ಕ್ಯಾಥೋಲಿಕ್ ಧರ್ಮಗುರು ಪೋಪ್ ಈಗ ಗ್ರೀನ್ ಪೋಪ್!

Posted By:
ವ್ಯಾಟಿಕನ್ ಸಿಟಿ, ಆ 6: ಕ್ಯಾಥೋಲಿಕ್ ಧರ್ಮಗುರು, ರೋಮ್‌ನ ಬಿಷಪ್, ಪೋಪ್(265ನೇ ಪೋಪ್) ಬೆಂಡಿಕ್ಟ್ XVI ಈಗ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಕಾರೊಂದನ್ನು ಬಳಸುವ ಮೂಲಕ ಗ್ರೀನ್ ಪೋಪ್ ಆಗಿದ್ದಾರೆ.

ಕ್ಯಾಥೋಲಿಕ್ ಇಗರ್ಜಿಯ ಮುಖ್ಯಸ್ಥರಾದ ಪೋಪ್ ಬೆಂಡಿಕ್ಟಿಗೆ ರೆನೊ ಕಂಪನಿಯು ಮಾರ್ಪಾಡಿಸಿರುವ(ಕಸ್ಟಮೈಸ್ಡ್) ಕಾಂಗೊ ಎಂಬ ಎಲೆಕ್ಟ್ರಿಕ್ ಕಾರು ನೀಡಿದೆ. ಪರಿಸರ ಸ್ನೇಹಿ ವಾಹನ ಬಳಸಿದ ಮೊದಲ ಕ್ಯಾಥೋಲಿಕ್ ಧರ್ಮಗುರು ಇವರಾಗಿದ್ದಾರೆ.

85 ವರ್ಷ ವಯಸ್ಸಿನ ಪೋಪ್ ಬೆಂಡಿಕ್ಟ್ XVIಗೆ ಈ ವರ್ಷದ ಆರಂಭದಲ್ಲಿ ಇಟಲಿಯ ವಾಹನ ಕಂಪನಿ ಎನ್ ಡಬ್ಲ್ಯುಜಿ ಕಾರೊಂದನ್ನು ನೀಡಿತ್ತು. ಆದರೆ ಈ ಕಾರನ್ನು ಅವರ ಪ್ರೆಸ್ ಆಫೀಸ್ ಬಳಕೆಗಾಗಿ ಬಳಸಲಾಗುತ್ತಿತ್ತು.

ವ್ಯಾಟಿಕನ್ ಸಿಟಿಯಿಂದ ಹೊರಭಾಗಕ್ಕೆ ಪ್ರಯಾಣ ಕೈಗೊಳ್ಳಬೇಕಾದರೆ ಪೋಪ್ ಬೆಂಡಿಕ್ಟ್ ಬುಲೆಟ್ ಪ್ರೂಫ್ ಕಸ್ಟಮೈಸ್ಡ್ ಮರ್ಸಿಡಿಸ್ ಬೆಂಝ್ ಕಾರು ಬಳಸುತ್ತಾರೆ. ತನ್ನ ನಿವಾಸದ ಆಸುಪಾಸಿನ ಪ್ರಯಾಣಕ್ಕೆ ನೂತನ ಕಾಂಗೊ ಎಲೆಕ್ಟ್ರಿಕ್ ಕಾರು ಬಳಸುವ ನಿರೀಕ್ಷೆಯಿದೆ.

ಸೀಟು ಬೆಲ್ಟ್ ಧರಿಸದೆ ಪ್ರಯಾಣಿಸಿದ ವಿಚಾರವಾಗಿ ಪೋಪ್ ಬೆಂಡಿಕ್ಟ್ ವಿರುದ್ಧ ಹಿಂದೊಮ್ಮೆ ವಕೀಲರೊಬ್ಬರು ಈ ಹಿಂದೆ ದೂರು ನೀಡಿದ್ದರು. ಓದಿ: ಸಂಚಾರಿ ನಿಯಮ ಉಲ್ಲಂಘನೆ: ಪೋಪ್ ವಿರುದ್ಧ ಕೇಸ್.

English summary
Customized white Renault Kangoo electric car presented to Pope Benedict XVI. Now pope goes green.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark