ನಿಸ್ಸಾನ್ ಟೆರನೊ ಅನಧಿಕೃತ ಬುಕ್ಕಿಂಗ್ ಪ್ರಕ್ರಿಯೆ ಆರಂಭ

Written By:

ಕಳೆದ ವಾರವಷ್ಟೇ ಮುಂಬೈನಲ್ಲಿ ಭರ್ಜರಿ ಅನಾವರಣಗೊಂಡಿದ್ದ ನಿಸ್ಸಾನ್ ಟೆರನೊ ಎಸ್‌ಯುವಿ, ಅಕ್ಟೋಬರ್ ತಿಂಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲು ತಯಾರಾಗುತ್ತಿದೆ. ಅಂದ ಹಾಗೆ ಕಂಪನಿಯಿಂದ ಬಂದ ಮಾಹಿತಿಗಳ ಪ್ರಕಾರ ನಿಸ್ಸಾನ್ ಟೆರನೊ ಬುಕ್ಕಿಂಗ್ ಪ್ರಕ್ರಿಯೆ ಸೆಪ್ಟೆಂಬರ್ 1ರಿಂದ ಆರಂಭಗೊಳ್ಳಬೇಕಿತ್ತು.

ಆದರೆ ನಿಸ್ಸಾನ್ ಟೆರನೊ ಅನಧಿಕೃತ ಬುಕ್ಕಿಂಗ್ ಈಗಾಗಲೇ ಆರಂಭಗೊಂಡಿರುವುದಾಗಿ ಮೂಲಗಳು ತಿಳಿಸಿವೆ. ದೇಶದ ಬಹುತೇಕ ನಿಸ್ಸಾನ್ ಡೀಲರುಶಿಪ್‌ಗಳಲ್ಲಿ ರು. 50,000ದಿಂದ 1,00,000 ರು.ಗಳನ್ನು ಪಾವತಿಸಿದರೆ ಮುಂಗಡ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ ಎಂಬ ಬಗ್ಗೆ ವರದಿಗಳಿವೆ.

To Follow DriveSpark On Facebook, Click The Like Button

ರೆನೊ ಡಸ್ಟರ್ ರಿ ಬ್ಯಾಡ್ಜ್ ಪಡೆದುಕೊಂಡಿರುವ ನಿಸ್ಸಾನ್ ಟೆರನೊ ಪ್ರೀಮಿಯಂ ಎಸ್‌ಯುವಿ ವಿಭಾಗದಲ್ಲಿ ಕಾಣಿಸಿಕೊಳ್ಳಲಿದೆ. ನೂತನ ವಿನ್ಯಾಸ ಹಾಗೂ ಐಷಾರಾಮಿ ಇಂಟಿರಿಯರ್ ಭಾಗಗಳು ಟೆರನೊ ಕಾರಿನ ವಿಶೇಷತೆಯಾಗಿರಲಿದೆ.

ಇದು 10 ಲಕ್ಷ ರು.ಗಳ ಅಸುಪಾಸಿನಲ್ಲಿ ಭಾರತ ಮಾರುಕಟ್ಟೆ ಪ್ರವೇಶಿಸಲಿದೆ. ವಿಭಿನ್ನ ಶೈಲಿಯ ಬಂಪರ್, ಟೈಲ್ ಗೇಟ್, ಹೆಡ್ ಲ್ಯಾಂಪ್, ಟೈಲ್ ಲೈಟ್ ಹಾಗೂ ಎಲ್ಲ ಹೊಸತನದ ಫ್ರಂಟ್ ಗ್ರಿಲ್ ನಿಸ್ಸಾನ್ ಟೆರನೊ ವೈಶಿಷ್ಟ್ಯಕ್ಕೆ ಕಾರಣವಾಗಿದೆ. ಕಂಪನಿಯ ಪ್ರಕಾರ ನಿಸ್ಸಾನ್ ಟೆರನೊ ವಿತರಣೆಯು ಅಕ್ಟೋಬರ್ ತಿಂಗಳಲ್ಲಿ ಆರಂಭವಾಗಲಿದೆ.

English summary
Nissan Terrano launch will take place in the first week of October, with official bookings starting from September 1st. But few Nissan dealerships across the country have already begin the bookings for Terrano. booking amount as quoted by the dealers between Rs 50,000 to Rs 1,00,000.
Story first published: Tuesday, August 27, 2013, 15:28 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark