ಮೇ ತಿಂಗಳಲ್ಲಿ 2014 ಟೊಯೊಟಾ ಕರೊಲ್ಲಾ ಆಲ್ಟೀಸ್ ಲಾಂಚ್

Written By:

ಎಲ್ಲರ ನಿರೀಕ್ಷೆಯಂತೆಯೇ ಬಹುಬೇಡಿಕೆಯ ಟೊಯೊಟಾ ಕರೊಲ್ಲಾ ಆಲ್ಟೀಸ್ ರಸ್ತೆ ಪ್ರವೇಶಕ್ಕೆ ಮುಹೂರ್ತ ಸನ್ನಿಹಿತವಾಗಿದೆ. ಈ ಹಿಂದೆ 2014 ಫೆಬ್ರವರಿ ತಿಂಗಳಲ್ಲಿ ನಡೆದ 12ನೇ ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿದ್ದ 2014 ಟೊಯೊಟಾ ಕರೊಲ್ಲಾ ಆಲ್ಟೀಸ್ ಮುಂಬರವ ಮೇ ತಿಂಗಳಲ್ಲಿ ಭರ್ಜರಿ ಲಾಂಚ್ ಕಾಣಲಿದೆ.

ಹಿಂದಿನ ಆವೃತ್ತಿಗೆ ಹೋಲಿಸಿದರೆ ಸಂಪೂರ್ಣ ಹೊಸತನದ ಆಕ್ರಮಣಕಾರಿ ತಾಜಾ ವಿನ್ಯಾಸವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅಂದರೆ ಒಂದೇ ಮಾತಿನಲ್ಲಿ ವಿವರಿಸುವುದಾದ್ದಲ್ಲಿ ಕ್ರೀಡಾತ್ಮಕ ವಿನ್ಯಾಸ ಗಿಟ್ಟಿಸಿಕೊಂಡಿದೆ ಎಂದೇ ವರ್ಣಿಸಬಹುದು.

ಮೇ ತಿಂಗಳಲ್ಲಿ 2014 ಟೊಯೊಟಾ ಕರೊಲ್ಲಾ ಆಲ್ಟೀಸ್ ಲಾಂಚ್

2014 ಟೊಯೊಟಾ ಕರೊಲ್ಲಾ ಆಲ್ಟೀಸ್ ದೊಡ್ಡದಾದ ಹೆಚ್ಚು ಅಗಲವಾದ ಗ್ರಿಲ್ ಪಡೆದುಕೊಂಡಿದ್ದು, ಹೆಡ್‌ಲ್ಯಾಂಪ್ ಸ್ವಲ್ಪ ಹಿಂಬದಿಯ ವರೆಗೂ ವಿಶಾಲವಾಗಿ ಚಾಚಿಕೊಂಡಿದೆ. ಇದಕ್ಕೆ ಎಲ್‌ಇಡಿ ಲೈಟ್ ಸೇರಿಕೊಂಡಾಗ ಫ್ರಂಟ್ ಬಂಪರ್‌ಗೆ ಒಟ್ಟಾರೆಯಾಗಿ ತೀಕ್ಷ್ಮವಾದ ಲುಕ್ ಪ್ರದಾನ ಮಾಡುತ್ತದೆ.

ಮೇ ತಿಂಗಳಲ್ಲಿ 2014 ಟೊಯೊಟಾ ಕರೊಲ್ಲಾ ಆಲ್ಟೀಸ್ ಲಾಂಚ್

ಇನ್ನು ಸೌಲಭ್ಯಗಳ ಬಗ್ಗೆ ಮಾತನಾಡುವುದಾದ್ದಲ್ಲಿಯೂ ನೂತನ ಆಲ್ಟೀಸ್ ತುಂಬಾನೇ ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ. ಇದರಲ್ಲಿ ಸ್ಯಾಟಲೈಟ್ ನೇವಿಗೇಷನ್ ಹಾಗೂ ರಿವರ್ಸ್ ಪಾರ್ಕಿಂಗ್‌ಗಾಗಿ ದೊಡ್ಡದಾದ 7 ಇಂಚಿನ ಎಲ್‌ಸಿಡಿ ಟಚ್‌ಸ್ಕ್ರೀನ್ ಪರದೆ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಲೆಥರ್ ಸೀಟು, ಕೀಲೆಸ್ ಎಂಟ್ರಿ, ರೈನ್ ಸೆನ್ಸಾರ್ ವೈಪರ್, ಆಟೋಮ್ಯಾಟಿಕ್ ವೆರಿಯಂಟ್‌ನಲ್ಲಿ ಪ್ಯಾಡಲ್ ಶಿಫ್ಟರ್ ಮತ್ತು ಫುಶ್ ಬಟನ್ ಸ್ಟಾರ್ಟ್ ಸೇರಿದಂತೆ ಹಲವಾರು ವಿಶಿಷ್ಟತೆಗಳನ್ನು ಹೊಂದಿದೆ.

