ಕಾರ್ ಪೂಲಿಂಗ್ ಮಾಡಿ ಇಂಧನ ಉಳಿಸಿ, ಆರೋಗ್ಯ ಗಳಿಸಿ!

Posted By:

ಬೆಂಗಳೂರು ನಗರದಲ್ಲಿ ವಾಸಿಸುವ ಅನೇಕರಿಗೆ ಕಾರ್ ಪೂಲಿಂಗ್ ಅಂದರೆ ಏನೆಂಬುದು ಗೊತ್ತಿಲ್ಲ. ಕಾರು ಪೂಲಿಂಗ್ ಹೇಗೆ ಕೆಲಸ ಮಾಡುತ್ತದೆ ಎಂಬುದು ಅರಿಯದೇ ಹೋದ್ದಲ್ಲಿ ಇದರ ಪ್ರಯೋಜನ ಪಡೆಯುವುದಾದರೂ ಹೇಗೆ? ಇದನ್ನೇ ಪ್ರಮುಖವಾಗಿ ಮನಗಂಡಿರುವ ನಮ್ಮ ತಂಡ ವಿಸೃತ ಲೇಖನದೊಂದಿಗೆ ನಿಮ್ಮ ಮುಂದೆ ಬರುತ್ತಿದೆ. ಆರಂಭದಲ್ಲಿ ಕಾರ್ ಪೂಲಿಂಗ್ ಎಂಬ ಪದದ ಅರ್ಥವೇನು ಎಂಬುದನ್ನು ಸರಿಯಾಗಿ ಮನಗಾನಬೇಕಾಗಿರುವುದು ಅಷ್ಟೇ ಮುಖ್ಯ.

ಏನಿದು ಕಾರ್ ಪೂಲಿಂಗ್..?

ನಗರದಲ್ಲಿ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಜಾಸ್ತಿಯಾಗಿದೆ. ಇದರಿಂದ ಜನರು ವಿವಿಧ ಖಾಯಿಲೆಗಳಿಂದ ಬಳಲುವ ಸಾಧ್ಯತೆಯೂ ಇದೆ. ಅಷ್ಟೇ ಯಾಕೆ ಒಬ್ಬರೇ ಆಟೋ ಅಥವಾ ನಿಮ್ಮ ಆಟೋದಲ್ಲಿ ಪಯಣಿಸುವಾಗ ಅದಕ್ಕೆ ಅಗತ್ಯವಿರುವ ಪೆಟ್ರೋಲ್ ಹಾಕಿಸಬೇಕು. ನಗರದಲ್ಲಿ ಅಗತ್ಯಕ್ಕಿಂತ ಹೆಚ್ಚು ವಾಹನಗಳಿಂದ ಮಾಲಿನ್ಯ ಹೆಚ್ಚಿದೆ. ಇವೆಲ್ಲವನ್ನು ಮನಗಂಡಿರುವ ಬೆಂಗಳೂರು ಸಂಚಾರ ಪೊಲೀಸ್ ಕಾರ್ ಪೂಲಿಂಗ್ ಅಥವಾ ಕಾರ್ ಶೇರಿಂಗ್ ಪರಿಕಲ್ಪನೆಯನ್ನು ಜಾರಿಗೆ ತಂದಿದೆ.

ಪೆಟ್ರೋಲ್ ದರ ದುಬಾರಿಯಾಗಿಬಿಟ್ಟಿದೆ. ಹೆಚ್ಚಿನವರು ಕಾರು ಖರೀದಿಸುವ ಯೋಚನೆ ಕೈಬಿಟ್ಟಿರಬಹುದು. ಕಾರು ಮಾಲಿಕರುಗಳಿಗೆ ಕಾರೀಗ ಹೊರೆಯಾಗಿರಬಹುದು. ಇಂತಹ ಸಮಯದಲ್ಲಿ ಬೆಂಗಳೂರಿನಂತಹ ನಗರಗಳಲ್ಲಿ ಕಾರ್ ಪೂಲಿಂಗ್ ಉತ್ತಮ ಆಯ್ಕೆಯಾಗಿರಲಿದೆ. ಇನ್ನು ಚುಟುಕಾಗಿ ಹೇಳುವುದಾದರೆ ನಾಲ್ಕು ಜನ ಪ್ರತ್ಯೇಕ ಕಾರುಗಳನ್ನು ಬಳಸುವುದಕ್ಕೆ ಬದಲಾಗಿ ನಾಲ್ಕು ಜನ ಒಂದೇ ಕಾರನ್ನು ಹಂಚಿಕೊಂಡು ತಮ್ಮ ಕಚೇರಿ ಮತ್ತಿತರ ಸ್ಥಳಕ್ಕೆ ಸಂಚರಿಸುವ ವಿಧಾನನೇ ಕಾರ್ ಪೂಲಿಂಗ್.

ಕಾರ್ ಪೂಲಿಂಗ್ ಮಾಡಿ ಇಂಧನ ಉಳಿಸಿ, ಆರೋಗ್ಯ ಗಳಸಿ!

ನಿಮ್ಮಲ್ಲಿ ಕಾರು ಅಥವಾ ಬೈಕ್ ಇರಬಹುದು. ಆದರೆ ಅದರಲ್ಲಿ ದಿನನಿತ್ಯ ಒಬ್ಬರೇ ಪ್ರಯಾಣಿಸುತ್ತಿರಬಹುದು. ಕಾರಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಸೀಟುಗಳು ಖಾಲಿ ಇರಬಹುದು. ಆ ಸೀಟುಗಳಲ್ಲಿ ಅದೇ ದಾರಿಯಲ್ಲಿ ನಿತ್ಯ ಸಾಗುವರನ್ನು ನೀವು ಕರೆದುಕೊಂಡು ಹೋಗಬಹುದು. ದಿನನಿತ್ಯ ಈ ರೀತಿ ಕರೆದುಕೊಂಡು ಹೋಗಲು ಅಥವಾ ನೀವು ಬೇರೆ ಯಾವುದಾದರೂ ಕಾರಲ್ಲಿ ಹೋಗಬಹುದು. ಎಲ್ಲರಲ್ಲೂ ಕಾರಿದ್ದರೆ ಒಂದಿನ ಒಬ್ಬರ ಕಾರಲ್ಲಿ, ಮತ್ತೊಂದಿನ ಇನ್ನೊಬ್ಬರ ಕಾರಲ್ಲಿ ಹೋಗಬಹುದು. ಇದರಿಂದ ಇಂಧನವೂ ಉಳಿತಾಯವಾಗುತ್ತದೆ. ಪೆಟ್ರೋಲ್ ದುಡ್ಡು ಉಳಿತಾಯವಾಗುತ್ತದೆ.

ಉಳಿತಾಯ ಹೇಗೆ?

ಉಳಿತಾಯ ಹೇಗೆ?

ಇದರಲ್ಲಿ ಉಳಿತಾಯ ಹೇಗೆ ಎಂದು ಕೇಳಬಹುದು. ಈ ಕುರಿತು ನೀವು ನಿಮ್ಮ ಸಹ ಪ್ರಯಾಣಿಕರಲ್ಲಿ ಆರಂಭದಲ್ಲಿಯೇ ಮಾತುಕತೆ ನಡೆಸಬೇಕು. ತಿಂಗಳಿಗೆ ಇಂತಿಷ್ಟು ಪಾವತಿಸಬೇಕೆಂದು ಹೇಳಿಬಿಟ್ಟರೆ ಸಾಕು. ನಿಮ್ಮ ಕಾರು ನಿಮಗೆ ಆದಾಯವನ್ನೂ ತಂದುಕೊಡುತ್ತದೆ. ಪೆಟ್ರೋಲ್ ಹಣವೂ ಉಳಿತಾಯವಾಗುತ್ತದೆ.

ಜತೆಗಾರರು ಎಲ್ಲಿ ಸಿಗುತ್ತಾರೆ?

ಜತೆಗಾರರು ಎಲ್ಲಿ ಸಿಗುತ್ತಾರೆ?

ಅದೆಲ್ಲ ಸರಿ, ಜೊತೆಗಾರರು ಎಲ್ಲಿ ಸಿಗುತ್ತಾರೆ ಎಂದು ನೀವು ಕೇಳಬಹುದು. ಈ ಕುರಿತು ನಿಮ್ಮ ಸ್ನೇಹಿತರು, ಪರಿಚಿತರಲ್ಲಿ ವಿಚಾರಿಸಬಹುದು. ಇವರಲ್ಲಿ ವ್ಯವಹಾರ ಕಷ್ಟವೆಂದು ಅನಿಸುವುದೇ? ಅಥವಾ ಯಾರೂ ಸಹ ಪ್ರಯಾಣಿಕರು ಸಿಗುತ್ತಿಲ್ಲವೆಂಬುದಕ್ಕೆ ನೀವು ಕೊರಗುವ ಅವಶ್ಯಕತೆಯಿಲ್ಲ.

ಕಾರ್ ಪೂಲಿಂಗ್ ಮಾಡಿ ಇಂಧನ ಉಳಿಸಿ, ಆರೋಗ್ಯ ಗಳಸಿ!

ಬೆಂಗಳೂರಿನಲ್ಲಿ ಸಂಚಾರ ದಟ್ಟನೆಯನ್ನು ಕಡಿಮೆ ಗೊಳಿಸಲು ಹಮ್ಮಿಕೊಂಡಿರುವ ಕಾರ್ ಪೂಲಿಂಗ್ ಅಭಿಯಾನದಲ್ಲಿ ನಿಮಗೆ ಸಹಕರಿಸಲು ಮುಂದೆ ಬಂದಿರುವ ಕಾರ್ ಪೂಲಿಂಗ್ ಸೈಟ್‌ಗಳ ವಿವರವನ್ನು ಇಲ್ಲಿನ ನೀಡುತ್ತಿದ್ದೇವೆ. ಇದರ ಉಪಯೋಗವನ್ನು ಪಡೆದುಕೊಳ್ಳುಲು ಬೆಂಗಳೂರು ಸಂಚಾರಿ ಪೊಲೀಸ್ ವಿನಂತಿಸಿಕೊಳ್ಳುತ್ತಿದೆ.

http://www.zinghopper.in/

https://www.ridingo.com/

ಕಾರ್ ಪೂಲಿಂಗ್ ಮಾಡಿ ಇಂಧನ ಉಳಿಸಿ, ಆರೋಗ್ಯ ಗಳಸಿ!

