ಕೇಂದ್ರದಿಂದ ಮತ್ತೆ ಚಾಟಿಯೇಟು; ಪೆಟ್ರೋಲ್ ರು. 1.84 ತುಟ್ಟಿ
ದೇಶದ ಮಧ್ಯಮ ವರ್ಗದ ಜನರಿಗೆ ಕೇಂದ್ರ ಸರಕಾರ ಮತ್ತೊಮ್ಮೆ ಚಾಟಿಯೇಟು ಬೀಸಿದ್ದು, ಶುಕ್ರವಾರ ಮಧ್ಯ ರಾತ್ರಿಯಿಂದಲೇ ಜಾರಿಗೆ ಬರುವಂತೆ ಪೆಟ್ರೋಲ್ ದರದಲ್ಲಿ ಪ್ರತಿ ಲೀಟರ್‌ಗೆ 1.84 ರುಪಾಯಿ ಹೆಚ್ಚಳಗೊಳಿಸಲಾಗಿದೆ.
ತೈಲ ಕಂಪನಿಗಳು ಕಳೆದ ತಿಂಗಳು ಫೆಬ್ರವರಿ 15ರಂದು ಪೆಟ್ರೋಲ್ ದರವನ್ನು ಲೀಟರಿಗೆ 1.50 ಹಾಗೂ ಡೀಸೆಲ್ ದರವನ್ನು ಲೀಟರಿಗೆ 45 ಪೈಸೆ ಏರಿಕೆಗೊಳಿಸಿತ್ತು. ಇದೀಗ ಎರಡು ವಾರಗಳಲ್ಲಿ ಮತ್ತೆ ದರ ಏರಿಕೆ ಬಿಸಿ ಮುಟ್ಟಿಸಿದ್ದಾರೆ.
ಅಂದ ಹಾಗೆ ಆಯಾ ರಾಜ್ಯಗಳ ತೆರಿಗೆ ಆಧರಿಸಿ, ದರಗಳಲ್ಲಿ ವ್ಯತ್ಯಯ ಕಂಡುಬರಲಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್‌ಗೆ 1.84 ರುಪಾಯಿ ಏರಿಕೆಗೊಂಡಿದ್ದು ಪರಿಷ್ಕೃತ ದರ 77.88 ಆಗಿರಲಿದೆ.
ನವದೆಹಲಿ - 70.46
ಮುಂಬೈ - 77.29
ಕೊಲ್ಕತ್ತಾ - 77.99
ಚೆನ್ನೈ - 73.57
ದೇಶದ ಇತರ ನಾಲ್ಕು ಮಹಾನಗರಗಳಿಗೆ ಹೋಲಿಸಿದಾಗ ಬೆಂಗಳೂರಿನಲ್ಲಿ ಅತ್ಯಧಿಕ ದರ ಕಂಡುಬಂದಿದೆ. ಈ ಮೂಲಕ 2010ರಲ್ಲಿ ದರ ಏರಿಕೆ-ಇಳಿಕೆ ನಿಯಂತ್ರಣವನ್ನು ತೈಲೋದ್ಯಮಕ್ಕೆ ಬಿಟ್ಟುಕೊಟ್ಟ ಬಳಿಕವೀಗ 21ನೇ ಬಾರಿ ದರ ಏರಿಕೆ ಕಂಡುಬಂದಿದೆ.


Click it and Unblock the Notifications
