ಹೊಸ ವರ್ಷಕ್ಕೆ ಡಸ್ಟರ್ ಡಕಾರ್ Rally ಹಬ್ಬ

By Nagaraja

ಭಾರತೀಯ ಮಾರುಕಟ್ಟೆಯಲ್ಲಿ ಅಪಾರ ಯಶಸ್ಸು ಸಾಧಿಸಿದ ಬಳಿಕ ಕ್ರೀಡಾ ಯುಟಿಲಿಟಿ ವೆಹಿಕಲ್‌ನಲ್ಲಿ ತನ್ನದೇ ಆದ ವೈಶಿಷ್ಟ್ಯ ಉಳಿಸಿಕೊಂಡಿರುವ ರೆನೊ ಡಸ್ಟರ್ ಹೊಸ ವರ್ಷದಲ್ಲಿ ಜಾಗತಿಕವಾಗಿ ಹೆಸರಾಂತ ಆಫ್ ರೋಡ್ ಮೋಟಾರ್ ಸ್ಪೋರ್ಟಿಂಗ್ ಡಕಾರ್ Rallyಗೆ ಸಜ್ಜಾಗುತ್ತಿದೆ.

ಕಾರ್ ಟ್ರೇಡ್ ಡಾಟ್ ಕಾಮ್ ವರದಿ ಪ್ರಕಾರ ರೆನೊ ಡಸ್ಟರ್ ಸ್ಪೆಷಲ್ ವರ್ಷನ್ ಕಾರು ಡಕಾರ್ Rallyಯಲ್ಲಿ ಭಾಗಿಯಾಗಲಿದೆ. ಈ ಮೂಲಕ ವಿಶ್ವದೆಲ್ಲೆಡೆಯ ಅಭಿಮಾನಿಗಳನ್ನು ಮನರಂಜಿಸಲಿದೆ.

ಭಾರತೀಯ ಮಾರುಕಟ್ಟೆಗೆ ಡಸ್ಟರ್ ಮಾದರಿಯನ್ನು ಪರಿಚಯಿಸಿದ್ದ ಫ್ರಾನ್ಸ್‌ನ ಈ ದೈತ್ಯ ವಾಹನ ತಯಾರಕ ಕಂಪನಿಯು ದೇಶದ ಈ ಸೆಗ್ಮೆಂಟ್‌ನ ಮಾರುಕಟ್ಟೆಯಲ್ಲಿ ಭಾರಿ ಜನಪ್ರಿಯತೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ವಿಶ್ವದ ಆಫ್ ರೋಡ್ ಮೋಟಾರ್ ಸ್ಪೋರ್ಟಿಂಗ್ ರೇಸ್‌ನಲ್ಲಿ ಡಕಾರ್ Rally ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಹಾಗೆಯೇ ಡಸರ್ಟ್ ಹಾಗೂ ಟೆರೈನ್ ಭೂಮಿಯಲ್ಲಿ ಈ ಎಸ್‌ಯುವಿ ಕಾರು ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಲಿದೆ.

ವಿಶೇಷವಾಗಿ ಸಿದ್ಧಪಡಿಸಲಾದ ಡಸ್ಟರ್ ಕಾರುಗಳು ಡಕಾರ್ ರೇಸಿಂಗ್‌ನಲ್ಲಿ ಭಾಗಿಯಾಗಲಿದೆ. 3.5 ಲೀಟರ್ ಹಾಗೂ v6 ಪೆಟ್ರೋಲ್ ಮೋಟಾರ್‌ನಿಂದ ನಿಯಂತ್ರಿಸಲ್ಪಟ್ಟ ಡಸ್ಟರ್ ಮಾದರಿಯು ಪ್ರಭಾವಿ 300 ಬಿಎಚ್‌ಪಿ ಪವರ್ ಉತ್ಪಾದಿಸಲಿದೆ.

ರೆನೊ ಡಸ್ಟರ್ ಡಕಾರ್ Rally

ಹೊಸ ವರ್ಷಕ್ಕೆ ಕಾಲಿಟ್ಟಿರುವಂತೆಯೇ ಎಲ್ಲ ಹಂತದಲ್ಲಿಯೂ ಕಾರು ಪ್ರಿಯರನ್ನು ಸೆಳೆಯುವ ಯೋಜನೆಯನ್ನು ರೆನೊ ಹೊಂದಿದೆ.

ರೆನೊ ಡಸ್ಟರ್ ಡಕಾರ್ Rally

2013 ರೆನೊ ಡಕಾರ್ Rally ಜನವರಿ 5ರಿಂದ 15ರ ವರೆಗೆ ಆಯೋಜನೆಯಾಗಲಿದೆ. ಡಕಾರ್ Rally ವಿಶ್ವದ ಅತ್ಯಂತ ಕಠಿಣ Rallyಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತಿದೆ.

ರೆನೊ ಡಸ್ಟರ್ ಡಕಾರ್ Rally

ದಕ್ಷಿಣ ಅಮೆರಿಕದ ಲೈಮಾ, ಪೆರು, ಅರ್ಜೆಂಟೀನಾ ಹಾಗೂ ಸಾಂಟಿಯಾಗೊ ದೇಶಗಳಲ್ಲಿ ಹಾದು ಹೋಗಲಿರುವ ರೇಸ್ 8000 ಕೀ.ಮೀ ದೂರವನ್ನು ಕ್ರಮಿಕರಿಸಲಿದೆ.

ರೆನೊ ಡಸ್ಟರ್ ಡಕಾರ್ Rally

ಭಾರತದ ವರ್ಷದ ಕಾರು 2013 ಗೌರವಕ್ಕೂ ರೆನೊ ಡಸ್ಟರ್ ಪಾತ್ರವಾಗಿತ್ತು.

ರೆನೊ ಡಸ್ಟರ್ ಡಕಾರ್ Rally

ಸದ್ಯ ರೆನೊ ಡಸ್ಟರ್ ದೇಶದ ಮಾರುಕಟ್ಟೆಯಲ್ಲಿ ಅತಿ ಜನಪ್ರಿಯತೆ ಗಿಟ್ಟಿಸಿಕೊಂಡಿದೆ.

More from DriveSpark

Article Published On: Tuesday, January 1, 2013, 12:06 [IST]
English summary
Renault Duster is all set to off-road and conquer new shores in 2013. Renault has revealed the Dakar Rally Duster avatar, which is all set to take on the toughest terrains of the world during the 2013 Dakar Rally.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+