ಸ್ವಂತದ ಕಾರುಗಳಿಂದ ರೈಡ್ ಶೇರಿಂಗ್ ಮಾಡಿದ್ರೆ ಸೀಜ್ ಆಗೋದು ಗ್ಯಾರಂಟಿ..!

By Rahul Ts

ವಾಹನ ದಟ್ಟಣೆ ತಡೆಯುವ ಉದ್ದೇಶವನ್ನ ತಡೆಯುವ ಉದ್ದೇಶದಿಂದ ಸಿದ್ದಗೊಳಿಸಲಾದ ಕಾರ್ ಪೂಲಿಂಗ್ ಪರಿಕಲ್ವನೆಯು ಇಂದು ಹಳ್ಳಹಿಡಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮಾಡಿದ ಹೊಸ ಯೋಜನೆಯೊಂದು ಟ್ಯಾಕ್ಸಿ ಮಾಲೀಕರಿಗೆ ದೊಡ್ಡ ಹೊಡೆತ ನೀಡುತ್ತಿದ್ದು, ಇದನ್ನು ಮಟ್ಟ ಹಾಕಲು ನಮ್ಮ ಬೆಂಗಳೂರು ಟ್ರಾಫಿಕ್ ಪೊಲೀಸರು ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಸಿರುವುದು ರೈಡ್ ಶೇರಿಂಗ್ ಮೂಲಕ ಅವ್ಯವಹಾರ ನಡೆಸಿರುವ ವೈಟ್ ಬೋರ್ಡ್ ಕಾರು ಮಾಲೀಕರಿಗೆ ನುಂಗಲಾರದ ತುತ್ತಾಗಿದೆ.

ಸ್ವಂತದ ಕಾರುಗಳಿಂದ ರೈಡ್ ಶೇರಿಂಗ್ ಮಾಡಿದ್ರೆ ಸೀಜ್ ಆಗೋದು ಗ್ಯಾರಂಟಿ..!

ಪ್ರಯಾಣಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಕಾರು ಪೂಲಿಂಗ್ ಕಲ್ವನೆ ಜಾರಿಯಲ್ಲಿದೆ. ಹೀಗಾಗಿ ವೈಟ್ ಬೋರ್ಡ ಕಾರು ಮಾಲೀಕರು ನೀರ್ದಿಷ್ಟ ಮಟ್ಟದಲ್ಲಿ ಕಾರ್ ಪೂಲಿಂಗ್ ಮಾಡುವ ಅವಕಾಶ ಮಾಡಿಕೊಟ್ಟಿದ್ದರು ಅದು ಇದೀಗ ಸಂಚಾರಿ ನಿಯಮಗಳನ್ನ ಮೀರಿ ದೊಡ್ಡ ಅವ್ಯವಹಾರದ ಕೂಪವಾಗಿ ಮಾರ್ಪಡುತ್ತಿದೆ. ಅದರ ವ್ಯಾಪ್ತಿ ಎಷ್ಟು ಮೀರಿದೆ ಅಂದ್ರೆ ಬೆಂಗಳೂರಿನಿಂದ ಹೊರ ರಾಜ್ಯಗಳಿಗೂ ಕಾರು ಪೂಲಿಂಗ್ ಮಾಡುತ್ತಿರುವುದು ತನಿಖೆ ವೇಳೆ ಬಯಲಾಗಿದೆ.

ಸ್ವಂತದ ಕಾರುಗಳಿಂದ ರೈಡ್ ಶೇರಿಂಗ್ ಮಾಡಿದ್ರೆ ಸೀಜ್ ಆಗೋದು ಗ್ಯಾರಂಟಿ..!

ರೈಡ್ ಶೇರಿಂಗ್ ಅಪ್ಲಿಕೇಶನ್‍‍ಗಳಿಂದ ಖಾಸಗಿ ಕಾರು ಮಾಲೀಕರು ಜನಸಾಮಾನ್ಯರಿಗೆ ವಾಣಿಜ್ಯ ಬಳಕೆಯ ಟ್ಯಾಕ್ಸಿಗಳಿಂತಲೂ ಅಗ್ಗದ ದರದಲ್ಲಿ ಪ್ರಯಾಣಿಸಲು ಅವಕಾಶ ಮಾಡಿಕೊಡುತ್ತಿದೆ. ಅಲ್ಲದೇ ರಜಾದಿನಗಳು ಮತ್ತು ಆಫೀಸ್‍‍ಗೆ ಹೋಗುವವರ ಸಹ ಈ ಯೋಜನೆಯನ್ನು ಬಳಕೆ ಮಾಡಬಹುದಾಗಿದೆ. ಆದ್ರೆ ಇದನ್ನ ಕೆಲವು ವೈಟ್ ಬೋರ್ಡ್ ಕಾರು ಮಾಲೀಕರು ಕಾನೂನು ವ್ಯಾಪ್ತಿ ಮೀರಿ ವ್ಯವಹಾರ ನಡೆಸುತ್ತಿರುವುದು ಪೊಲೀಸರು ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸ್ವಂತದ ಕಾರುಗಳಿಂದ ರೈಡ್ ಶೇರಿಂಗ್ ಮಾಡಿದ್ರೆ ಸೀಜ್ ಆಗೋದು ಗ್ಯಾರಂಟಿ..!

ಖಾಸಗಿ ಕಾರು ಮಾಲೀಕರು ರೈಡ್ ಹಂಚಿಕೆಯ ಅಪ್ಲಿಕೇಶನ್‍‍‍ಗಳನ್ನು ಬಳಸಿಕೊಂಡು ಹಣಕಾಸಿನ ಲಾಭಕ್ಕಾಗಿ ಪ್ರಯಾಣಿಕರನ್ನು ಆಯ್ಕೆ ಮಾಡಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದು, ಸಿಕ್ಕಿಬಿದ್ರೆ ಸಾವಿರಾರು ರೂಪಾಯಿ ದಂಡ ಕಟ್ಟಬೇಕು ಎನ್ನುವ ಅರಿವು ಇದ್ರು ಮತ್ತೆ ಮತ್ತೆ ಸಂಚಾರಿ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ.

ಸ್ವಂತದ ಕಾರುಗಳಿಂದ ರೈಡ್ ಶೇರಿಂಗ್ ಮಾಡಿದ್ರೆ ಸೀಜ್ ಆಗೋದು ಗ್ಯಾರಂಟಿ..!

ಇದು ಕೇವಲ ಬೆಂಗಳೂರು ನಗರದಲ್ಲಿ ಅಷ್ಟೇ ಅಲ್ಲದೇ ಹೊರ ರಾಜ್ಯಗಳಿಗೂ ಕಾರು ಪೂಲಿಂಗ್ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಪ್ರಯಾಣಿಕ ಸೋಗಿನಲ್ಲಿ ಕಾರ್ಯಾಚರಣೆ ನಡೆಸಿದ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ನಿನ್ನೆ ದೊಡ್ಡ ಶಾಕ್ ಕಾದಿತ್ತು.

ಸ್ವಂತದ ಕಾರುಗಳಿಂದ ರೈಡ್ ಶೇರಿಂಗ್ ಮಾಡಿದ್ರೆ ಸೀಜ್ ಆಗೋದು ಗ್ಯಾರಂಟಿ..!

ತೆಲಂಗಾಣ ನೋಂದಣಿಯ ಹ್ಯುಂಡೈ ಐ20 ವೈಟ್ ಬೋರ್ಡ್ ಕಾರೊಂದು ಪ್ರೈವೆಟ್ ಕಾರೊಂದು ಬೆಂಗಳೂರು ಟು ಹೈದ್ರಾಬಾದ್‌ಗೆ ರೈಡ್ ಶೇರಿಂಗ್ ಮಾಡುತ್ತಿರುವಾಗ ಸಿಕ್ಕಿಬಿದ್ದಿದ್ದು, ಸಂಚಾರಿ ನಿಯಮಕ್ಕೆ ವಿರುದ್ದವಾಗಿ ಕಾರು ಪೂಲಿಂಗ್ ಮಾಡಿದ್ದಕ್ಕೆ ಕಾರನ್ನು ಸೀಜ್ ಕೂಡಾ ಮಾಡಲಾಗಿದೆ.

ಸ್ವಂತದ ಕಾರುಗಳಿಂದ ರೈಡ್ ಶೇರಿಂಗ್ ಮಾಡಿದ್ರೆ ಸೀಜ್ ಆಗೋದು ಗ್ಯಾರಂಟಿ..!

