2016ರಲ್ಲಿ ಭಾರತ ವಿಶ್ವದ 3ನೇ ಅತಿದೊಡ್ಡ ವಾಹನ ಮಾರುಕಟ್ಟೆ
ಜರ್ಮನಿ, ಜಪಾನ್ ಹಾಗೂ ಬ್ರೆಜಿಲ್‌ಗಳಂತಹ ಮುಂದುವರಿದ ದೇಶಗಳನ್ನೇ ಹಿಂದಿಕ್ಕಲಿರುವ ಭಾರತ 2016ರ ವೇಳೆಗೆ ವಿಶ್ವದ ಮೂರನೇ ಅತಿದೊಡ್ಡ ವಾಹನ ಮಾರುಕಟ್ಟೆ ಹೊಂದಿರುವ ದೇಶ ಎಂದೆನಿಸಿಕೊಳ್ಳಲಿದೆ ಎಂದು ಪ್ರಖ್ಯಾತ ಅಧ್ಯಯನ ವರದಿಯೊಂದು ತಿಳಿಸಿದೆ.
ಜಾಗತಿಕ ಮಾರುಕಟ್ಟೆ ಮಾಹಿತಿ ಒದಗಿಸುವ ಐಎಚ್‌ಎಸ್ ಆಟೋಮೋಟಿವ್ ಬಿಡುಗಡೆ ಮಾಡಿರುವ ಅಧ್ಯಯನ ವರದಿಯಲ್ಲಿ ಈ ಮಹತ್ವದಪೂರ್ಣ ಅಂಶ ದಾಖಲಾಗಿದೆ. ದೇಶಿಯ ವಾಹನ ಮಾರುಕಟ್ಟೆಯಲ್ಲಿ ಭಾರತ ಗಣನೀಯ ವರ್ಧನೆ ದಾಖಲಿಸುತ್ತಿದೆ ಎಂದು ವರದಿಯು ತಿಳಿಸಿದೆ.
2012-13 ಸಾಲಿನಲ್ಲಿ ಭಾರತದ ಆರ್ಥಿಕತೆ ಸ್ವಲ್ಪ ಹಿನ್ನಡೆ ಅನುಭವಿಸಿದ್ದರೂ 2014ರಿಂದ ಮತ್ತೆ ಚೇತರಿಕೆ ಕಾಣಲಿದೆ ಎಂದು ವರದಿಯು ಉಲ್ಲೇಖಿಸಿದೆ.
ಪ್ರಸ್ತುತ ಜಾಗತಿಕ ವಾಹನ ಮಾರುಕಟ್ಟೆಯಲ್ಲಿ ಭಾರತವು ಆರನೇ ಸ್ಥಾನದಲ್ಲಿದೆ. ಆದರೆ 2016ರ ವೇಳೆಗೆ ಬ್ರೆಜಿಲ್, ಜಪಾನ್ ಹಾಗೂ ಜರ್ಮನಿ ರಾಷ್ಟ್ರಗಳನ್ನು ಹಿಂದಿಕ್ಕಲಿರುವ ಭಾರತ ನಂ.3 ಎನಿಸಿಕೊಳ್ಳಲಿದೆ ಎಂದು ಐಎಚ್‌ಎಸ್ ಬಹಿರಂಗಪಡಿಸಿದೆ. ಚೀನಾ ಹಾಗೂ ಅಮೆರಿಕ ದೇಶಗಳು ಅಗ್ರ ಎರಡು ಸ್ಥಾನಗಳಲ್ಲಿದೆ.
ಮುಂದುವರಿದ ದೇಶಗಳಲ್ಲಿ ವಾಹನ ಮಾರಾಟ ಕುಗ್ಗುತ್ತಿದೆ. ಅದೇ ಹೊತ್ತಿಗೆ ಅಭಿವೃದ್ದಿ ಹೊಂದುತ್ತಿರುವ ಭಾರತ ದೇಶವು ಐಷಾರಾಮಿ ಕಾರುಗಳಿಗೆ ಉತ್ತಮ ಮಾರಾಟ ಒದಗಿಸುತ್ತಿದೆ ಎಂದಿದೆ.


Click it and Unblock the Notifications









