ಡೀಸೆಲ್ ಕಾರುಗಳನ್ನು ಓವರ್‌ಟೇಕ್ ಮಾಡಿದ ಪೆಟ್ರೋಲ್ ಕಾರು
ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಮಾರಾಟದ ಅಂಕಿಅಂಶದಲ್ಲಿ ಡೀಸೆಲ್ ಕಾರುಗಳನ್ನು ಪೆಟ್ರೋಲ್ ಕಾರುಗಳು ಓವರ್‌ಟೇಕ್ ಮಾಡಿದೆ. ದರದಲ್ಲಿ ಗಣನೀಯ ವರ್ಧನೆ ಕಂಡುಬರುತ್ತಿರುವುದು ಹಾಗೂ ಅತ್ಯಧಿಕ ತೆರಿಗೆ ವಿಧಿಸಿರುವುದು ಡೀಸೆಲ್ ಕಾರುಗಳ ಹಿನ್ನಡೆಗೆ ಕಾರಣವಾಗಿದೆ.
ಸಮಕಾಲೀನ ಪರಿಸ್ಥಿತಿಯಲ್ಲಿ ಡೀಸೆಲ್ ಇಂಧನ ದರ ತುಟ್ಟಿಯಾಗಿರುವುದು ಗ್ರಾಹಕರನ್ನು ಪೆಟ್ರೋಲ್ ಕಾರುಗಳನ್ನು ಖರೀದಿಸುವಂತೆ ಪ್ರೇರೇಪಿಸುತ್ತಿದೆ. ಇದರ ಫಲಿತಾಂಶ ಮಾರಾಟದಲ್ಲೂ ಕಂಡುಬರುತ್ತಿದ್ದು, ಡೀಸೆಲ್ ಕಾರುಗಳ ಹಿನ್ನಡೆಗೆ ಕಾರಣವಾಗಿದೆ.
ಸುದೀರ್ಘ 25 ತಿಂಗಳುಗಳ ಬಳಿಕ ಮಾರುಕಟ್ಟೆಯಲ್ಲಿ ಇಂತಹದೊಂದು ಬೆಳವಣಿಗೆ ಕಂಡುಬಂದಿದೆ. ಇದರಿಂದಾಗಿ ಯೋಜನೆ ಬದಲಾವಣೆಗೆ ಮುಂದಾಗಿರುವ ಕಾರು ತಯಾರಕ ಕಂಪನಿಗಳು ಸಹ ಮಗದೊಮ್ಮೆ ಪೆಟ್ರೋಲ್ ಕಾರುಗಳನ್ನು ಉತ್ಪಾದಿಸುವುದರಲ್ಲಿ ಗಮನ ಕೇಂದ್ರಿತವಾಗಿದೆ.
ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇಕಡಾ 42ರಷ್ಟು ಗ್ರಾಹಕರು ಮಾತ್ರ ಡೀಸೆಲ್ ಕಾರುಗಳನ್ನು ಖರೀದಿಸಿದ್ದಾರೆ. ಕಳೆದ ವರ್ಷ ಇದು ಶೇಕಡಾ 54ರಷ್ಟಿತ್ತು.
ಮತ್ತೊಂದೆಡೆ ಕಳೆದ ತಿಂಗಳ ಮಾರಾಟದಲ್ಲಿ ಪೆಟ್ರೋಲ್ ಕಾರುಗಳು ಶೇಕಡಾ 12.5ರಷ್ಟು ಪ್ರಗತಿ ಸಾಧಿಸಿದೆ. ಒಟ್ಟಿನಲ್ಲಿ ಡೀಸೆಲ್ ಕಾರುಗಳ ಬೇಡಿಕೆ ಕುಸಿದಿರುವುದು ಪೆಟ್ರೋಲ್ ಕಾರುಗಳಿಗೆ ಶುಭ ಸಂಕೇತವಾಗಿ ಪರಿಣಮಿಸಿದೆ.


Click it and Unblock the Notifications









