'ಟಾಲ್ ಬಾಯ್' ವ್ಯಾಗನಾರ್ ಬಂಪರ್ ಸೇಲ್ಸ್‌ನ ಗುಟ್ಟೇನು?

Written By:

'ಟಾಲ್ ಬಾಯ್' ವಿನ್ಯಾಸ ತಂತ್ರಗಾರಿಕೆಯಲ್ಲಿ ನಿರ್ಮಾಣವಾಗಿರುವ ವ್ಯಾಗನಾರ್ ಹ್ಯಾಚ್‌ಬ್ಯಾಕ್ ಕಾರು ಕಳೆದ 15 ವರ್ಷಗಳಿಂದ ದೇಶದ ರಸ್ತೆಯಲ್ಲಿ ಓಡಾಡುತ್ತಿದ್ದು, ಇದೀಗ 15 ಲಕ್ಷ ಯಶಸ್ವಿ ಗ್ರಾಹಕರನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಸಣ್ಣ ಕಾರು ವಿಭಾಗದಲ್ಲಿ ಬಜೆಟ್ ಕಾರು ಎಂದೇ ಖ್ಯಾತಿ ಪಡೆದಿರುವ ವ್ಯಾಗನಾರ್ ಮೊದಲ ಬಾರಿಗೆ 1999ನೇ ಇಸವಿಯಲ್ಲಿ ಬಿಡುಗಡೆಗೊಂಡಿತ್ತು. ತದಾ ಬಳಿಕ ಕಾಲಕ್ಕೆ ತಕ್ಕಂತೆ ಅನೇಕ ಬಾರಿ ಮೇಕ್ ಓವರ್ ಆಗಿರುವ ವ್ಯಾಗನಾರ್ ಇಂದಿಗೂ ಉತ್ತಮ ಮಾರಾಟ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಷ್ಟಕ್ಕೂ ಭಾರತ ವಾಹನ ಮಾರುಕಟ್ಟೆಯಲ್ಲಿ ವ್ಯಾಗನಾರ್ ಮಾಡಿರುವ ಮೋಡಿ ಏನು? ಎಂಬುದರ ಬಗ್ಗೆ ತಿಳಿದುಕೊಳ್ಳಲು ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ಟಾಲ್ ಬಾಯ್ ವಿನ್ಯಾಸ

ಟಾಲ್ ಬಾಯ್ ವಿನ್ಯಾಸ

ವ್ಯಾಗನಾರ್ ವಿಶಿಷ್ಟ ವಿನ್ಯಾಸಕ್ಕೆ ದೇಶದ ಗ್ರಾಹಕರು ಮನಸೋತರು ಅಂದರೆ ತಪ್ಪಾಗಲಾರದು. ಇದು ಟಾಲ್ ಬಾಯ್ ವಿನ್ಯಾಸ ಪಡೆದುಕೊಂಡಿದ್ದು, ಉದ್ದನೆಯ ಸವಾರರಿಗೂ ಅತ್ಯುತ್ತಮ ಚಾಲನಾ ಅನುಭವ ಪ್ರದಾನ ಮಾಡುತ್ತಿದೆ. ಇದು ಹೆಚ್ಚು ಲೆಗ್, ಹೆಡ್ ಹಾಗೂ ಶೋಲ್ಡರ್ ಸ್ಪೇಸ್ ಕೂಡಾ ಹೊಂದಿರುತ್ತದೆ.

ಬಜೆಟ್ ಕಾರು

ಬಜೆಟ್ ಕಾರು

ನೀವು ಐದು ಲಕ್ಷ ಬಜೆಟ್‌ನೊಳಗೆ ಕಾರು ಖರೀದಿ ಮಾಡುವ ಯೋಚನೆ ಹೊಂದಿದ್ದೀರಾ? ಖಂಡಿತವಾಗಿಯೂ ನಿಮಗೆ ಮೊದಲು ದೊರಕುವ ಉತ್ತರ ವ್ಯಾಗನಾರ್ ಆಗಿರಲಿದೆ.