ಹೌದು, ಹ್ಯುಂಡೈ ಐ20 ಕಾರು ಮಾಲೀಕನು ಹೈದರಾಬಾದ್‍‍ನಿಂದ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದ. ಆದ್ರೆ ಕೆಲಸ ಮುಗಿಸಿಕೊಂಡು ವಾಪಸ್ ಹೋಗಿದ್ದರೇ ಇದು ಸುದ್ದಿಯು ಆಗುತ್ತಿರಲಿಲ್ಲ. ಆದ್ರೆ ಹೈದ್ರಾಬಾದ್ ಹಿಂದಿರುಗುವ ವೇಳೆ ಒಂದಿಷ್ಟು ದುಡ್ಡು ಮಾಡಿಕೊಳ್ಳವ ಆಸೆ ಬಿದ್ದ ಆತ ರೈಡ್ ಶೇರಿಂಗ್ ಆ್ಯಪ್ ಮೂಲಕ ಗ್ರಾಹಕರನ್ನು ಸೆಳೆದಿದ್ದ.

ಸ್ವಂತದ ಕಾರುಗಳಿಂದ ರೈಡ್ ಶೇರಿಂಗ್ ಮಾಡಿದ್ರೆ ಸೀಜ್ ಆಗೋದು ಗ್ಯಾರಂಟಿ..!

ಈ ವೇಳೆ ವಾಹನ ನೋಂದಣಿ ಮತ್ತು ಇತರ ವೈಯಕ್ತಿಕ ವಿವರಗಳನ್ನು ಒದಗಿಸುವ ಮೂಲಕ ರೈಡ್ ಶೇರ್ ಅಪ್ಲಿಕೇಶನ್ ಪ್ಲಾಟ್‍‍ಫಾರ್ಮ್‍ಗೆ ಎಂಟ್ರಿ ಕೊಟ್ಟಿದ್ದ. ಬೆಂಗಳೂರಿನಿಂದ ಹೊರಟಿರುವ ನನ್ನ ಕಾರಿನಲ್ಲಿ ಮೂರು ಸೀಟುಗಳು ಲಭ್ಯವಿರುವುದಾಗಿ ಹೇಳಿಕೊಂಡಿದ್ದ.

ಸ್ವಂತದ ಕಾರುಗಳಿಂದ ರೈಡ್ ಶೇರಿಂಗ್ ಮಾಡಿದ್ರೆ ಸೀಜ್ ಆಗೋದು ಗ್ಯಾರಂಟಿ..!

ಇದೇ ವೇಳೆ ರೈಡ್ ಶೇರಿಂಗ್ ವ್ಯವಹಾರದ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಟ್ರಾಫಿಕ್ ಪೊಲೀಸರು ಗ್ರಾಹಕರ ಸೋಗಿನಲ್ಲಿ ಸೀಟ್ ಬುಕ್ ಮಾಡಿದ್ದರು. ಈ ವೇಳೆ ಪೀಕ್ ಅಪ್ ಮಾಡಲು ಬಂದಾಗ ಹ್ಯುಂಡೈ ಕಾರು ಮಾಲೀಕ ಲಾಕ್ ಆಗಿದ್ದಾನೆ.

ಸ್ವಂತದ ಕಾರುಗಳಿಂದ ರೈಡ್ ಶೇರಿಂಗ್ ಮಾಡಿದ್ರೆ ಸೀಜ್ ಆಗೋದು ಗ್ಯಾರಂಟಿ..!

ರೈಡ್ ಶೇರ್ ಆಪ್ ಡೌನ್‍ಲೋಡ್ ಮಾಡಿದ್ದ ಟ್ರಾಫಿಕ್ ಪೊಲೀಸರು ಖಾಲಿ ಇದ್ದ ಆ ಮೂರು ಸೀಟ್‍‍ಗಳಿಗಾಗಿ ರೂ. 1,600 ಪಾವತಿಸಿ ಜಯನಗರ ಮೆಟ್ರೋ ನಿಲ್ದಾಣದ ಬಳಿ ಪಿಕ್ ಅಪ್ ಪಾಯಿಂಟ್ ಸೂಚಿಸಿದ್ದರು. ಆದ್ರೆ ಕಾರು ಮಾಲೀಕನ ಗ್ರಹಚಾರ ಕೆಟ್ಟಿತ್ತು ಅಂತಾ ಕಾಣುತ್ತೆ ಲಾಕ್ ಆಗಿದ್ದಾನೆ.

