ಸನ್‌ರೈಸರ್ ಹೈದರಾಬಾದ್ ಐಪಿಎಲ್ ತಂಡಕ್ಕೆ ವೋಲ್ವೋ ಪ್ರಾಯೋಜಕತ್ವ
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ಬದಲಿ ತಂಡವಾಗಿ ಸೇರ್ಪಡೆಗೊಂಡಿರುವ ಸನ್‌ರೈಸರ್ ಹೈದರಾಬಾದ್ ಐಪಿಎಲ್ ತಂಡಕ್ಕೆ ವೋಲ್ವೋ ಕಾರ್ಸ್ ಇಂಡಿಯಾ ಪ್ರಾಯೋಜಕತ್ವ ವಹಿಸಲಿದೆ.
ಈ ಮೂಲಕ ಇದೇ ಮೊದಲ ಬಾರಿಗೆ ಐಪಿಎಲ್ ತಂಡವೊಂದಕ್ಕೆ ಸ್ವೀಡನ್‌ನ ವೋಲ್ವೋ ಕಾರ್ಸ್ ಪ್ರಾಯೋಜಕತ್ವ ನೀಡಲು ಮುಂದಾಗಿದೆ. ಈ ಹಿಂದಿನಿಂದಲೇ ಕ್ರಿಕೆಟ್ ಹೊರತುಪಡಿಸಿ ಇತರ ಕ್ರೀಡೆಗಳಿಗೆ ವೋಲ್ವೋ ಪ್ರಾಯೋಜಕತ್ವ ವಹಿಸಿತ್ತು. ಗಾಲ್ಫ್ ಪಂದ್ಯಾವಳಿ ಹಾಗೂ ಚೆನ್ನೈ ಓಪನ್‌ಗಳಂತಹ ಟೆನಿಸ್ ಟೂರ್ನಿಗಳಿಗೆ ಪ್ರಾಯೋಜಕತ್ವ ವಹಿಸಿದ ಹಿರಿಮೆಯನ್ನು ವೋಲ್ವೋ ಹೊಂದಿದೆ.
ಪ್ರಸ್ತುತ ನಾಲ್ಕು ಐಷಾರಾಮಿ ಮಾಡೆಲ್‌ಗಳನ್ನು ವೋಲ್ವೋ ಮಾರಾಟ ಮಾಡುತ್ತಿವೆ. ಅವುಗಳೆಂದರೆ
- ವೋಲ್ವೋ ಎಕ್ಸ್‌ಸಿ 90 (ಸೆವೆನ್ ಸೀಟರ್ ಲಗ್ಷುರಿ ಎಸ್‍ಯುವಿ)
- ವೋಲ್ವೋ ಎಕ್ಸ್‌ಸಿ 60 (ಕಾಂಪಾಕ್ಟ್ ಎಸ್‌ಯುವಿ)
- ಎಸ್ 80 ಸೆಡಾನ್
- ಎಸ್60 (ಸ್ಪೋರ್ಟಿ ಸೆಡಾನ್)
2020ರ ವೇಳೆಗೆ 20,000 ಯುನಿಟ್‌ಗಳನ್ನು ಮಾರಾಟ ಮಾಡುವುದು ವೋಲ್ವೋ ಗುರಿಯಾಗಿದೆ. ಇನ್ನು ಅಂಕಿಅಂಶದತ್ತ ಮೆಲುಕು ಹಾಕಿದರೆ 2011ರಲ್ಲಿ 320 ಹಾಗೂ 2012ರಲ್ಲಿ 820 ಲಗ್ಷುರಿ ಕಾರುಗಳು ಮಾರಾಟ ಮಾಡಿವೆ. ಹಾಗೆಯೇ 2013ನೇ ಸಾಲಿನಲ್ಲಿ 1,200 ಯುನಿಟ್ ಮಾರಾಟ ಮಾಡುವ ಗುರಿ ಹೊಂದಿದೆ.
ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಐ) ಮುಖಾಂತರ ವೋಲ್ವೋ ತನ್ನ ವಾಹನಗಳನ್ನು ಭಾರತಕ್ಕೆ ರಫ್ತು ಮಾಡುತ್ತಿವೆ. ಆದರೆ 2013-14 ಕೇಂದ್ರ ಬಜೆಟ್‌ನಲ್ಲಿ ಅಬಕಾರಿ ಸುಂಕ ಶೇ. 25ರಷ್ಟು ಹೆಚ್ಚಳ ಮಾಡಿದ್ದರಿಂದ ವೋಲ್ವೋಗೆ ತೀವ್ರ ಹೊಡೆತ ಬೀಳುವಂತಾಗಿತ್ತು.
ಇವನ್ನೂ ಓದಿ: ರೇಸ್ ಟ್ರ್ಕಾಕಲ್ಲಿ ಧೋನಿ ಬಾಯ್ಸ್ ವಿಜಯೋತ್ಸವ
ಟ್ವಿಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ


Click it and Unblock the Notifications









