ಸಾಧಾರಣ ಕಾರು ಖರೀದಿಸುವಂತೆ ಪಾದ್ರಿಗಳಿಗೆ ಪೋಪ್ ಸಲಹೆ

By Nagaraja

ಐಷಾರಾಮಿ ಕಾರುಗಳನ್ನು ಹೊರತುಪಡಿಸಿ ಸಾಧಾರಣ ಕಾರುಗಳನ್ನು ಖರೀದಿಸುವಂತೆ ಪಾದ್ರಿಗಳಿಗೆ ಪೋಪ್ ಫ್ರಾನ್ಸಿಸ್ ಸಲಹೆ ಮಾಡಿದ್ದಾರೆ. ಪಾದ್ರಿಗಳು ಆಡಂಬರ ಕಾರುಗಳನ್ನು ಹೊಂದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಪೋಪ್ ವಿನಯ ಸಂಪನ್ನ ರೀತಿಯಲ್ಲಿ ಸಾಮಾನ್ಯ ಕಾರುಗಳನ್ನು ಮಾತ್ರ ಇಟ್ಟುಕೊಳ್ಳುವಂತೆ ಸೂಚಿಸಿದ್ದಾರೆ.

ಕಥೋಲಿಕ್ ಚರ್ಚ್ ಬಡವರ ಕಡೆ ಹೆಚ್ಚೆಚ್ಚು ಗಮನಕೊಡುವ ನಿಟ್ಟಿನಲ್ಲಿ ಯುವ ಹಾಗೂ ತರಬೇತಿ ಪಡೆಯುತ್ತಿರುವ ಪಾದ್ರಿಗಳಿಗೆ ಸಲಹೆ ಮಾಡಿರುವ ಪೋಪ್ ಫ್ರಾನ್ಸಿಸ್, ಜಗತ್ತಿನಲ್ಲಿ ಆಧುನಿಕ ಸ್ಮಾರ್ಟ್ ಫೋನ್ ಅಥವಾ ಫ್ಯಾಶನ್ ವಸ್ತುಗಳನ್ನು ಪಡೆಯುವುದೊಂದೇ ಸಂತೋಷವನ್ನು ಸಂಪಾದಿಸುವ ಮಾರ್ಗವಲ್ಲ ಎಂದಿದ್ದಾರೆ.

ಪಾದ್ರಿಗಳು ಐಷಾರಾಮಿ ಕಾರುಗಳನ್ನು ಇಟ್ಟುಕೊಂಡಿರುವದನ್ನು ನೋಡಿದಾಗ ತುಂಬಾನೇ ನೋವುಂಟಾಗುತ್ತದೆ ಎಂದವರು ವಿವರಿಸಿದರು. ನಮಗೆ ಅನೇಕ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸಲು ಕಾರಿನ ಅವಶ್ಯಕತೆಯಿದೆ. ಆದರೆ ದಯವಿಟ್ಟು ಸಾಮಾನ್ಯ ಕಾರುಗಳನ್ನು ಆಯ್ಕೆ ಮಾಡಿರಿ ಎಂದು ವಿನಂತಿ ಮಾಡಿದ್ದಾರೆ.

ಹಾಗೊಂದು ವೇಳೆ ನೀವು ಫ್ಯಾನ್ಸಿ ಕಾರುಗಳನ್ನು ಇಷ್ಟಪಡವುದಾದ್ದಲ್ಲಿ ಜಗತ್ತಿನಲ್ಲಿ ಹಸಿವಿನಿಂದಾಗಿ ಎಷ್ಟೊಂದು ಮಕ್ಕಳು ಮರಣಕ್ಕೆ ಶರಣಾಗುತ್ತಿದ್ದಾರೆ ಎಂಬುದರ ಬಗ್ಗೆ ಸ್ವಲ್ಪ ಆಲೋಚನೆ ಮಾಡಿ ನೋಡಿ ಎಂದಿದ್ದಾರೆ.

ಅಂದ ಹಾಗೆ ವ್ಯಾಟಿಕನ್ ನಗರದಲ್ಲಿ ಸಂಚರಿಸಲು ಪೋಪ್ ಫ್ರಾನ್ಸಿಸ್ ಫೋರ್ಡ್ ಫೋಕಸ್ ಕಾರನ್ನು ಬಳಕೆ ಮಾಡುತ್ತಾರೆ.

More from DriveSpark

Article Published On: Saturday, July 13, 2013, 14:33 [IST]
English summary
Pope Francis said on Saturday it pained him to see priests driving flashy cars, and told them to pick something more "humble".
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+