2 ವಾರದಲ್ಲಿ 2ನೇ ಬಾರಿ ಪೆಟ್ರೋಲ್ ದರ ಕಡಿತ

By Nagaraja

ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿರುವ ಹಿನ್ನಲೆಯಲ್ಲಿ ದೇಶೀಯ ಖಾಸಗಿ ತೈಲ ಕಂಪನಿಗಳು ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 85 ಪೈಸೆಗಳಷ್ಟು ಕಡಿತಗೊಳಿಸಿದ್ದು, ಪರಿಷ್ಕೃತ ದರ ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಯಾಗಿದೆ.

ಈ ಮೂಲಕ ಎರಡು ವಾರಗಳ ಅವಧಿಯಲ್ಲಿ ಇದು ಎರಡನೇ ಬಾರಿ ಪೆಟ್ರೋಲ್ ದರದಲ್ಲಿ ಇಳಿಕೆ ಕಂಡುಬಂದಿದೆ. ಇದಕ್ಕೂ ಮುನ್ನ ಎರಡು ವಾರಗಳ ಹಿಂದಷ್ಟೇ ಖಾಸಗಿ ಕಂಪನಿಗಳು ಇಂಧನಗಳ ಬೆಲೆಯನ್ನು 2 ರುಪಾಯಿಗಳಷ್ಟು ಇಳಿಕೆಗೊಳಿಸಿತ್ತು.

ಇದೀಗ ಕಡಿತಗೊಳಿಸಲಾಗಿರುವ ಪೆಟ್ರೋಲ್ ದರ ಮೌಲ್ಯವರ್ಧಿತ ತೆರಿಗೆಯಿಂದ ಹೊರತಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಕಂಪನಿ ತಿಳಿಸಿದೆ. ಇದರೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 1.02 ರು. ಕಡಿಗೊಂಡಿದ್ದು ಪ್ರತಿ ಲೀಟರ್‌ಗೆ 67.29 ರು.ಗೆ ತಲುಪಿದೆ.

ಪರಿಷ್ಕೃತ ದರ ಇಂತಿದೆ

  • ಬೆಂಗಳೂರು: 73.94 (1.11 ರು. ಕಡಿತ)
  • ದೆಹಲಿ: 67.29 (1.02 ರು. ಕಡಿತ)
  • ಮುಂಬೈ: 74.14 (1.07 ರು. ಕಡಿತ)
  • ಚೆನ್ನೈ: 70.34 (1.30 ರು. ಕಡಿತ)
  • ಕೊಲ್ಕತ್ತಾ: 74.72 (1.07 ರು. ಕಡಿತ)

ಎಲ್‌ಪಿಜಿ ರು. 3 ಇಳಿಕೆ
ಈ ನಡುವೆ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲೂ ಮೂರು ರುಪಾಯಿ ಇಳಿಕೆ ಕಂಡುಬಂದಿದ್ದು, ಸೋಮವಾರದಿಂದಲೇ ಪರಿಷ್ಕೃತ ದರ ಜಾರಿಗೆ ಬಂದಿದೆ. ಸದ್ಯ ವರ್ಷಕ್ಕೆ 9 ಸಿಲಿಂಡರ್‌ಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತಿದೆ.

More from DriveSpark

Article Published On: Tuesday, April 2, 2013, 10:28 [IST]
English summary
Oil companies have cut petrol rates by 85 paise without tax effective from Tuesday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+