ಗಾಯದ ಮೇಲೆ ಬರೆ; ಪೆಟ್ರೋಲ್ ಮತ್ತೆ ತುಟ್ಟಿ
ಗ್ರಾಹಕರ ಗಾಯದ ಮೇಲೆ ಮತ್ತೆ ಬರೆ ಎಳೆದಿರುವ ಕೇಂದ್ರ ಸರಕಾರ, ಸದ್ದಿಲ್ಲದೆ ಶುಕ್ರವಾರ ಮಧ್ಯರಾತ್ರಿಯಂದು ಪೆಟ್ರೋಲ್ ದರವನ್ನು ರು. 1.63ರಷ್ಟು ಏರಿಕೆಗೊಳಿಸಿದೆ. ಈ ಮೂಲಕ ಜೂನ್ ಬಳಿಕ ಏಳನೇ ಬಾರಿಗೆ ದರ ಏರಿಕೆ ಕಂಡಿದೆ.
ನೂತನ ದರ ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಇದು ವ್ಯಾಟ್ ಹಾಗೂ ಸ್ಥಳೀಯ ಮಾರಾಟ ತೆರಿಗೆ ಹೊರತುಪಡಿಸಿದ್ದಾಗಿದ್ದು, ಗ್ರಾಹಕರನ್ನು ತಲುಪುವಾಗ ಇನ್ನಷ್ಟು ದುಬಾರಿಯಾಗಲಿದೆ.
ರುಪಾಯಿ ಅಪಮೌಲ್ಯ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಯೇರಿಕೆ ಹಿನ್ನಲೆಯಲ್ಲಿ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಪೆಟ್ರೋಲಿಯಂ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೆ ಶೀಘ್ರದಲ್ಲೇ ಡೀಸೆಲ್ ಹಾಗೂ ಎಲ್‌ಪಿಜಿ ಸಿಲಿಂಡರ್ ದರ ಏರಿಕೆ ಮಾಡುವ ಬಗ್ಗೆಯೂ ಸೂಚನೆ ನೀಡಲಾಗಿದೆ. ಈ ಮೂಲಕ ಜೂನ್ ಬಳಿಕ ಪೆಟ್ರೋಲ್ ದರಗಳಲ್ಲಿ ರು. 10.80ರಷ್ಟು ವರ್ಧನೆಯಾಗಿದೆ.
ದೇಶದ ಪ್ರಮುಖ ನಗರಗಳ ಪೆಟ್ರೋಲ್ ಪರಿಷ್ಕೃತ ದರ ಇಂತಿದೆ:
ಬೆಂಗಳೂರು
ಹಿಂದಿನ ದರ: ರು. 81.21
ಪರಿಷ್ಕೃತ ದರ: ರು. 83.35
ಏರಿಕೆ: ರು. 2.14
ದೆಹಲಿ
ಹಿಂದಿನ ದರ: ರು. 74.10
ಪರಿಷ್ಕೃತ ದರ: ರು. 76.06
ಏರಿಕೆ: ರು. 1.96
ಮುಂಬೈ
ಹಿಂದಿನ ದರ: ರು. 81.57
ಪರಿಷ್ಕೃತ ದರ: ರು. 83.33
ಏರಿಕೆ: ರು. 2.06
ಚೆನ್ನೈ
ಹಿಂದಿನ ದರ: ರು. 77.48
ಪರಿಷ್ಕೃತ ದರ: ರು. 79.55
ಏರಿಕೆ: ರು. 2.07
ಕೋಲ್ಕತ್ತಾ
ಹಿಂದಿನ ದರ: ರು. 81.57
ಪರಿಷ್ಕೃತ ದರ: ರು. 83.62
ಏರಿಕೆ: ರು. 2.05


Click it and Unblock the Notifications









