ಸಂಸ್ಥೆಗಳ ಏಕಕಾಲದಲ್ಲಿ ದರ ಏರಿಕೆ ಮಾಡಿರುವುದು ಜನರಲ್ಲಿ ಬೇಸರದ ಜತೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಕೆಎಸ್‌ಆರ್‌ಟಿಸಿಯು ವೇಗದೂತ ಮತ್ತು ರಾಜಹಂಸ ಪ್ರಯಾಣ ದರವನ್ನು ಶೇ. 10.50ರಷ್ಟು ಹೆಚ್ಚಳ ಮಾಡಿದ್ದರೆ ಬಿಎಂಟಿಸಿ ಸಾಮಾನ್ಯ ಬಸ್ ಟಿಕೆಟ್ ದರವನ್ನು ಶೇಕಡಾ 16ರಷ್ಟು ಹೆಚ್ಚಳಗೊಳಿಸಿತ್ತು.

ಪರಿಷ್ಕೃತ ದರ ಶನಿವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಅಷ್ಟಕ್ಕೂ ದರ ಏರಿಕೆಗೆ ಸಂಸ್ಥೆಗಳು ನೀಡುತ್ತಿರುವ ಕಾರಣವಾದರೂ ಏನು? ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

ದರ ಏರಿಕೆ ಅನಿವಾರ್ಯ

ಡೀಸೆಲ್ ದರ ಏರಿಕೆ ಹಾಗೂ ನಿರ್ವಹಣ ವೆಚ್ಚ ಹೆಚ್ಚಳದ ಕಾರಣ ದರ ಏರಿಕೆಗೊಳಿಸುವುದು ಅನಿವಾರ್ಯ. ಸಾರಿಗೆ ನಿಗಮಗಳಿಂದ ರಾಜ್ಯ ಸರ್ಕಾರಕ್ಕೆ ಸಬ್ಸಿಡಿ ದೊರಕುತ್ತಿಲ್ಲ. ಈ ಹಿನ್ನಲೆಯಲ್ಲಿ ನಿಗಮಕ್ಕೆ ಉಂಟಾಗುತ್ತಿರುವ ಆರ್ಥಿಕ ಹೊರೆ ಸರಿದೂಗಿಸಲು ಪ್ರಯಾಣ ದರ ಏರಿಕೆ ಅನಿವಾರ್ಯ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ಪ್ರಯಾಣಿಕರ ಗೋಳು ಕೇಳುವವರು ಯಾರು?

ಬಿಎಂಟಿಸಿ ಕೆಲವು ದಿನಗಳ ಹಿಂದೆಯಷ್ಟೇ ಮಾಸಿಕ ಹಾಗೂ ದೈನಂದಿನ ಪಾಸುಗಳ ದರಗಳನ್ನು ಹೆಚ್ಚಳಗೊಳಿಸಿತ್ತು. ಇದರ ಬೆನ್ನಲ್ಲೇ ಸಾಮಾನ್ಯ ಬಸ್‌ಗಳ ಪ್ರಯಾಣ ದರದಲ್ಲಿ ಶೇ. 16ರಷ್ಟು ಹೆಚ್ಚಳ ಗೊಳಿಸಿದೆ.

222.68 ಕೋಟಿ ರು. ಹೊರೆ

ಕಳೆದ ಆರು ತಿಂಗಳಲ್ಲಿ ಡೀಸೆಲ್ ದರ ಐದು ಬಾರಿ ಏರಿಕೆಗೊಂಡಿದೆ. ಕೆಎಸ್‌ಆರ್‌ಟಿಸಿಗೆ ವರ್ಷಂಪ್ರತಿ 120.10 ಕೋಟಿ ಹೊರೆಯಾಗುತ್ತಿದೆ. ನಿಗಮದ ನೌಕರರ ತುಟ್ಟಿಭತ್ಯೆ ಕೂಡಾ ಪರಿಷ್ಕರಿಸಲಾಗಿದೆ. ಇದರಿಂದ ರು. 102.58 ಕೋಟಿ ಹೆಚ್ಚು ಹೊರೆಯಾಗುತ್ತಿದೆ. ಒಟ್ಟಾರೆಯಾಗಿ ಡೀಸೆರ್ ದರ ಹೆಚ್ಚಳ ಹಾಗೂ ಸಿಬ್ಬಂದಿಯ ವೇತನ ಪರಿಷ್ಕರಣೆಯಿಂದ ಸಂಸ್ಥೆಗೆ ವಾರ್ಷಿಕ 222.68 ಕೋಟಿ ರು. ಹೆಚ್ಚು ಹೊರೆಯಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಸಮರ್ಥಿಸಿಕೊಂಡಿದೆ.

ವಿದ್ಯಾರ್ಥಿ ರಿಯಾಯಿತಿ ದರಗಳಲ್ಲಿ ಹೆಚ್ಚಳವಿಲ್ಲ

ಕನಿಷ್ಠ ಪಕ್ಷ ವಿದ್ಯಾರ್ಥಿ ರಿಯಾಯಿತಿ ದರಗಳಲ್ಲಿ ಹೆಚ್ಚಳ ಮಾಡದಿರುವುದು ಸಮಾಧಾನಕರ ಅಂಶವಾಗಿದೆ. ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

ನಿಮ್ಮ ಊರಿಗೆ ಪರಿಷ್ಕೃತ ಪ್ರಯಾಣ ದರವೆಷ್ಟು?

ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿರಿ

English summary
KSRTC And BMTC has given shock to passengers by hiking bus charges by 10.5 & 16 percent respectively, in the wake of continuous price hike of diesel.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark