9 ತಿಂಗಳ ಬಳಿಕ ಹಳಿಗೆ ಮರಳಿದ ಕಾರು ಮಾರುಕಟ್ಟೆ
ಒಂಬತ್ತು ತಿಂಗಳ ಬಳಿಕ ಸುದೀರ್ಘ ಅಂತರಾಳದ ಬಳಿಕ ದೇಶದ ಕಾರು ಮಾರುಕಟ್ಟೆ ಪ್ರಗತಿ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಹಾದಿ ತಪ್ಪಿದ ಕಾರು ಮಾರುಕಟ್ಟೆಯನ್ನು ಹಳಿಗೆ ಮರಳಿಸುವಲ್ಲಿ ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಮಹತ್ವದ ಪಾತ್ರ ವಹಿಸಿದೆ.
ಆಗಸ್ಟ್ ತಿಂಗಳ ಕಾರು ಮಾರುಕಟ್ಟೆಯು ಶೇಕಡಾ 15.37ರಷ್ಟು ಏರಿಕೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಇದು ಮುಂಬರುವ ಹಬ್ಬದ ಆವೃತ್ತಿ ಮುಂಚಿತವಾಗಿ ಉತ್ತೇಜನ ನೀಡುವಲ್ಲಿ ಯಶಸ್ವಿಯಾಗಿದೆ. ಕಳೆದ ವರ್ಷದ 1,15,705 ಸಂಖೆಯನ್ನು ಹೋಲಿಸಿದರೆ ಆಗಸ್ಟ್ ತಿಂಗಳಲ್ಲಿ 133486 ಯುನಿಟ್ ಮಾರಾಟ ಗಿಟ್ಟಿಸಿಕೊಂಡಿದೆ.
ಇಂಧನ ದರ ಏರಿಕೆ, ಹಣದುಬ್ಬರ ಹಾಗೂ ರುಪಾಯಿ ಅಪಮೌಲ್ಯದ ನಡುವೆಯೂ ಮಾರಾಟ ವೃದ್ಧಿ ದಾಖಲಿಸಿದೆ. ಈ ನಡುವೆ ಯುಟಿಲಿ ವೆಹಿಕಲ್ ಶೇಕಡಾ 13ರಷ್ಟು ಹಾಗೂ ಮಾರುತಿ ಓಮ್ನಿ ಮತ್ತು ಇಕೊ ಶೇಕಡಾ 19ರಷ್ಟು ಕುಸಿತ ಅನುಭವಿಸಿದೆ.
ಇನ್ನು ದ್ವಿಚಕ್ರ ವಾಹನ ಮಾರಾಟವು ಸಹ ಏರಿಕೆ ದಾಖಲಿಸಿದೆ. ಕಳೆದ ವರ್ಷ 10.57 ಲಕ್ಷ ಯುನಿಟ್ ಮಾತ್ರ ಮಾರಾಟವಾಗಿದ್ದರೆ ಈ ಬಾರಿಯದು 11.28 ಲಕ್ಷ ಯುನಿಟ್‌ಗಳಿಗೆ ಏರಿಕೆ ಕಂಡಿದೆ.


Click it and Unblock the Notifications