ವ್ಯಾಗನಾರ್ ಕಾರಿನ ಹುಡುಕಾಟದಲ್ಲಿದ್ದೀರಾ? ಇಲ್ಲಿಗೆ ಭೇಟಿ ಕೊಡಿರಿ

ನಿರ್ವಹಣಾ ವೆಚ್ಚ ಕಡಿಮೆ

ನಿರ್ವಹಣಾ ವೆಚ್ಚ ಕಡಿಮೆ

ತನ್ನ ಪ್ರತಿಸ್ಪರ್ಧಿಗಳನ್ನು ಹೋಲಿಸಿದಾಗ ಮಾರುತಿ ವ್ಯಾಗನಾರ್ ನಿರ್ವಹಣಾ ವೆಚ್ಚ ಕೂಡಾ ಅತ್ಯಂತ ಕಡಿಮೆಯಾಗಿದೆ. ಪ್ರತಿ 10,000 ಕೀ.ಮೀ.ಗೊಮ್ಮೆ ಎಂಜಿನ್ ಆಯಿಲ್ ಬದಲಾಯಿಸುತ್ತಿದ್ದರೆ ಅತ್ಯುತ್ತಮ ನಿರ್ವಹಣೆಯನ್ನು ಕಾಪಾಡಿಕೊಳ್ಳಬಹುದಾಗಿದೆ.

ಫ್ಯಾಮಿಲಿ ಕಾರು

ಫ್ಯಾಮಿಲಿ ಕಾರು

ಇವೆಲ್ಲದಕ್ಕಿಂತಲೂ ಮಿಗಿಲಾಗಿ ಫ್ಯಾಮಿಲಿ ಕಾರು ಎಂಬ ಹೆಗ್ಗಳಿಕೆಗೂ ವ್ಯಾಗನಾರ್ ಪಾತ್ರವಾಗಿದೆ. ಇದು ಚೊಕ್ಕದಾದ ಕುಟುಂಬ ಹೊಂದಿದವರಿಗೆ ಅತ್ಯುತ್ತಮ ಚಾಲನಾ ಅನುಭವ ನೀಡುತ್ತದೆ. ಹಾಗಿದ್ದರೂ ಐದು ಮಂದಿ ಪ್ರಯಾಣಿಕರಿಗೆ ಆರಾಮದಾಯಕವಾಗಿ ಚಲಿಸಬಹುದಾಗಿದೆ.

ಭಾರತ ಪ್ರವೇಶ

ಭಾರತ ಪ್ರವೇಶ

ಜಪಾನ್‌ನ ಸುಜುಕಿ ಅಂಗಸಂಸ್ಥೆಯಾಗಿರುವ ಮಾರುತಿ ಸುಜುಕಿ, 1999ನೇ ಇಸವಿಯ ಡಿಸೆಂಬರ್ ತಿಂಗಳಲ್ಲಿ ವ್ಯಾಗನಾರ್ ಮಾದರಿಯನ್ನು ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿತ್ತು. ತದಾ ಬಳಿ ಮೂರು ಬಾರಿ (2003, 2006 ಮತ್ತು 2010) ಪರಿಷ್ಕೃತಗೊಂಡಿತ್ತು.

ಎರಡನೇ ತಲೆಮಾರಿನ ವ್ಯಾಗನಾರ್ ಆವೃತ್ತಿಯು 2010ರಲ್ಲಿ ಬಿಡುಗಡೆಗೊಂಡಿತ್ತು. ಎಲ್ಲ ಹೊಸ ತಳಹದಿಯಲ್ಲಿ ನಿರ್ಮಾಣವಾಗಿದ್ದ ಹೊಸ ವ್ಯಾಗನಾರ್ ಕಾರಿನ ಒಳಗಡೆ ಹೆಚ್ಚಿನ ಸ್ಥಳಾವಕಾಶ ಪಡೆದುಕೊಂಡಿತ್ತು. ಇದು ಮುಂಭಾಗದ ಪ್ರಯಾಣಿಕ ಸೀಟಿನ ಕೆಳಗಡೆ ಟ್ರೇದಂತಹ ಹೊಸ ವೈಶಿಷ್ಟ್ಯಗಳನ್ನು ಗಿಟ್ಟಿಸಿಕೊಂಡಿತ್ತು.