ಮೇ ತಿಂಗಳಲ್ಲಿ 2014 ಟೊಯೊಟಾ ಕರೊಲ್ಲಾ ಆಲ್ಟೀಸ್ ಲಾಂಚ್

ಲಾಸ್ಟ್ ಬಟ್ ನಾಟ್ ಲೀಸ್ಟ್ ಎಂಬಂತೆ, ಈ ಸೆಡಾನ್ ಕಾರು ಹೆಚ್ಚುವರಿ 100 ಎಂಎಂ ಉದ್ದ ಹೊಂದಿರಲಿದ್ದು, ಅಂದರೆ 2700 ಎಂಎಂ ಆಗಿರಲಿದೆ. ಇದು ಕಾರಿಗೆ ಹೆಚ್ಚು ಲೆಗ್ ರೂಂ ನೀಡುತ್ತದೆ. ಇದನ್ನು ಖಂಡಿತವಾಗಿಯೂ ಕರೊಲ್ಲಾ ಮಾಲಿಕರು ಇಷ್ಟಪಡಲಿದ್ದಾರೆ.

ಮೇ ತಿಂಗಳಲ್ಲಿ 2014 ಟೊಯೊಟಾ ಕರೊಲ್ಲಾ ಆಲ್ಟೀಸ್ ಲಾಂಚ್

ನೂತನ ಕರೊಲ್ಲಾ ಆಲ್ಟೀಸ್ 1.8 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದ್ದು, 140 ಪಿಎಸ್ ಪವರ್ ಉತ್ಪಾದಿಸಲಿದೆ. ಅಲ್ಲದೆ 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ ಐಚ್ಛಿಕ 7 ಸ್ಪೀಡ್ ಸಿವಿಟಿ ಗೇರ್ ಬಾಕ್ಸ್ ಪಡೆದುಕೊಂಡಿರಲಿದೆ. ಇದರ ಜತೆಗೆ 1.4 ಲೀಟರ್ ಡೀಸೆಲ್ ಎಂಜಿನ್ 88 ಪಿಎಸ್ ಪವರ್ ಉತ್ಪಾದಿಸಲಿದೆ. ಇದು ಆರು ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿದೆ.

ಮೇ ತಿಂಗಳಲ್ಲಿ 2014 ಟೊಯೊಟಾ ಕರೊಲ್ಲಾ ಆಲ್ಟೀಸ್ ಲಾಂಚ್

ಅಂದ ಹಾಗೆ 2014 ಟೊಯೊಟಾ ಕರೊಲ್ಲಾ ಆಲ್ಟೀಸ್ ಮೇ 27ರಂದು ಲಾಂಚ್ ಆಗಲಿದ್ದು, ಜೂನ್ ವೇಳೆಯಿಂದ ವಿತರಣೆ ಕಾರ್ಯ ಆರಂಭವಾಗಲಿದೆ. ನಿಮ್ಮ ಮಾಹಿತಿಗಾಗಿ, ಬುಕ್ಕಿಂಗ್ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ರು. 50000 ಪಾವತಿಸಿ ನಿಮ್ಮ ಕಾರನ್ನು ಮುಂಗಡವಾಗಿ ಕಾಯ್ದಿರಿಸಿಕೊಳ್ಳಬಹುದಾಗಿದೆ.

ಮೇ ತಿಂಗಳಲ್ಲಿ 2014 ಟೊಯೊಟಾ ಕರೊಲ್ಲಾ ಆಲ್ಟೀಸ್ ಲಾಂಚ್

ಈ ಹಿಂದೆ 2003ನೇ ಇಸವಿಯಲ್ಲಿ ಲಾಂಚ್ ಕಂಡಿದ್ದ ಆಲ್ಟೀಸ್, ಸಿ ಸೆಡಾನ್ ವಿಭಾಗದಲ್ಲಿ ಅತ್ಯಂತ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ 10 ದಶಲಕ್ಷದಷ್ಟು ಸಂತುಷ್ಟ ಗ್ರಾಹಕರನ್ನು ಪಡೆದಿತ್ತು.

ಮೇ ತಿಂಗಳಲ್ಲಿ 2014 ಟೊಯೊಟಾ ಕರೊಲ್ಲಾ ಆಲ್ಟೀಸ್ ಲಾಂಚ್

ಪ್ರಸ್ತುತ 11ನೇ ಜನಾಂಗದ ಕರೊಲ್ಲಾ ಆಲ್ಟೀಸ್, ತನ್ನ ನಿಕಟ ಪ್ರತಿಸ್ಪರ್ಧಿಗಳಾದ ಹ್ಯುಂಡೈ ಎಲಾಂಟ್ರಾ, ಸ್ಕೋಡಾ ಒಕ್ಟಾವಿಯಾ ಮತ್ತು ಫೋಕ್ಸ್‌ವ್ಯಾಗನ್ ಜೆಟ್ಟಾ ಆವೃತ್ತಿಗೆ ಪೈಪೋಟಿ ಒಡ್ಡಲಿದೆ.

English summary
At the Auto Expo 2014 Toyota made it clear that it was ready to loosen some restraint with the 2014 Corolla Altis. Unlike the current Corolla Altis sold in India, the 2014 version clearly looked aggressive, if not particularly sporty.
Story first published: Saturday, March 15, 2014, 15:37 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark