ಮಾರುತಿ ಆಲ್ಟೊ 4 ತಿಂಗಳಲ್ಲೇ 1 ಲಕ್ಷ ಸೇಲ್ ದಾಖಲೆ!
ಈ ಮೂಲಕ ಅಲ್ಟೊ 800 ಮಾರುತಿ ಪಾಲಿಗೆ ಅತಿ ಜನಪ್ರಿಯ ಕಾರೆನಿಸಿಕೊಂಡಿದೆ. ದೇಶದ ಎಂಟ್ರಿ ಲೆವೆಲ್ ಕಾರುಗಳ ಪೈಕಿ ಆಲ್ಟೊ 800 ದೇಶದ ಮಧ್ಯಮ ವರ್ಗದ ಜನರ ಫೇವರಿಟ್ ಎನಿಸಿಕೊಂಡಿದೆ.
ಪ್ರಸ್ತುತ ದೇಶದ ಪ್ಯಾಸೆಂಜರ್ ಮಾರುಕಟ್ಟೆಯ 'ಎ' ಸೆಗ್ಮೆಂಟ್ ವಿಭಾಗದಲ್ಲಿ ಮಾರುತಿ ಆಲ್ಟೊ 800 ಹ್ಯಾಚ್‌ಬ್ಯಾಕ್ ಕಾರಿಗೆ ಹ್ಯುಂಡೈ ಇಯಾನ್ ಹಾಗೂ ಷೆವರ್ಲೆ ಸ್ಪಾರ್ಕ್ ಆವೃತ್ತಿಗಳಿಂದ ಪೈಪೋಟಿ ಎದುರಾಗುತ್ತಿದೆ. ಆಧುನಿಕ ವಿನ್ಯಾಸ ಹಾಗೂ ರಿಫ್ರೆಶ್ ಮಾದರಿ ಜನರ ಮನ ಗೆಲ್ಲುವಲ್ಲಿ ಆಲ್ಟೊ 800ಗೆ ನೆರವಾಗಿತ್ತು.
ಆಕ್ಟಿವ್ ಕ್ರಂಪಲ್ ಜೋನ್ ಹಾಗೂ ಡ್ರೈವರ್ ಸೈಡ್ ಏರ್‌ಬ್ಯಾಗ್ ಸುರಕ್ಷತಾ ಮಾನದಂಡಗಳು ಆಲ್ಟೊ ಸೇಲ್ಸ್ ಉತ್ತೇಜಿಸುವಲ್ಲಿ ನೆರವಾಗಿತ್ತು. ಕಡಿಮೆ ನಿರ್ವಹಣಾ ವೆಚ್ಚ, ಆಕರ್ಷಕ ಇಂಟಿರಿಯರ್ ಹಾಗೂ ಗರಿಷ್ಠ ಇಂಧನ ಕ್ಷಮತೆಯು ಆಲ್ಟೊ ಪ್ಲಸ್ ಪಾಯಿಂಟ್ ಆಗಿದೆ.
ಇನ್ನು ಮಾರುತಿ ಆಲ್ಟೊ 796ಸಿಸಿ 3 ಸಿಲಿಂಡರ್ ಎಫ್8ಡಿ ಪೆಟ್ರೋಲ್ ಎಂಜಿನ್ ಪ್ರತಿ ಲೀಟರ್‌ಗೆ 22.74 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಮಾರುತಿ ಆಲ್ಟೊ ಪೆಟ್ರೋಲ್ ಸಹಿತ ಸಿಎನ್‌ಜಿ ಮಾದರಿಗಳಲ್ಲೂ ಲಭ್ಯವಿದೆ. ಇದರ ಆರಂಭಿಕ ದರ 2.4 ಲಕ್ಷ ರು.ಗಳಿಂದ ಟಾಪ್ ಎಂಡ್ ವೆರಿಯಂಟ್‌ಗೆ 3.6 ಲಕ್ಷ ರು.ಗಳ ವರೆಗಿದೆ.


Click it and Unblock the Notifications