ವ್ಯಾಗನಾರ್ ನಡೆದು ಬಂದ ಹಾದಿ

ವ್ಯಾಗನಾರ್ ನಡೆದು ಬಂದ ಹಾದಿ

 • 1999-2000 - ವ್ಯಾಗನಾರ್ ಬಿಡುಗಡೆ
 • 2003-04: 1 ಲಕ್ಷ ಯುನಿಟ್‌ಗಳ ಮಾರಾಟ
 • 2003-04: ಮೊದಲ ಪರಿಷ್ಕೃತ ವ್ಯಾಗನಾರ್ ಬಿಡುಗಡೆ
 • 2006-07: 2ನೇ ಪರಿಷ್ಕೃತ ವ್ಯಾಗನಾರ್ ಬಿಡುಗಡೆ, ಜೊತೆಗೆ ಎಲ್‌ಪಿಜಿ ಇಂಧನ ಆಯ್ಕೆ
 • 2007-08: ಐದು ಲಕ್ಷ ಯುನಿಟ್‌ಗಳ ಮಾರಾಟ
 • 2010-11: ಎಲ್ಲ ಹೊಸ ಫ್ಲ್ಯಾಟ್‌ಫಾರ್ಮ್‌ನ ವ್ಯಾಗನಾರ್ ಬಿಡುಗಡೆ, ಸಿಎನ್‌ಜಿ ವೆರಿಯಂಟ್ ಪರಿಚಯ
 • 2011-12: 10 ಲಕ್ಷ ಯುನಿಟ್‌ಗಳ ಮಾರಾಟ
 • 2012-13: ಮಗದೊಂದು ವ್ಯಾಗನಾರ್ ಪರಿಷ್ಕೃತ ಆವೃತ್ತಿ ಬಿಡುಗಡೆ
 • 2013-14: ವ್ಯಾಗನಾರ್ ಸ್ಟ್ರಿಂಗ್ರೇ ಬಿಡುಗಡೆ
ಹೊರಮೈ

