ದಟ್ಸನ್‌ನಿಂದ ಇನ್ನೊಂದು ಕಾರು ಸದ್ಯದಲ್ಲೇ ಅನಾವರಣ

ನಿಸ್ಸಾನ್ ಮೋಟಾರ್ ಕಂಪನಿ ನಿಯಂತ್ರಣದಲ್ಲಿರುವ ದಟ್ಸನ್ ಕಾರು ಬ್ರಾಂಡ್ ಇತ್ತೀಚೆಗಷ್ಟೇ ಭಾರತದಲ್ಲಿ ಅಮೋಘ ಅನಾವರಣ ಕಂಡಿತ್ತು. ಎಲ್ಲ ಹೊಸತನದಿಂದ ಕೂಡಿದ ದಟ್ಸನ್ 'ಗೊ' ಮುಂದಿನ ವರ್ಷಾರಂಭದಲ್ಲಿ ದೇಶದ ಮಾರುಕಟ್ಟೆ ಪ್ರವೇಶಿಸಲಿದೆ.

ಇದರ ಬೆನ್ನಲ್ಲೇ ಇನ್ನೊಂದು ಕಾರನ್ನು ಪರಿಚಯಿಸಲು ದಟ್ಸನ್ ಸಿದ್ಧತೆ ನಡೆಸುತ್ತಿದೆ. ಆದರೆ ಈ ಬಾರಿ ಭಾರತದಲ್ಲಲ್ಲ. ಬದಲಾಗಿ ಸೆಪ್ಟೆಂಬರ್ 17ರಂದು ಇಂಡೋನೇಷ್ಯಾದಲ್ಲಿ ಸಣ್ಣ ಕಾರೊಂದನ್ನು ಅನಾವರಣಗೊಳಿಸುವುದಾಗಿ ಕಂಪನಿ ಘೋಷಿಸಿದೆ.


ನೂತನ ದಟ್ಸನ್ ಕಾರು 5.95 ಲಕ್ಷ ರು.ಗಳ ಅಂದಾಜು ದರಗಳಲ್ಲಿ ಆಗಮನವಾಗಲಿದೆ. ಅಂದ ಹಾಗೆ ಮುಂದಿನ ವರ್ಷ ಭಾರತ ಮಾರುಕಟ್ಟೆ ಪ್ರವೇಶಿಸಲಿರುವ ದಟ್ಸನ್ 'ಗೊ' ನಾಲ್ಕು ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ. ಇದು ಮಾರುತಿ ಆಲ್ಟೊಗೆ ಪ್ರಬಲ ಪ್ರತಿಸ್ಫರ್ದಿಯೆನಿಸಲಿದೆ. ಏತನ್ಮಧ್ಯೆ ದಟ್ಸನ್ ನೂತನ ಸಣ್ಣ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಪಾದರ್ಪಣೆ ವೇಳೆ ಲಭ್ಯವಾಗಲಿದೆ.

ನಿಮ್ಮ ಮಾಹಿತಿಗಾಗಿ ಬರೋಬ್ಬರಿ 32 ವರ್ಷಗಳ ಬಳಿಕ 2013 ಜುಲೈ 15ರಂದು, ದಟ್ಸನ್ ಬ್ರಾಂಡನ್ನು ನಿಸ್ಸಾನ್ ಪರಿಷ್ಕೃತಗೊಳಿಸಿತ್ತು. ಈ ಹಿಂದೆ 1986ನೇ ಇಸವಿಯಲ್ಲಿ ದಟ್ಸನ್ ಬ್ರಾಂಡ್ ನಿಲುಗಡೆಗೊಂಡಿತ್ತು. ಪ್ರಮುಖವಾಗಿಯೂ ಭಾರತ ಹಾಗೂ ಬೆಳೆದು ಬರುತ್ತಿರುವ ಏಷ್ಯಾ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಂಡು ದಟ್ಸನ್ ಬ್ರಾಂಡ್ ರಿ ಎಂಟ್ರಿ ಕೊಡುತ್ತಿದೆ.

More from DriveSpark

Article Published On: Friday, September 6, 2013, 14:17 [IST]
English summary
Following the global unveiling of the Go small car, Datsun has officially announced that it will introduce another all-new car on September 17, 2013.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+