ಪೆಟ್ರೋಲ್, ಡೀಸೆಲ್ ದರಗಳಲ್ಲಿ ಅಲ್ಪ ಪ್ರಮಾಣದ ಏರಿಕೆ
ಜಾಗತಿಕ ತೈಲ ಬೆಲೆ ಅನುಸಾರವಾಗಿ ಮಗದೊಮ್ಮೆ ಕೇಂದ್ರ ಸರಕಾರ ಪೆಟ್ರೋಲ್ ಹಾಗೂ ಡೀಸೆಲ್ ದರಗಳನ್ನು ಏರಿಕೆಗೊಳಿಸಿದೆ. ಪ್ರಸ್ತುತ ಅಲ್ಪ ಪ್ರಮಾಣದ ದರ ಏರಿಕೆ ನೀತಿಯು ಜಾರಿಗೆ ಬಂದಿದೆ.
ಶುಕ್ರವಾರದಿಂದಲೇ ಹೊಸ ದರ ಅನ್ವಯವಾಗಿದ್ದು, ಪೆಟ್ರೋಲ್ ಲೀಟರ್‌ಗೆ 41 ಹಾಗೂ ಡೀಸೆಲ್ ದರ ಲೀಟರ್‌ಗೆ 10 ಪೈಸೆ ಏರಿಕೆ ಕಂಡಿದೆ. ಪೆಟ್ರೋಲ್ ವಿತರಕರಿಗೆ ಕಮಿಷನ್ ಪಾವತಿಸುವ ನಿಟ್ಟಿನಲ್ಲಿ ಇಂಧನ ದರದಲ್ಲಿ ಏರಿಕೆ ಕಂಡುಬಂದಿದೆ. ಆದರೆ ಇದರ ಮೇಲೆ ಸ್ಥಳೀಯ ದರ ಅಥವಾ ವ್ಯಾಟ್ ತೆರಿಗೆ ಹೊರೆ ಇರುವುದಿಲ್ಲ.
ಹೊಸ ದರಯಂತೆ ದೆಹಲಿಯಲ್ಲಿ ಪೆಟ್ರೋಲ್ ದರ 71.02 ರು.ಗಳಿಂದ 71.50ಕ್ಕೆ ಹಾಗೆಯೇ ಡೀಸೆಲ್ ದರ 53.67ರಿಂದ 53.80 ರು.ಗಳಿಗೆ ಏರಿಕೆಯಾಗಿದೆ.



Click it and Unblock the Notifications








