ದಟ್ಸನ್ 'ಗೊ' ಅಗ್ಗದ ಕಾರು; ಆಲ್ಟೊ, ಇಯಾನ್ ಗಡಗಡ

Posted By:

ನಿಸ್ಸಾನ್ ಮೋಟಾರ್ ಕಂಪನಿ ತಲಹದಿಯಲ್ಲಿ ಪ್ರತಿಷ್ಠಿತ ದಟ್ಸನ್ ಕಾರು ಬ್ರಾಂಡ್ ಭಾರತಕ್ಕೆ ಭರ್ಜರಿ ರಿ ಎಂಟ್ರಿ ಕೊಟ್ಟಿದೆ. ಇದರೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಆಲ್ಟೊ ಹಾಗೂ ಹ್ಯುಂಡೈ ಇಯಾನ್ ಕಾರುಗಳು ಅಲುಗಾಡಲಾರಂಭಿಸಿದೆ.

ಎಂಟ್ರಿ ಲೆವೆಲ್ ಹ್ಯಾಚ್‌ಬ್ಯಾಕ್ ಸೆಗ್ಮೆಂಟ್‌ಗೆ ಕಾಲಿಟ್ಟಿರುವ ದಟ್ಸನ್ 4 ಲಕ್ಷ ರು.ಗಳ ಅಸುಪಾಸಿನಲ್ಲಿ ತನ್ನ ನೂತನ ಕಾರನ್ನು ಪರಿಚಯಿಸುತ್ತಿದೆ. ಇದು ದೇಶದ ನಂ.1 ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿಯ ಜನಪ್ರಿಯ ಆಲ್ಟೊ ಬ್ರಾಂಡ್‌ಗೆ ನಿಕಟ ಪ್ರತಿಸ್ಪರ್ಧಿಯೆನಿಸಲಿದೆ.

ಅಂದ ಹಾಗೆ ಡಟ್ಸನ್ ಕಡಿಮೆ ದರದ ಕಾರಿಗೆ 'ಗೊ' ಎಂದು ಹೆಸರಿಸಲ್ಪಡಲಿದೆ. ಇದು 2014 ಆರಂಭದಲ್ಲಿ ಭಾರತಕ್ಕೆ ಕಾಲಿಡಲಿದೆ. ಪ್ರಮುಖವಾಗಿಯೂ ಬೆಳೆದು ಬರುತ್ತಿರುವ ಭಾರತ ಪ್ರಯಾಣಿಕ ಮಾರುಕಟ್ಟೆಯಲ್ಲಿ ದೊಡ್ಡ ಪರಿಣಾಮ ಬೀರುವ ನಿರೀಕ್ಷೆಯಿದೆ.

To Follow DriveSpark On Facebook, Click The Like Button
ದಟ್ಸನ್ 'ಗೊ' ಅಗ್ಗದ ಕಾರು; ಆಲ್ಟೊ, ಇಯಾನ್ ಗಡಗಡ

ದಟ್ಸನ್ ಸಣ್ಣ ಕಾರು 4 ಲಕ್ಷ ರು.ಗಳಿಗೆ ರಸ್ತೆಗಿಳಿಯಲಿದೆ ಎಂಬುದು ಆಟೋ ವಿಶ್ಲೇಷಕರನ್ನು ಅಚ್ಚರಿಗೊಳಿಸಿದೆ. ಇದು ನಿರೀಕ್ಷೆಯಂತೆಯೇ ನಿಸ್ಸಾನ್ ಅಗ್ಗದ ಕಾರಾದ ಮೈಕ್ರಾ ಆಕ್ಟಿವ್‌ಗಿಂತಲೂ ಕಡಿಮೆ ರೇಂಜ್‌ನಲ್ಲಿ ಆಗಮನವಾಗಿದೆ.

ದಟ್ಸನ್ 'ಗೊ' ಅಗ್ಗದ ಕಾರು; ಆಲ್ಟೊ, ಇಯಾನ್ ಗಡಗಡ

ಇನ್ನು ಮೊದಲ ನೋಟದಲ್ಲೇ 2014 ಗೊ ಕಾರು ಆಕರ್ಷಕ ವಿನ್ಯಾಸವನ್ನು ಪಡೆದುಕೊಂಡಿದೆ. ಇದು ಕೂಡಾ ಆಟೋ ತಜ್ಞರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ದಟ್ಸನ್ 'ಗೊ' ಅಗ್ಗದ ಕಾರು; ಆಲ್ಟೊ, ಇಯಾನ್ ಗಡಗಡ

ಭಾರತದಲ್ಲಿ ಮಧ್ಯಮ ವರ್ಗದ ಕುಟುಂಬದವರು ಖಾಸಗಿ ಪಯಣಕ್ಕಾಗಿ ಸಣ್ಣ ಕಾರುಗಳನ್ನು ಹೆಚ್ಚು ನೆಚ್ಚಿಕೊಂಡಿರುತ್ತಾರೆ. ಅವರೆಲ್ಲರ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ದಟ್ಸನ್ ಇಂಟಿರಿಯರ್ ರೂಪುಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ದಟ್ಸನ್ 'ಗೊ' ಅಗ್ಗದ ಕಾರು; ಆಲ್ಟೊ, ಇಯಾನ್ ಗಡಗಡ

ಮೈಕ್ರಾ ಫ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿರುವ ನೂತನ ದಟ್ಸನ್ 2014 ಗೊ, 1.2 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ.

