ಬೆಂಗ್ಳೂರಲ್ಲಿ 2013 ಫಿಯೆಟ್ ಪುಂಟೊ ಸ್ಪೋರ್ಟ್ ಲಾಂಚ್
ಜಗತ್ತಿನ ಅತಿ ಪುರತಾನ ಕಾರು ತಯಾರಕ ಸಂಸ್ಥೆಗಳಲ್ಲಿ ಒಂದಾಗಿರುವ ಫಿಯೆಟ್ ತನ್ನ ಜನಪ್ರಿಯ ಪುಂಟೊ ಆವೃತ್ತಿಯ ಸ್ಪೋರ್ಟ್ ವರ್ಷನ್ ಬಿಡುಗಡೆಗೊಳಿಸಿದೆ. ಬೆಂಗಳೂರಿನ ಫಿಯೆಟ್ ಕೆಫೆನಲ್ಲಿ ನಡೆದ ಸಮಾರಂಭದಲ್ಲಿ ಈ ಸೀಮಿತ 2013 ಪುಂಟೊ ಸ್ಪೋರ್ಟ್ ಆವೃತ್ತಿ ಬಿಡುಗಡೆಗೊಂಡಿದೆ.
ಆಕರ್ಷಕ ವಿನ್ಯಾಸ ಹೊಂದಿರುವ ನೂತನ ಪುಂಟೊ ಸ್ಪೋರ್ಟ್‌ನಲ್ಲಿ 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ಆಳವಡಿಸಲಾಗಿದೆ. ಟು ಟೋನ್ ಕಲರ್, ಎಕ್ಸ್‌ಟೀರಿಯರ್ ಮಿರರ್, ಸ್ಪೋರ್ಟಿ ಪೆಡಲ್ಸ್, ಸ್ಪೋರ್ಟಿ ಡೆಕಾಲ್ಸ್, ಸ್ಪೋರ್ಟ್ ಕಾರ್ಪೆಟ್ ಮ್ಯಾಟ್ಸ್, ರಿಯರ್ ಸ್ಪಾಯ್ಲರ್, ರೂಫ್ ಸ್ಪಾಯ್ಲರ್, ಕ್ರೋಮ್ ಎಕ್ಸ್‌ಹಾಸ್ಟ್ ಪೈಕ್ ಹಾಗೂ ಇನ್ನಿತರ ವೈಶಿಷ್ಟ್ಯಗಳನ್ನು ಹೊಂದಿದೆ.
ಒಟ್ಟು ಎರಡು ಬಣ್ಣಗಳ ಆಯ್ಕೆಗಳಲ್ಲಿ ನೂತನ ಕಾರು ಆಗಮನವಾಗಲಿದೆ. ಅವುಗಳೆಂದರೆ New Pearl White ಹಾಗೂ Exotica Red. ಲಿಮಿಟೆಡ್ ಎಡಿಷನ್ ಪುಂಟೊ ಬೆಂಗಳೂರು ಎಕ್ಸ್ ಶೋ ರೂಂ ದರ 7.74 ಲಕ್ಷ ರು.ಗಳಾಗಿವೆ.

ವೈಶಿಷ್ಟ್ಯ
ಕಪ್ಪು ಬಣ್ಣ ಲೇಪಿತ ರೂಫ್
ಎಕ್ಸ್‌ಟೀರಿಯರ್ ಮಿರರ್
ಸ್ಪೋರ್ಟ್ ಡಿಕಾಲ್ಸ್- ಸೈಡ್ ಆಂಡ್ ರಿಯರ್
ಸ್ಪೋರ್ಟ್ ಪೆಡಲ್ಸ್
ಕ್ರೋಮ್ಸ್ ಎಕ್ಸ್‌ಹಾಸ್ಟ್ ಪೈಪ್
ರೂಫ್ ಸ್ಪಾಯ್ಲರ್
ಪುಂಟೊ ಡೋರ್ ಸಿಲ್
ಸ್ಪೋರ್ಟ್ ಕಾರ್ಪೆಟ್ ಫ್ಲೂರ್ ಮ್ಯಾಟ್ಸ್ ಜತೆಗೆ ರೆಡ್ ಸ್ಟಿಚ್ಚಿಂಗ್
ಸುರಕ್ಷತೆ
ಡ್ಯುಯಲ್ ಸ್ಟೇಂಜ್ ಫ್ರಂಟ್ ಏರ್ ಬ್ಯಾಗ್
ಎರ್ಲಿ ಕ್ರಾಶ್ ಸೆನ್ಸಾರ್
ಬೆಂಕಿ ತಡೆಗಟ್ಟುವಿಕೆ ವ್ಯವಸ್ಥೆ
ಇಂಮೊಬಿಲೈಜರ್ ಜತೆಗೆ ರೋಲಿಂಗ್ ಕೋಡ್
ಬ್ಲೂ ಆಂಡ್ ಮಿ ಟೆಕ್ನಾಲಜಿ
ಆಟೋ ಎಸಿ
ಎಬಿಸ್ ಆಂಡ್ ಸ್ಪೀಡ್ ಸೆನ್ಸಿಟಿವ್
ಆಡಿಯೋ, ರಿಮೋಟ್ ಕಂಟ್ರೋಲ್
ಎಕ್ಸ್ ಶೋ ರೂಂ ದರ
ವೆರಿಯಂಟ್: ಪುಂಟೊ ಸ್ಪೋರ್ಟ್ 2013
ಮಾಪನ: ಬಿಎಸ್IV
ಇಂಧನ ವಿಧ: ಡೀಸೆಲ್
ಎಂಜಿನ್ ಸಿಸಿ: 1.3 ಲೀಟರ್
ದೆಹಲಿ ಎಕ್ಸ್ ಶೋ ರೂಂ ದರ: ರು. 7,60,048
ಬೆಂಗಳೂರು ಎಕ್ಸ್ ಶೋ ರೂಂ ದರ: ರು. 7,74,089


Click it and Unblock the Notifications