ಹೊರಮೈ

ಸ್ಮಾರ್ಟ್ ಡಿಸೈನ್,

ಸ್ಪೋರ್ಟಿ ಫಾಗ್ ಲ್ಯಾಂಪ್, ಬಿಜೆಲ್ ಡಿಸೈನ್,

ಹೆಡ್‌ಲ್ಯಾಂಪ್ ಜೊತೆ ವಿಶಿಷ್ಟ ಬ್ಲೂ ಲೆನ್ಸ್,

ಹೊಸ ಗ್ರಿಲ್ ಡಿಸೈನ್,

ಕ್ರೋಮ್ ಪ್ಲೇಟ್,

ಹೊಸ ಫ್ರಂಟ್ ಬಂಪರ್,

ಕ್ಲೈಸ್ಟಲ್ ಎಫೆಕ್ಟ್ ಟೈಲ್ ಲ್ಯಾಂಪ್

ಒಳಮೈ

ಒಳಮೈ

 • ಅನುಕೂಲತೆ,
 • ಮಡಚಬಹುದಾದ ರಿಯರ್ ಸೀಟು,
 • ಡ್ಯಾಶ್‌ಬೋರ್ಡ್‌ನಲ್ಲಿ ಕಪ್ ಹೋಲ್ಡರ್,
 • ರಿಯರ್ ಪಾರ್ಸೆಲ್ ಟ್ರೇ,
 • ಪುಶ್ ಟೈಪ್ ಇನ್ಸ್ಟ್ರುಮೆಂಟ್ ಪ್ಯಾನೆಲ್ ಸ್ಟೋರೆಜ್ ಬಾಕ್ಸ್,
 • ವೈಡ್ ಓಪನಿಂಗ್ ಡೋರ್,
 • ಎಲೆಕ್ಟ್ರಿಕ್ ಓಆರ್‌ವಿಎಂ, ಚಾಲಕ ಆರ್ಮ್ ರೆಸ್ಟ್‌ನಲ್ಲಿ ಪವರ್ ವಿಂಡೋ ಕಂಟ್ರೋಲ್,
 • ನಾವೀನ್ಯತೆಯ ಫ್ರಂಟ್ ಪ್ಯಾಸೆಂಜರ್ ಅಂಡರ್ ಸೀಟ್ ಟ್ರೇ,
 • ಟಿಲ್ಟ್ ಸ್ಟೀರಿಂಗ್,
 • ಹಗಲು/ರಾತ್ರಿ ಕಾರಿನೊಳಗೆ ರಿಯರ್ ವ್ಯೂ ಮಿರರ್,
 • ಡ್ಯುಯಲ್ ಟೋನ್ ಇಂಟಿರಿಯರ್ ಕಲರ್ ಸ್ಕೀಮ್,
 • ಡಿಜಿಟಲ್ ಫ್ಲೂಯಲ್ ಇಂಡಿಕೇಟರ್, ಡಬಲ್ ಟ್ರಿಪ್ ಮೀಟರ್,
 • ಹೊಸ ಈಗಲ್ ವಿಂಗ್ಸ್ ಆಂಡಿಯೋ ಸಿಸ್ಟಂ, ಯುಎಸ್‌ಬಿ
ಸುರಕ್ಷತೆ

ಸುರಕ್ಷತೆ

ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ,

ಚಾಲಕ ಬದಿಯ ಏರ್ ಬ್ಯಾಗ್,

ಅತ್ಯುತ್ತಮ ದೇಹದ ರಚನೆ,

ಚಾಲಕ ಸೀಟು ಬೆಲ್ಟ್ ಸೂಚಕ,

ರಿಯರ್ ವೈಪರ್, ಡಿಫಾಗರ್

ಸೆಂಟ್ರಲ್ ಲಾಕ್, ಸೆಕ್ಯೂರಿಟಿ ಅಲರಾಂ

ತಾಂತ್ರಿಕತೆ

ತಾಂತ್ರಿಕತೆ

ಹಗುರ ಭಾರದ ಆಲ್ ಅಲ್ಯೂಮಿನಿಯಂ 1.0 ಲೀಟರ್ ಪೆಟ್ರೋಲ್ ಕೆ10 ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 68 ಅಶ್ವಶಕ್ತಿ (90 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ. ಅಲ್ಲದೆ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಸಹ ಹೊಂದಿರುತ್ತದೆ.

ಇದು ಪೆಟ್ರೋಲ್ ವಿಎಕ್ಸ್‌ಐ, ಎಲ್‌ಎಕ್ಸ್‌ ಮತ್ತು ಎಲ್‌ಎಕ್ಸ್ ಅಂತೆಯೇ ಸಿಎನ್‌ಜಿ ಗ್ರೀನ್ ಎಲ್‌ಎಕ್ಸ್‌ಐ ವೆರಿಯಂಟ್‌ಗಳಲ್ಲಿ ಲಭ್ಯವಿರುತ್ತದೆ. ವ್ಯಾಗನಾರ್ ಎಕ್ಸ್ ಶೋ ರೂಂ ಬೆಲೆ 3.48 ಲಕ್ಷ ರು.ಗಳಿಂದ ಆರಂಭವಾಗಿ 4.34 ಲಕ್ಷ ರು.ಗಳ ವರೆಗೆ ದುಬಾರಿಯೆನಿಸುತ್ತದೆ.

 

English summary
Maruti Suzuki had launched its Wagon R hatchback in India back in December 1999. They are proud to announce that since then they have sold over 15 lakh vehicles of the model.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark