ಬೆಂಗ್ಳೂರು ಟೆಕ್ಕಿಗಳೇ ಕಾರ್ ಪೂಲಿಂಗ್‌ಗೆ ಸಹಕರಿಸಿ

By Nagaraja

ಬೆಂಗ್ಳೂರಿಗರೇ, ವಿಪರೀತ ವಾಹನ ದಟ್ಟಣೆಯಿಂದ ಬೆಸತ್ತು ಹೋಗಿದ್ದೀರಾ? ಕಚೇರಿ ಕಲಾಪ ಸೇರಿದಂತೆ ಇತರ ಅಗತ್ಯ ಕೆಲಸ ಕಾರ್ಯಗಳಿಗಾಗಿ ತೆರಳಿದವರು ಸಮಯಕ್ಕೆ ಸರಿಯಾಗಿ ತಲುಪಲಾಗದೇ ಮೇಲಾಧಿಕಾರಿಗಳ ಕೋಪಕ್ಕೆ ಗುರಿಯಾಗುತ್ತಿದ್ದೀರಾ? ಇನ್ನು ರೈಲು, ವಿಮಾನ ಇತ್ಯಾದಿಗಳನ್ನು ಮಿಸ್ ಮಾಡಿಕೊಂಡು ಪೇಚಾಡುವಂತಹ ದುಸ್ಥಿತಿಗೆ ಬಂದು ತಲುಪಿದ್ದೀರಾ..?

ಇವೆಲ್ಲಕ್ಕೂ ಪರಿಹಾರ ಇದೆ. ಸಾಕಪ್ಪಾ ಸಾಕು ಈ ಬೆಂಗ್ಳೂರು ಸಮಸ್ಯೆ ಅಂಥ ಕೊರಗುವವರೇ ಜಾಸ್ತಿ. ಆದರೆ ಇನ್ನು ಚಿಂತೆ ಬಿಡಿ. ನೀವಿನ್ನು ಕಾರು ಪೂಲಿಂಗ್ ಮಾಡಿ ನಿಟ್ಟುಸಿರು ಬಿಡಬಹುದು. ಬಹುತೇಕರಿಗೆ ಕಾರು ಪೂಲಿಂಗ್ ಅಂದರೆ ಏನೆಂಬುದು ಗೊತ್ತಿಲ್ಲ? ಹಾಗೆಯೇ ಇನ್ನು ಕೆಲವರಿಗೆ ಇದರ ಸುರಕ್ಷತೆ ಬಗ್ಗೆ ಸಂದೇಹಗಳಿವೆ? ಈ ನಿಟ್ಟಿನಲ್ಲಿ ಡ್ರೈವ್ ಸ್ಪಾರ್ಕ್ ಕಾರ್ ಪೂಲಿಂಗ್ ವಿಶೇಷ ಲೇಖನಕ್ಕಾಗಿ ಇಲ್ಲಿ ಕ್ಕಿಕ್ಕಿಸಿ...

ಹೌದು, ಬೆಂಗಳೂರು ಅಂದರೆ ಟೆಕ್ಕಿಗಳ ತವರೂರು ಎಂದೇ ಬಿಂಬಿಸಬಹುದು. ಇಲ್ಲಿ ವಾಹನ ದಟ್ಟಣೆಗೇನು ಕಮ್ಮಿಯಿಲ್ಲ. ಹಾಗಿರುವಾಗ ಟೆಕ್ಕಿಗಳ ತಂಡವೊಂದು 'ಪೂಲ್ ಸರ್ಕಲ್' ಎಂಬ ವಿಶೇಷ ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದ್ದು, ಸದ್ಯದಲ್ಲೇ ಲಾಂಚ್ ಮಾಡಲಿದೆ. ಬಹುತೇಕ ಐಟಿ ಕಂಪನಿಗಳ ಉದ್ಯೋಗಿಗಳೆಲ್ಲ ಸೇರಿ ರೂಪಿಸಿರುವ 'ವೀಲ್ಸ್' ತಲಹದಿಯಲ್ಲಿ ಇದು ಕಾರ್ಯಾಚರಿಸಲಿದೆ.