ದಟ್ಸನ್ 'ಗೊ' ಅಗ್ಗದ ಕಾರು; ಆಲ್ಟೊ, ಇಯಾನ್ ಗಡಗಡ

ಒಟ್ಟಾರೆಯಾಗಿ 2016ರ ವೇಳೆಗೆ ದೇಶದ 10ರಷ್ಟು ಮಾರುಕಟ್ಟೆ ವಶಪಡಿಸಿಕೊಳ್ಳುವ ಗುರಿಯಿರಿಸಿಕೊಂಡಿರುವ ನಿಸ್ಸಾನ್, ಈ ವೇಳೆಯಲ್ಲಿ 10 ನೂತನ ಮಾಡೆಲ್ ಬಿಡುಗಡೆ ಮಾಡುವ ಇರಾದೆ ಹೊಂದಿದೆ. ಹಾಗೆಯೇ ಸದ್ಯದಲ್ಲೇ ಏಳು ಸೀಟಿನ ಎಂಪಿವಿ ಲಾಂಚ್ ಮಾಡುವ ಯೋಜನೆ ಹೊಂದಿದೆ.

ದಟ್ಸನ್ 'ಗೊ' ಅಗ್ಗದ ಕಾರು; ಆಲ್ಟೊ, ಇಯಾನ್ ಗಡಗಡ

ಮಾರುತಿ ಆಲ್ಟೊ, ಹ್ಯುಂಡೈ ಇಯಾನ್ ಹಾಗೂ ಷೆವರ್ಲೆ ಸ್ಪಾರ್ಕ್‌ಗೆ ನೇರ ಪೈಪೋಟಿ ಎಸಗಲಿರುವ ಡಟ್ಸನ್ ಅಗ್ಗದ ಕಾರು, ಹ್ಯುಂಡೈ ಐ10, ಮಾರುತಿ ವ್ಯಾಗನಾರ್ ಹಾಗೂ ಎ ಸ್ಟಾರ್ ಆವೃತ್ತಿಗಳಿಗೂ ಕಂಟಕ ಸೃಷ್ಟಿ ಮಾಡಲಿದೆ.

ಏನದು ದಟ್ಸನ್?

ಏನದು ದಟ್ಸನ್?

ದಟ್ಸನ್ ಬ್ರಾಂಡ್ 1931ನೇ ಇಸವಿಯಲ್ಲಿ ದಾಟ್ (DAT) ಮೊಟೊಕಾರ್ ಕಂಪನಿಯಿಂದ ಆರಂಭವಾಗಿತ್ತು. ಸಣ್ಣ ಕಾರುಗಳ ಸಂಕೇತವಾಗಿ ಈ ಬ್ರಾಂಡ್ ಹೆಸರನ್ನು ಬಳಸಲಾಗಿತ್ತು. ಆ ಬಳಿಕ 1934ನೇ ಇಸವಿಯಲ್ಲಿ ನಿಸ್ಸಾನ್ ಮೋಟಾರ್ ಕಂಪನಿ ಲಿಮಿಟೆಡ್ ಅಧೀನತೆಗೆ ಬಂತು. ಆದರೆ 1986ನೇ ಇಸವಿಯಲ್ಲಿ ಡಟ್ಸನ್ ಬ್ರಾಂಡನ್ನು ನಿಸ್ಸಾನ್ ಸ್ಥಗಿತಗೊಳಿಸಿತ್ತು. ಇದೀಗ ದೀರ್ಘಾವಧಿಯ ಬಳಿಕ ಮತ್ತೆ ರಿ ಲಾಂಚ್ ಮಾಡಿದೆ.

ದಟ್ಸನ್ 2014 ಗೊ

ದಟ್ಸನ್ 2014 ಗೊ

ದಟ್ಸನ್ 2014 ಗೊ

ದಟ್ಸನ್ 2014 ಗೊ

ದಟ್ಸನ್ 2014 'ಗೊ'

ದಟ್ಸನ್ 2014 'ಗೊ'

ದಟ್ಸನ್ 2014 'ಗೊ'

ದಟ್ಸನ್ 2014 'ಗೊ'

ದಟ್ಸನ್ 2014 'ಗೊ'

ದಟ್ಸನ್ 2014 'ಗೊ'

ದಟ್ಸನ್ 2014 'ಗೊ'

ದಟ್ಸನ್ 2014 'ಗೊ'

ದಟ್ಸನ್ 2014 'ಗೊ'

ದಟ್ಸನ್ 2014 'ಗೊ'

ದಟ್ಸನ್ 2014 'ಗೊ'

ದಟ್ಸನ್ 2014 'ಗೊ'

ದಟ್ಸನ್ 2014 'ಗೊ'

ದಟ್ಸನ್ 2014 'ಗೊ'

ದಟ್ಸನ್ 2014 'ಗೊ'

ದಟ್ಸನ್ 2014 'ಗೊ'

English summary
Datsun has officially made a comeback with the unveiling of the all-new 2014 Go, the small car that was designed and developed for emerging car markets like India.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark