ತ್ವರೆ ಮಾಡಿರಿ; ವ್ಯಾಗನಾರ್‌ಗೆ ಭಾರಿ ಡಿಸ್ಕೌಂಟ್
ರಿಯಾಯಿತಿ ದರಕ್ಕಾಗಿ ಕಾಯುತ್ತಿರುವವರಿಗೆ ತಮ್ಮ ನೆಚ್ಚಿನ ವ್ಯಾಗನಾರ್ ಖರೀದಿಸಲು ಸದವಕಾಶವಿದು. ಯಾಕೆಂದರೆ ಮಾರುತಿ ಸುಜುಕಿ ವ್ಯಾಗನಾರ್‌ಗೆ 62,000 ರು.ಗಳ ವರೆಗೆ ರಿಯಾಯಿತಿ ದರ ನೀಡಲಾಗುತ್ತಿದೆ.
ವಿಎಕ್ಸ್‌ಐ ಹಾಗೂ ವಿಎಕ್ಸ್‌ಐ ಎಬಿಎಸ್ ವೆರಿಯಂಟ್ ಹೊರತುಪಡಿಸಿ ಇತರೆಲ್ಲ ವ್ಯಾಗನಾರ್ ವೆರಿಯಂಟ್‌ಗಳಿಗೆ ಆಫರ್ ಅನ್ವಯವಾಗಲಿದೆ. ಒಟ್ಟು ಮೂರು ಎಂಜಿನ್ ಆಯ್ಕೆಗಳಲ್ಲಿ ವ್ಯಾಗನಾರ್ ಲಭ್ಯವಿರುತ್ತದೆ. ಅವುಗಳೆಂದರೆ ಪೆಟ್ರೋಲ್, ಸಿಎನ್‌ಜಿ ಹಾಗೂ ಎಲ್‌ಪಿಜಿ.
ವ್ಯಾಗನಾರ್ 1 ಲೀಟರ್ ಪೆಟ್ರೋಲ್ ಕೆ ಸಿರೀಸ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, ಒಟ್ಟು 67 ಅಶ್ವಶಕ್ತಿ (90ಎನ್‌ಎಂ ಟರ್ಕ್ಯೂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ದೇಶದ ಅತ್ಯಂತ ಜನಪ್ರಿಯ ಆವೃತ್ತಿಗಳಲ್ಲಿ ಒಂದಾಗಿರುವ ವ್ಯಾಗನಾರ್‌ಗೆ ರಿಯಾಯಿತಿ ದರ ಘೋಷಿಸುವ ಮೂಲಕ ಕಳೆಗುಂದಿರುವ ಮಾರುಕಟ್ಟೆಯನ್ನು ಉತ್ತೇಜಿಸುವ ಗುರಿಯನ್ನು ಕಂಪನಿ ಹೊಂದಿದೆ. ಮಾರುತಿ ಸುಜಿಕಿಯ ಡೀಸೆಲ್ ಕಾರು ಮಾರಾಟಗಳ ಪೈಕಿ ವ್ಯಾಗನಾರ್ ಎರಡನೇ ಸ್ಥಾನದಲ್ಲಿದೆ. ಇತ್ತೀಚೆಗಷ್ಟೇ ಮಾರುತಿ ಸುಜುಕಿ ಸ್ಟಿಂಗ್ರೇ ಅನಾವರಣಗೊಳಿಸಲಾಗಿತ್ತು.


Click it and Unblock the Notifications









