ಹೊಸ ಲುಕ್ ಪಡೆದ ಮಹೀಂದ್ರ ಎಕ್ಸ್‌ಯುವಿ 500
ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಭಾರಿ ಯಶಸ್ಸನ್ನು ಪಡೆದಿರುವ ಮಹೀಂದ್ರದ ಎಸ್‌ಯುವಿ ದೈತ್ಯ ಎಕ್ಸ್‌ಯುವಿ 500 ಕಾರಿಗೆ ನೂತನ ಕಲರ್ ವೆರಿಯಂಟ್ ಸೇರ್ಪಡೆಯಾಗಿದೆ. ಪ್ರಸ್ತುತ ಮಾಹಿತಿ ಪ್ರಕಾರ ನೂತನ ಮಹೀಂದ್ರ ಎಕ್ಸ್‌ಯುವಿ 500 ಆರ್ಕಿಟಿಕ್ ಬ್ಲ್ಯು ಕಲರ್ ವೆರಿಯಂಟ್‌ನಲ್ಲೂ ಲಭ್ಯವಾಗಲಿದೆ.
ಇದರೊಂದಿಗೆ ಆರು ಇತರ ಕಲರ್ ವೆರಿಯಂಟ್‌ನೊಂದಿಗೆ ನೀಲಿ ಬಣ್ಣವೂ ಕೂಡಾ ಸೇರ್ಪಡೆಯಾಗಲಿದೆ. ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಮಹೀಂದ್ರದಿಂದ ಬಿಡುಗಡೆಯಾದ ಕಾರುಗಳ ಪೈಕಿ ಎಕ್ಸ್‌ಯುವಿ 500 ಮಹತ್ತರ ಯಶಸ್ಸನ್ನು ಸಾಧಿಸಿತ್ತು.
ಮಹೀಂದ್ರ ಎಕ್ಸ್‌ಯುವಿ 500 ಆರಂಭಿಕ ದರ 11.7 ಲಕ್ಷ ರು.ಗಳಾಗಿದ್ದು ಟಾಪ್ ಆಂಡ್ ವೆರಿಯಂಟ್ ಆದ ವೀಲ್ ಡ್ರೈವ್ ವರ್ಷನ್ ದರ 14.5 ಲಕ್ಷ ರು.ಗಳ ವರೆಗಿದೆ.
ಕೆಲವು ನಿರ್ದಿಷ್ಟ ಗುಂಪಿನ ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಆರ್ಕ್‌ಟಿಕ್ ನೀಲಿ ಬಣ್ಣದ ಎಸ್‌ಯುವಿ ಬಿಡುಗಡೆಗೊಳಿಸಲಾಗಿದೆ. ಮಹೀಂದ್ರ ಈ ತನಕ ವೊಲ್ಕನೊ ಬ್ಲ್ಯಾಕ್, ಸ್ಯಾಟಿನ್ ವೈಟ್, ಮೂನ್‌ಡಸ್ಟ್ ಸಿಲ್ವರ್, ಟಸ್ಕನ್ ರೆಡ್, ಒಪ್ಯುಲೆಂಟ್ ಪರ್ಪಲ್ ಹಾಗೂ ಡಾಲ್ಫಿನ್ ಗ್ರೇ ಕಲರ್ ಆಯ್ಕೆಗಳಲ್ಲಿ ಲಭ್ಯವಿದೆ.
ಮಹೀಂದ್ರ ಪೈಕಿ ಅತಿ ಶ್ರೇಷ್ಠ ಉತ್ಪನ್ನ ಎನಿಸಿಕೊಂಡಿರುವ ಎಕ್ಸ್‌ಯುವಿ 500 ಕಾರನ್ನು ಇತರ ಅನೇಕ ದೇಶಗಳಿಗೂ ರಫ್ತು ಮಾಡಲಾಗುತ್ತಿದೆ. ಹಾಗೆಯೇ ಗ್ರಾಹಕರ ಕಾಯುವಿಕೆ ಅವಧಿ ತಗ್ಗಿಸುವ ನಿಟ್ಟಿನಲ್ಲಿ ಹೆಚ್ಚು ಉತ್ಪಾದಿಸುವುದರತ್ತ ಕಾರ್ಯಮಗ್ನವಾಗಿದೆ.


Click it and Unblock the Notifications









