ರುಪಾಯಿ ಮೌಲ್ಯ ಕುಸಿತ; ಕಾರು ದರ ಏರಿಕೆ ಸಾಧ್ಯತೆ?
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರುಪಾಯಿ ಮೌಲ್ಯ ಸತತವಾಗಿ ಕುಸಿಯುತ್ತಿರುವ ಹಿನ್ನಲೆಯಲ್ಲಿ ಇದು ಕಾರು ಮಾರುಕಟ್ಟೆಯನ್ನು ವ್ಯತಿರಿಕ್ತವಾಗಿ ಬಾಧಿಸುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಕಾರುಗಳ ದರಗಳಲ್ಲೂ ಏರಿಕೆ ಕಂಡುಬರುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.
ಟೊಯೊಟಾ ಹಾಗೂ ಜನರಲ್ ಮೋಟಾರ್ಸ್‌ಗಳಂತಹ ಆಟೋ ಕಂಪನಿಗಳು ರುಪಾಯಿ ಕುಸಿತವನ್ನು ಗಂಭೀರವಾಗಿ ಪರಿಗಣಿಸಿದ್ದು, ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದೆ. ಶೇಕಡಾ 50ರಷ್ಟು ಬಿಡಿಭಾಗಗಳು ವಿದೇಶದಿಂದ ಆಮದಾಗುವುದರಿಂದ ರುಪಾಯಿ ಮೌಲ್ಯ ಕುಸಿತದಿಂದ ದೊಡ್ಡ ಹೊಡೆತ ಬೀಳಲಿದೆ. ಹಾಗಾಗಿ ಕಾರು ಕಂಪನಿಗಳು ಚಿಂತನೆಯಲ್ಲಿ ತೊಡಗಿವೆ.
ಈ ನಡುವೆ ಸಿಟಿ, ಬ್ರಿಯೊ ಹಾಗೂ ಅಕಾರ್ಡ್ ಆವೃತ್ತಿಗಳಿಗೆ ಎಪ್ರಿಲ್ 1ರಿಂದ ಅನ್ವಯವಾಗುವ ರೀತಿಯಲ್ಲಿಯೇ ದರ ಏರಿಕೆ ಮಾಡಲಾಗಿದೆ ಎಂದು ಹೋಂಡಾ ಕಾರ್ಸ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ. ಅಷ್ಟೇ ಯಾಕೆ ಜನಪ್ರಿಯ ಅಮೇಜ್ ಹಾಗೂ ಸಿಆರ್‌ವಿ ದರವನ್ನು ಕೂಡಾ ಏರಿಕೆಗೊಳಿಸಲಾಗಿತ್ತು.
ಒಟ್ಟಾರೆಯಾಗಿ ಮಾರಾಟ ಕುಸಿದಿರುವ ಈ ಹಂತದಲ್ಲಿ ದರ ಹೆಚ್ಚಳಗೊಳಿಸಲು ಮಾರುತಿ ಸುಜುಕಿ ಹಾಗೂ ಹ್ಯುಂಡೈಗಳಂತಹ ಅಗ್ರಪಂಕ್ತಿಯಲ್ಲಿರುವ ಕಂಪನಿಗಳು ಹಿಂದೇಟು ಹಾಕುತ್ತಿವೆ. ಹಾಗಿದ್ದರೂ ದರ ಏರಿಕೆ ವಿಚಾರವನ್ನು ಪೂರ್ಣವಾಗಿಯೂ ತಳ್ಳಿಹಾಕುವಂತಿಲ್ಲ.


Click it and Unblock the Notifications









