ಇಕೊಸ್ಪೋರ್ಟ್ ಬಿಡುಗಡೆಗೂ ಮುನ್ನ ಪ್ರತಿಸ್ಪರ್ಧಿ ಸಿದ್ಧ
ಬಹುನಿರೀಕ್ಷಿತ ಫೋರ್ಡ್ ಇಕೊಸ್ಪೋರ್ಟ್ ಕಾಂಪಾಕ್ಟ್ ಎಸ್‌ಯುವಿ ಕಾರು ಇನ್ನಷ್ಟೇ ಮಾರುಕಟ್ಟೆಗೆ ಅಪ್ಪಳಿಸಬೇಕಾಗಿದೆ. ಈ ನಡುವೆ ನಿಕಟ ಎದುರಾಳಿಯಿಂದ ತೆರೆಮರೆಯಲ್ಲಿ ಪ್ರತಿಸ್ಪರ್ಧಿ ಸಿದ್ಧಗೊಳ್ಳುತ್ತಿದೆ.
ನಿಸ್ಸಂಶಯವಾಗಿಯೂ 'ಎಸ್101' ಕೋಡ್ ಪಡೆದಿರುವ ಮಹೀಂದ್ರ ಕಾಂಪಾಕ್ಟ್ ಎಸ್‌ಯುವಿ, ಫೋರ್ಡ್ ಇಕೊಸ್ಪೋರ್ಟ್‌ಗೆ ಪ್ರಬಲ ಎದುರಾಳಿಯಾಗಿರಲಿದೆ ಎಂದು ಆಟೋ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಕೆಳಗಡೆಯ ಚಿತ್ರಣದಲ್ಲಿ ತೋರಿಸಿರುವಂತೆಯೇ ದೇಶದಲ್ಲಿ ಅತಿ ಹೆಚ್ಚು ಯಶಸ್ಸು ಸಾಧಿಸಿರುವ ಎಕ್ಸ್‌ಯುವಿ500 ಕಾರಿನ ಕಿರಿಯ ಸೋದರನಾಗಲಿದ್ದು, ಸಮಾನ ಹೆಸರು ಪಡೆಯುವ ಸಾಧ್ಯತೆಯಿದೆ.
ಹಾಗಿದ್ದರೆ ಬನ್ನಿ ಮಹೀಂದ್ರ ನೂತನ ಕಾಂಪಾಕ್ಟ್ ಎಸ್‌ಯುವಿಯಲ್ಲಿ ಎನೆಲ್ಲ ವೈಶಿಷ್ಟ್ಯಗಳಿರಲಿವೆ ಎಂಬುದನ್ನು ನೋಡೋಣ...
-ಮೊನೊಕೊಕ್ಯೂ ಚಾಸೀಸ್ ತಲಹದಿಯಲ್ಲಿ ಎಸ್101 ನಿರ್ಮಾಣ
-ಇನ್ನು ಮಹತ್ವದ ವಿಚಾರವೆಂದರೆ 4 ಮೀಟರ್ ಉದ್ದ ಮಿತಿಯೊಳಗೆ ಆಗಮನ. ಇದರಿಂದ ಹೆಚ್ಚಿನ ತೆರಿಗೆಯಿಂದ ಬಚಾವಾಗಬಹುದು.
-ಪೆಟ್ರೋಲ್ ಸೇರಿದಂತೆ ಡೀಸೆಲ್ ಎಂಜಿನ್ ಆಯ್ಕೆ ಲಭ್ಯ
-ಫ್ರಂಟ್ ವೀಲ್ ಡ್ರೈವ್ ಕ್ರಾಸೋವರ್, 6 ಸ್ಪೀಡ್ ಗೇರ್ ಬಾಕ್ಸ್
-ಮತ್ತೊಂದು ವಿಶೇಷ ಅಂಶವೆಂದರೆ 6 ಸೀಟರ್ ಜತೆ 8 ಸೀಟರ್ ಆಪ್ಷನ್ ಕೂಡಾ ಲಭ್ಯ. ಇದನ್ನು ಜಗತ್ತಿಗೆ ಹೇಗೆ ಪರಿಚಯಿಸಲಿದೆ ಎಂಬುದಕ್ಕೆ ಭವಿಷ್ಯವೇ ಉತ್ತರಿಸಲಿದೆ.
-ಇನ್ನು ಲಾಸ್ಟ್ ಬಟ್ ಲೀಸ್ಟ್ ಎಂಬಂತೆ ಬೇಸ್ ವೆರಿಯಂಟ್ ದರ 5 ಲಕ್ಷ ಅಸುಪಾಸಿನಲ್ಲಿರಲಿದೆ.


Click it and Unblock the Notifications