ನಗರದಲ್ಲಿ ಅಗತ್ಯಕ್ಕಿಂತ ಹೆಚ್ಚು ವಾಹನಗಳಿಂದ ಮಾಲಿನ್ಯ ಹೆಚ್ಚಿದೆ. ಇದರಿಂದ ಮರೆಗುಳಿ, ತಲೆನೋವು, ಕಣ್ಣು ಉರಿ, ಬೆನ್ನು ನೋವು ಸೇರಿದಂತೆ ವಿವಿಧ ಕಾಯಿಲೆಗಳು ಬರುತ್ತವೆ. ಆದ್ದರಿಂದ ನೀವು ಕಾರ್ ಪೂಲಿಂಗ್‌ ಎಂಬ ಪರಿಕಲ್ಪನೆಯನ್ನು ಅಳವಡಿಸಿಕೊಂಡು ಇಂಧನ ಉಳಿತಾಯದ ಜೊತೆಗೆ, ವಾಹನ ದಟ್ಟಣೆ ಹಾಗ ಮಾಲಿನ್ಯ ನಿಯಂತ್ರಣ ಮಾಡಬಹುದು. ಇದರಿಂದ ಟೋಲ್‌ಗೇಟ್ ಸುಂಕ ಹಾಗೂ ಪ್ರಯಾಣದ ಆಯಾಸ ಕಡಿಮೆಯಾಗುತ್ತದೆ ಎನ್ನುತ್ತಾರೆ ಪೊಲೀಸರು.

ಬೆಂಗಳೂರು ಕಾರ್ ಪೂಲಿಂಗ್ ಬಗ್ಗೆ ನೀವೇನಂತೀರಿ?

ಬೆಂಗಳೂರು ಕಾರ್ ಪೂಲಿಂಗ್ ಬಗ್ಗೆ ನೀವೇನಂತೀರಿ?

ಅಂದ ಹಾಗೆ ಬೆಂಗಳೂರು ಸಂಚಾರಿ ಪೊಲೀಸ್ ಮತ್ತೆ ಕಾರ್ ಪೂಲಿಂಗ್ ವ್ಯವಸ್ಥೆಗೆ ಮೊರೆ ಹೋಗಿದ್ದಾರೆ. ಅಷ್ಟಕ್ಕೂ ಬೆಂಗಳೂರು ಟ್ರಾಫಿಕ್ ಮಧ್ಯೆ ನಿಂತು ಕಾರ್ ಪೂಲಿಂಗ್ ವ್ಯವಸ್ಥೆ ಬಗ್ಗೆ ನೀವು ಏನಂತೀರಿ, ಹೇಳಿ. ಏಕೆಂದರೆ ಕಾರ್ ಪೂಲಿಂಗ್ ವ್ಯವಸ್ಥೆಯಿಂದ ಸುಗಮ ಸಂಚಾರದ ಜತೆಗೆ ಹಣ ಮತ್ತು ಪೆಟ್ರೋಲ್ ಉಳಿತಾಯ ಸಾಧ್ಯವಾಗುತ್ತದೆ. ಅದಕ್ಕಿಂತ ಮುಖ್ಯವಾಗಿ ಒಬ್ಬರಿಗಿಂತ ಹೆಚ್ಚು ಮಂದಿ ವಾಹನದಲ್ಲಿ ಸಂಚರಿಸುವ ಮೂಲಕ ಶಬ್ದ ಮಾಲಿನ್ಯ ಹಾಗೂ ವಿಪರೀತ ವಾಹನ ದಟ್ಟಣೆಯನ್ನು ತಡೆಯಬಹುದು.

ಫೇಸ್‌ಬುಕ್‌ನಲ್ಲಿ ಕಂಡುಬಂದಿದ್ದು...

ಫೇಸ್‌ಬುಕ್‌ನಲ್ಲಿ ಕಂಡುಬಂದಿದ್ದು...

ridingo.com, zinghopper.in ಕಾರ್ ಪೂಲಿಂಗ್ ನವರಂತೆ hopon.co.in ರವರು ಸಹ ಸಾರ್ವಜನಿಕ ಹಿತದೃಷ್ಟಿಯಿಂದ ಪೂಲಿಂಗ್ ಬಗ್ಗೆ ಈ ವಿಡಿಯೋ ಅನ್ನು ಕಳುಹಿಸಿದ್ದು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬಹುದು. (ವೀಡಿಯೋ ವೀಕ್ಷಿಸಲು ಈ ಲಿಂಕ್‌ಗೆ ಭೇಟಿ ಕೊಡಿರಿ http://www.facebook.com/photo.php?v=437697336314383)

English summary
At a time when fuel costs are sky high, many are be looking for alternatives to cut costs on traveling. Carpooling is one such option where you can share your car/bike ride with other commuters traveling in the same route on a cost sharing basis.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more