ಫ್ಯಾನ್ಸಿ ನಂಬರ್ ಲಗತ್ತಿಸಿದ್ದಲ್ಲಿ ದಂಡ ಕಟ್ಟಲು ರೆಡಿಯಾಗಿರಿ!
ಇನ್ನು ಕೆಲವು ಬಾರಿ ತಮಗೆ ಮನಬಂದಂತೆ ನಂಬರ್ ಪ್ಲೇಟ್ ಲಗತ್ತಿಸಿ ರಸ್ತೆಗಳಲ್ಲಿ ಹಾಯಾಯಿ ಗಾಡಿ ಓಡಿಸುತ್ತಾರೆ. ಉದಾಹರಣೆಗೆ ಕಾರಿನ ನಂಬರ್ 8055 ಎಂಬುದಾದ್ದಲ್ಲಿ ಅದನ್ನು 'BOSS' ರೀತಿಯಲ್ಲಿ ಚಿತ್ರಿಕರಿಸಿ ತಾನೇ ಬಾಸ್ ಎಂಬುದನ್ನು ಸಾರಲು ಬಯಸುತ್ತಾರೆ.
ಅಂತವರು ಪೊಲೀಸರು ಸೆರೆ ಸಿಕ್ಕಿದ್ದಲ್ಲಿ ಒಂದು ನೂರು ರುಪಾಯಿ ನೋಟನ್ನು ನೀಡಿ ಬಚಾವ್ ಆಗುತ್ತಿದ್ದರು. ಆದರೆ ಇನ್ನು ಮುಂದೆ ಹಾಗೆ ಆಗಲಾರದು. ಯಾಕೆಂದರೆ ಫ್ಯಾನ್ಸಿ ನಂಬರ್ ಪ್ಲೇಟ್ ಕಂಡುಬಂದಲ್ಲಿ ಅಂತಹ ಕಾರು ಮಾಲಿಕರ ಮೇಲೆ 2,000 ರು.ಗಳಿಂದ 5,000 ದಂಡ ವಿಧಿಸುವ ಸಾಧ್ಯತೆಗಳು ನಿಚ್ಚಳವಾಗಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇದು ಕಟ್ಟುನಿಟ್ಟಾಗಿ ಜಾರಿಗೆ ಬರುತ್ತಿದೆ. ಹಿಂದೆ ಮೋಟಾರ್ ವೆಹಿಕಲ್ ಕಾಯಿದೆ ಅಡಿಯಲ್ಲಿ ಪರಿಚ್ಛೇದ 50 CMVR 177 ಪ್ರಕಾರ ಗರಿಷ್ಠ 100 ರು. ದಂಡ ವಿಧಿಸಲಾಗಿತ್ತು. ಆದರೆ ಇದೀಗ ಪರಿಚ್ಛೇದ 39 ಪ್ರಕಾರ ಸರಿಯಾದ ನಂಬರ್ ಪ್ಲೇಟ್ ಲಗತ್ತಿಸದಿದ್ದಲ್ಲಿ ಕನಿಷ್ಠ ರು. 2,000ದಿಂದ ದಂಡ ವಿಧಿಸಬಹುದಾಗಿದೆ. ಸೊ, ಫ್ಯಾನ್ಸಿ ನಂಬರ್ ಲಗತ್ತಿಸಿದ್ದಲ್ಲಿ ದಂಡ ಕಟ್ಟಲು ರೆಡಿಯಾಗಿರಿ ಬಾಸ್!


Click it and Unblock the Notifications