ಸ್ವಂತದ ಕಾರುಗಳಿಂದ ರೈಡ್ ಶೇರಿಂಗ್ ಮಾಡಿದ್ರೆ ಸೀಜ್ ಆಗೋದು ಗ್ಯಾರಂಟಿ..!

ಕಾರ್ ಪೂಲಿಂಗ್‌ನಿಂದಾಗಿ ಯೆಲ್ಲೊ ಬೋರ್ಡ್ ಟ್ಯಾಕ್ಸಿಗಳು ಮತ್ತು ಟ್ಯಾಕ್ಸಿ ಆಪರೇಟರ್‍‍ಗಳಿಗೆ ಇದರಿಂದ ಹೊಡೆತ ಬಿಳುತ್ತಿದ್ದು, ಪ್ರತಿ ತಿಂಗಳು ಸಾವಿರಾರು ರೂಪಾಯಿ ತೆರಿಗೆ ಕಟ್ಟಿ ಗ್ರಾಹಕರಿಗೆ ಕಾಯ್ದು ಕುಳಿತರೇ ವೈಟ್ ಬೋರ್ಡ್ ಕಾರು ಮಾಲೀಕರು ಮಾತ್ರ ಅಡ್ಡದಾರಿ ಹಿಡಿದು ಗಳಿಕೆ ಮಾಡುತ್ತಿದ್ದಾರೆ.

ಸ್ವಂತದ ಕಾರುಗಳಿಂದ ರೈಡ್ ಶೇರಿಂಗ್ ಮಾಡಿದ್ರೆ ಸೀಜ್ ಆಗೋದು ಗ್ಯಾರಂಟಿ..!

ಕೇವಲ ಇದೊಂದು ಕೇಸ್ ಅಲ್ಲದೇ ಇನ್ನೆರಡು ಪ್ರಕರಣಗಳಲ್ಲಿ ಸಹ ಬೆಂಗಳೂರುನಿಂದ ಚೆನ್ನೈಗೆ ರೂ 1,000 ಮತ್ತು ಬೆಂಗಳೂರಿನಿಂದ ಹಾಸನಕ್ಕೆ ರೂ.360 ಪಾವತಿಸಿದ ಟ್ರಾಫಿಕ್ ಪೊಲೀಸರು ಮತ್ತೇರಡು ವೈಟ್ ಬೋರ್ಡ್ ಕಾರುಗಳನ್ನ ಲಾಕ್ ಮಾಡಿದ್ದಾರೆ.

ಸ್ವಂತದ ಕಾರುಗಳಿಂದ ರೈಡ್ ಶೇರಿಂಗ್ ಮಾಡಿದ್ರೆ ಸೀಜ್ ಆಗೋದು ಗ್ಯಾರಂಟಿ..!

ಇದರಿಂದ ರೈಡ್ ಶೇರಿಂಗ್ ಆಪ್‍‍ಗಳು ಕಾರ್‍ ಪೂಲಿಂಗ್ ಎಂಬ ಪರಿಕಲ್ಪನೆಯನ್ನ ತಪ್ಪಾಗಿ ಬಳಕೆ ಮಾಡಿಕೊಳ್ಳುತ್ತಿದ್ದು, ಇದಲ್ಲದೇ ರೈಡ್ ಶೇರಿಂಗ್ ವೇಳೆ ಯಾವುದಾದರೂ ಅವಘಡಗಳು ಸಂಭವಿಸಿದರೂ ಅವುಗಳಿಗೆ ಪರಿಹಾರ ಇರುವುದಿಲ್ಲ. ಇದರಿಂದ ಕಾರು ಪ್ರಯಾಣಿಕರು ನಿರ್ದಿಷ್ಟ ಮಟ್ಟವನ್ನು ಹೊರತುಪಡಿಸಿ ದೂರದ ಪ್ರಯಾಣಗಳಿಗೆ ಯೆಲ್ಲೊ ಬೋರ್ಡ್ ಕಾರುಗಳನ್ನೇ ಬಳಕೆ ಮಾಡುವುದು ಸೂಕ್ತ.

Most Read Articles

Kannada
English summary
Hyundai i20 ferrying strangers via ride sharing app fined by Bangalore Cops.

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more