ಬೆಂಗ್ಳೂರು ಟೆಕ್ಕಿಗಳೇ ಕಾರ್ ಪೂಲಿಂಗ್‌ಗೆ ಸಹಕರಿಸಿ

ಮುಂಬರುವ ಒಂದೆರಡು ವಾರಗಳಲ್ಲಿ 'ಪೂಲ್ ಸರ್ಕಲ್' ಎಂಬ ನೂತನ ಮೊಬೈಲ್ ಅಪ್ಲಿಕೇಷನ್ ಚಾಲ್ತಿಗೆ ಬರಲಿದ್ದು, ಈ ಸೇವೆಯ ಸಂಪೂರ್ಣ ಪ್ರಯೋಜನ ಪಡೆಯಬಹುದಾಗಿದೆ ಎಂದು ವೀಲ್ಸ್ ಅಭಿಪ್ರಾಯಪಟ್ಟಿದೆ.

ಬೆಂಗ್ಳೂರು ಟೆಕ್ಕಿಗಳೇ ಕಾರ್ ಪೂಲಿಂಗ್‌ಗೆ ಸಹಕರಿಸಿ

ಆಂಡ್ರಾಯ್ಡ್, ವಿಂಡೋಸ್, ಐಒಸ್ ಓಪರೇಟಿಂಗ್ ತಲಹದಿಯಲ್ಲಿ ಈ ಸೇವೆ ಲಭ್ಯವಾಗಲಿದೆ. ಈ ಮೂಲಕ ಬಹುತೇಕ ಟೆಕ್ಕಿಗಳನ್ನು ಸಂಪರ್ಕಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು 'ಪೂಲ್ ಸರ್ಕಲ್' ಸಿಇಒ ರಘುರಮ್ ರಾಮನುಜಮ್ ತಿಳಿಸಿದ್ದಾರೆ.

ಬೆಂಗ್ಳೂರು ಟೆಕ್ಕಿಗಳೇ ಕಾರ್ ಪೂಲಿಂಗ್‌ಗೆ ಸಹಕರಿಸಿ

ಯೋಜನೆಯ ಪ್ರಾಥಮಿಕ ಹಂತವಾಗಿ ನಗರದ ರಸ್ತೆಯಲ್ಲಿ ಓಡಾಡುವ 7,000ದಷ್ಟು ವಾಹನಗಳ ಬಳಕೆಯನ್ನು ಕಡಿಮೆ ಮಾಡುವ ಗುರಿ ಹೊಂದಲಾಗಿದೆ.

ಬೆಂಗ್ಳೂರು ಟೆಕ್ಕಿಗಳೇ ಕಾರ್ ಪೂಲಿಂಗ್‌ಗೆ ಸಹಕರಿಸಿ

ಐಟಿ ಸಂಸ್ಥೆಗಳಾದ ಸರ್ಜಾಪುರ ಔಟರ್ ರಿಂಗ್ ರೋಡ್ ಮತ್ತು ಹೆಬ್ಬಾಳ್ ನಡೆಸಿರುವ ಅಧ್ಯಯನ ವರದಿಯ ಬೆನ್ನಲ್ಲೇ ಈ ನೂತನ ಅಪ್ಲಿಕೇಷನ್ ವಿನ್ಯಾಸಗೊಳಿಸಲಾಗಿದೆ. ಸಮೀಕ್ಷೆ ಪ್ರಕಾರ ಬೆಂಗಳೂರಿನ ಐಟಿ ಕಂಪನಿಗಳಿಗೆ ತೆರಳುವ ಖಾಸಗಿ ವಾಹನಗಳ ಪೈಕಿ ಶೇಕಡಾ 65ರಷ್ಟು ಏಕಮಾತ್ರ ಸವಾರರನ್ನು (ಚಾಲಕ ಮಾತ್ರ) ಹೊಂದಿರುತ್ತದೆ.

ಬೆಂಗ್ಳೂರು ಟೆಕ್ಕಿಗಳೇ ಕಾರ್ ಪೂಲಿಂಗ್‌ಗೆ ಸಹಕರಿಸಿ

ಇಲ್ಲಿ 'ಒಂದೇ ಕಲ್ಲಿನಿಂದ ಎರಡು ಹಕ್ಕಿಗಳನ್ನು ಹೊಡೆಯುವ ತಂತ್ರ'ವನ್ನು ಅನುಸರಿಸಲಾಗಿದೆ. ಯಾಕೆಂದರೆ ಒಂದೇ ದಿಕ್ಕಿನತ್ತ ಸಾಗುವ ಖಾಲಿ ವಾಹನಗಳನ್ನು ಆ ದಿಕ್ಕಿನತ್ತ ಸಾರಿಗೆ ಬಯಸುವ ಪ್ರಯಾಣಿಕರಿಂದ ಭರ್ತಿ ಮಾಡಲಾಗುವುದು. ಇದರಿಂದ ಕಾರಿನ ಮಾಲಿಕರಿಗೆ ಹಣ ಪಾವತಿಸುವುದರಿಂದ ಖಾಲಿ ಸ್ಥಾನಗಳನ್ನು ಭರ್ತಿ ಮಾಡುವುದಲ್ಲದೆ ಅನಗತ್ಯ ವಾಹನಗಳನ್ನು ರಸ್ತೆಗಳಿಂದ ಹೊರಗಿಡಬಹುದು. ಇದು ವಾಹನ ದಟ್ಟಣೆ ಕಡಿಮೆ ಮಾಡಲು ಸಹಕಾರಿಯಾಗುವುದರ ಜತೆ ಶಬ್ದ ಮಾಲಿನ್ಯ ತಡೆಗಟ್ಟುವುದಲ್ಲದೆ ಉಸಿರಾಟಕ್ಕೆ ಶುದ್ಧ ಗಾಳಿಯನ್ನು ಒದಗಿಸಲಿದೆ.

ಬೆಂಗ್ಳೂರು ಟೆಕ್ಕಿಗಳೇ ಕಾರ್ ಪೂಲಿಂಗ್‌ಗೆ ಸಹಕರಿಸಿ

ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿವಿಧ ಐಟಿ ಕಂಪನಿಗಳಾದ ಬಾಷ್, ಸಿಸ್ಕೊ, ಇಂಟೆಲ್ ಹಾಗೂ ಎಒಎಲ್ ಉದ್ಯಮಿಗಳು ಸೇರಿ 'ವೀಲ್ಸ್' ಮೂಲಕ ಈಗಾಗಲೇ ಹಲವಾರು ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದಾರೆ. ಈ ಮೂಲಕ ನಗರದಲ್ಲಿ ಖಾಸಗಿ ವಾಹನಗಳ ಸಂಖ್ಯೆಗಳನ್ನು ಕಡಿಮೆ ಮಾಡುವ ಯೋಜನೆ ಹೊಂದಿದೆ. ಇದಕ್ಕೊಂದು ಸೇರ್ಪಡೆಯೆಂಬಂತೆ ಮೈಸೂರು, ವೈಟ್‌ಫೀಲ್ಡ್, ಹೆಬ್ಬಾಳ ಹಾಗೂ ಸರ್ಜಾಪುರಗಳಲ್ಲಿ ಸಂಚರಿಸುವ ಐಟಿ ಉದ್ಯಮಿಗಳಾಗಿಗಾಗಿ ಈ ವಿಶೇಷ ಮೊಬೈಲ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಲಾಗಿದೆ.

ಬೆಂಗ್ಳೂರು ಟೆಕ್ಕಿಗಳೇ ಕಾರ್ ಪೂಲಿಂಗ್‌ಗೆ ಸಹಕರಿಸಿ

ನಿಮ್ಮ ಮಾಹಿತಿಗಾಗಿ, ಬೆಂಗಳೂರಿನಲ್ಲಿ 400 ಪ್ರಮುಖ ಐಟಿ ಕಂಪನಿಯತ್ತ ದೈನಂದಿನ 1.7 ಲಕ್ಷ ಕ್ಯಾಬ್ ಮತ್ತು 30,000 ಖಾಸಗಿ ವಾಹನಗಳು ಪಯಣಿಸುತ್ತಿವೆ. ಇದೀಗ ಇದನ್ನು ಶೇಕಡಾ 7ರಷ್ಟು ಕಡಿತಗೊಳಿಸುವ ಉದ್ದೇಶವನ್ನು ವೀಲ್ಸ್ ಹೊಂದಿದೆ.

ಬೆಂಗ್ಳೂರು ಟೆಕ್ಕಿಗಳೇ ಕಾರ್ ಪೂಲಿಂಗ್‌ಗೆ ಸಹಕರಿಸಿ

ಈ ಬಗ್ಗೆ ಪ್ರತಿಕ್ರಿಯಿಸಿರುವ 'ಪೂಲ್ ಸರ್ಕಲ್' ಮೊಬೇಲ್ ಅಪ್ಲಿಕೇಷನ್ ಸ್ಥಾಪಕ ವಿಶ್ವನಾಥ್ ಸೀತಾರಾಂ, ಪ್ರಾಯೋಗಿಕವಾಗಿಯೂ ಇದರ ಬಳಕೆ ಹೆಚ್ಚು ಸುರಕ್ಷಿತ ಎಂದಿದ್ದಾರೆ. ಅಲ್ಲದೆ ಬಳಕೆದಾರ ಲಾಗಿನ್ ಮಾಡಿದಾಗ ಅದೇ ದಿಕ್ಕಿನತ್ತ ಸಂಚರಿಸುವ ಇತರ ಚಾಲಕರ ಬಗ್ಗೆ ಮಾಹಿತಿ ಗಿಟ್ಟಿಸಿಕೊಳ್ಳಬಹುದು ಎಂದಿದ್ದಾರೆ.

ಬೆಂಗ್ಳೂರು ಟೆಕ್ಕಿಗಳೇ ಕಾರ್ ಪೂಲಿಂಗ್‌ಗೆ ಸಹಕರಿಸಿ

ಇಲ್ಲಿ ಅತ್ಯಂತ ಅನುಕೂಲಕರ ಆಯ್ಕೆಯನ್ನು ಬಳಕೆದಾರ ಕ್ಲಿಕ್ ಮಾಡಬಹುದಾಗಿದೆ. ಈ ಸಂದರ್ಭದಲ್ಲಿ ಚಾಲಕ ಖಾತರಿಯನ್ನು ಮಾಡಬೇಕಾಗುತ್ತದೆ. ಇವೆಲ್ಲದಕ್ಕಿಂತಲೂ ಮಿಗಿಲಾಗಿ ಇದರಲ್ಲಿ ರಿಯಲ್ ಟೈಮ್ ಅಪ್‌ಡೇಟ್‌ಗಳು ಲಭ್ಯ. ಇದು ಹೆಚ್ಚು ಸುರಕ್ಷಿತ ಎಂದಿದ್ದಾರೆ.

More from DriveSpark

Article Published On: Monday, October 21, 2013, 15:43 [IST]
English summary
Raghuram Ramannujam, CEO, Pool Circle, said the 'Pool Circle' application would be running on Android, Windows and iOS operating platforms and to widen the reach to most of the techies in the city, the company has roped in Wheels, an IT employees' platform.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+