ಬೆಂಗ್ಳೂರು ಚಾಲಕರಿಗೆ ಚಾಕೋಲೇಟ್, ಗುಲಾಬಿ ಗಿಫ್ಟ್
ಪ್ರತಿ ಬಾರಿಯೂ ಸಂಚಾರಿ ಸ್ನೇಹಿ ಯೋಜನೆ ಅನುಷ್ಠಾನಗೊಳಿಸುವುದರಲ್ಲಿ ಪ್ರಖ್ಯಾತಿ ಪಡೆದಿರುವ ನಮ್ಮ ಬೆಂಗಳೂರು ಸಂಚಾರ ಪೊಲೀಸರು, ಇದೀಗ ನೂತನ ಯೋಜನೆಯೊಂದನ್ನು ಜಾರಿಗೊಳಿಸಿದ್ದು, ಮದ್ಯ ಸೇವಿಸದೆ ವಾಹನ ಚಲಾಯಿಸುವ ಚಾಲಕರಿಗಾಗಿ ಚಾಕೋಲೇಟ್ ಹಾಗೂ ಗುಲಾಬಿ ಹೂ ಉಡುಗೊರೆ ನೀಡಿ ಮನೆಗೆ ಕಳುಹಿಸಿಕೊಡಲು ನಿರ್ಧರಿಸಿದೆ.
ಈ ಬಗ್ಗೆ ಬೆಂಗಳೂರು ಸಂಚಾರ ಪೊಲೀಸ್ ಫೇಸ್‌ಬುಕ್ ಅಧಿಕೃತ ಪೇಜ್‌ನಲ್ಲಿ ಪ್ರಕಟಣೆ ಹೊರಡಿಸಲಾಗಿದ್ದು, "ಪ್ರಿಯ ಸ್ನೇಹಿತರೆ, ಮೊದಲ ಬಾರಿಗೆ ಬೆಂಗಳೂರಿಗರು ಕುಡಿದು ವಾಹನ ಚಾಲನೆ ಮಾಡುವವರ ತಪಾಸಣೆ ಮಾಡುವ ವೇಳೆ ಯಾರು ಮದ್ಯ ಸೇವಿಸಿರುವುದಿಲ್ಲ ಅವರಿಗೆ ಧನ್ಯವಾದಗಳೊಂದಿಗೆ ಸಿಹಿ ನೀಡಿ ನಗುಮೊಗದೊಂದಿಗೆ ಕಳುಹಿಸುವ ಯೋಜನೆ 2013 ಸೆಪ್ಟೆಂಬರ್ 21ರಿಂದ ಜಾರಿಗೊಳಿಸಲಾಗಿದೆ" ಎಂದು ತಿಳಿಸಿದೆ.
ಅದೇ ಹೊತ್ತಿಗೆ ಪಾನಮತ್ತರಾಗಿ ಡ್ರೈವಿಂಗ್ ಮಾಡುವ ಚಾಲಕರಿಗೆ ತಕ್ಕ ಶಾಸ್ತಿ ಕೂಡಾ ಮಾಡಲಾಗುವುದು. ಅಂದರೆ ತಪಾಸಣೆ ವೇಳೆ ಮದ್ಯ ಸೇವಿಸಿರುವುದು ಕಂಡುಬಂದ್ದಲ್ಲಿ ತಕ್ಷಣ ದಂಡ ವಿಧಿಸಲಾಗುವುದಲ್ಲದೆ ಇನ್ನು ಮುಂದೆ ತಪ್ಪು ಪುನರಾವರ್ತನೆ ಮಾಡದಿರುವಂತೆ ಪಾಠ ಹೇಳಿ ಕೊಡಲಾಗುವುದು.
ಅಷ್ಟಕ್ಕೂ ಬೆಂಗಳೂರು ಸಂಚಾರ ಪೊಲೀಸರು ಕೈಗೊಂಡಿರುವ ನೂತನ ಯೋಜನೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಳ್ಳಿರಿ...


Click it and Unblock the Notifications









