ಮಾರುತಿ ವ್ಯಾಗನಾರ್ ಲಾಂಚ್ ಇನ್ನು ಹತ್ತಿರ ಹತ್ತಿರ!

Written By:

ದೇಶದ ಮುಂಚೂಣಿಯ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಸ್ಟಿಂಗ್ರೇ, ಸದ್ಯದಲ್ಲೇ ಭಾರತಕ್ಕೆ ಎಂಟ್ರಿ ಕೊಡಲಾಗಿದೆ. ಇದಕ್ಕೆ ಪೂರಕವೆಂಬಂತೆ ವ್ಯಾಗನಾರ್ ಕ್ರೀಡಾ ಆವೃತ್ತಿಯಾದ ಸ್ಟಿಂಗ್ರೇ ತವರೂರಾದ ಜಪಾನ್ ಪ್ರವೇಶ ಪಡೆದಿದೆ.

ತನ್ನದೇ ಆದ ವಿಭಿನ್ನ ಲುಕ್ ಹೊಂದಿರುವ ವ್ಯಾಗನಾರ್ ಹ್ಯಾಚ್‌ಬ್ಯಾಕ್, ಕಳೆದೊಂದು ದಶಕದಲ್ಲಿ ತನ್ನ ಸಾನಿಧ್ಯ ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ. ಇತರ ಮಾಡೆಲ್‌ಗಳಿಗೆ ಭಿನ್ನವಾಗಿ ವ್ಯಾಗನಾರ್, ಅತ್ಯಂತ ಯಶಸ್ವಿ ಕಾರು ಎನಿಸಿಕೊಳ್ಳದಿದ್ದರೂ ಮಾರುಕಟ್ಟೆಯಲ್ಲಿ ಸ್ಥಿರ ಮಾರಾಟ ಕಾಯ್ದುಕೊಳ್ಳುವಲ್ಲಿ ಯಶ ಕಂಡಿತ್ತು.

To Follow DriveSpark On Facebook, Click The Like Button
ವ್ಯಾಗನಾರ್ ಸ್ಟಿಂಗ್ರೇ

ವ್ಯಾಗನಾರ್ ಸ್ಟಿಂಗ್ರೇ

ಮೂಲಗಳ ಪ್ರಕಾರ ನೂತನ ವ್ಯಾಗನಾರ್ ಸ್ಟಿಂಗ್ರೇ ಎಡಿಷನ್ ನಿಗದಿತ ವೇಳೆಗಿಂತಲೂ ಎರಡು ತಿಂಗಳುಗಳಷ್ಟು ಮುಂಚಿತವಾಗಿ ಭಾರತ ಪ್ರವೇಶ ಪಡೆಯಲಿದೆ.

ವ್ಯಾಗನಾರ್ ಸ್ಟಿಂಗ್ರೇ

ವ್ಯಾಗನಾರ್ ಸ್ಟಿಂಗ್ರೇ

ನೀವು ಸಾಮಾನ್ಯ ವ್ಯಾಗನಾರ್‌ಗಿಂತಲೂ ಸ್ಟೈಲಿಷ್ ವಿನ್ಯಾಸವನ್ನು ಸ್ಟಿಂಗ್ರೇ ಆವೃತ್ತಿಯಲ್ಲಿ ನೋಡಬಹುದು.

ವ್ಯಾಗನಾರ್ ಸ್ಟಿಂಗ್ರೇ

ವ್ಯಾಗನಾರ್ ಸ್ಟಿಂಗ್ರೇ

ಇನ್ನು ಇಂಟಿರಿಯರ್ ಭಾಗಗಳು ಸಹ ತನ್ನ ಹಿಂದಿನ ಆವೃತ್ತಿಗಳಿಗಿಂತಲೂ ಹೆಚ್ಚು ಪ್ರೀಮಿಯಂ ವಿನ್ಯಾಸ ಪಡೆದುಕೊಳ್ಳಲಿದೆ.

ಎಂಜಿನ್

ಎಂಜಿನ್

ಅದೇ ರೀತಿ ವ್ಯಾಗನಾರ್‌ನಲ್ಲಿರುವ 1 ಲೀಟರ್ 3 ಸಿಲಿಂಡರ್ ಕೆ ಸಿರೀಸ್ ಪೆಟ್ರೋಲ್ ಎಂಜಿನ್ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಇದು 67 ಅಶ್ವಶಕ್ತಿ (90 ಎನ್‌ಎಂ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ವ್ಯಾಗನಾರ್ ಸ್ಟಿಂಗ್ರೇ

ವ್ಯಾಗನಾರ್ ಸ್ಟಿಂಗ್ರೇ

ಇಷ್ಟೆಲ್ಲ ಆದರೂ ಸ್ಟಿಂಗ್ರೇ ವ್ಯಾಗನಾರ್‌ನ ನೂತನ ವರ್ಷನ್ ಆಗಿ ಲಾಂಚ್ ಆಗುವುದೇ ಅಥವಾ ಫೇಸ್‌ಲಿಫ್ಟ್ ಆವೃತ್ತಿಯಾಗಿ ಆಗಮನವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

English summary
Maruti Suzuki gave a little more attention to the Wagon R, considering the car has not been in the limelight for quite sometime now. Enter, the Stingray. A sportier version of the Wagon R which is on sale in its home country, Japan.
Story first published: Wednesday, July 24, 2013, 10:56 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark