ಪ್ರಸಕ್ತ ತಿಂಗಳಲ್ಲೇ 2014 ಟೊಯೊಟಾ ಕರೊಲ್ಲಾ ಲಾಂಚ್
2014 ಆಟೋ ಎಕ್ಸ್ ಪೋದಲ್ಲಿ 11ನೇ ಜನಾಂಗದ ಟೊಯೊಟಾ ಕರೊಲ್ಲಾ ಪ್ರದರ್ಶಿಸಿದ್ದ ಜಪಾನ್ ಮೂಲದ ಟೊಯೊಟಾ ಸಂಸ್ಥೆಯು, ಇದೀಗ ಈ ಬಹುನಿರೀಕ್ಷಿತ ಕಾರನ್ನು ಭಾರತ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಆಣಿಯಾಗುತ್ತಿದೆ. ವರದಿಗಳ ಪ್ರಕಾರ ಪ್ರಸಕ್ತ ತಿಂಗಳಲ್ಲೇ 2014 ಟೊಯೊಟಾ ಕರೊಲ್ಲಾ ಲಾಂಚ್ ಆಗಲಿದೆ. ಈ ಪ್ರೀಮಿಯಂ ಸೆಡಾನ್ ಕಾರನ್ನು ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಟೊಯೊಟಾ ದೇಶದ ಮಾರುಕಟ್ಟೆಗೆ ಪರಿಚಯಿಸುತ್ತಿದೆ.
ಜಪಾನ್ ಸಂಸ್ಥೆಯ ಪ್ರಕಾರ, 2014 ಟೊಯೊಟಾ ಕರೊಲ್ಲಾ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ. ಈ ಪೈಕಿ ಐದು ಪೆಟ್ರೋಲ್ ಹಾಗೂ ನಾಲ್ಕು ಡೀಸೆಲ್ ವೆರಿಯಂಟ್‌ಗಳಲ್ಲಿ ಆಗಮನವಾಗಲಿದೆ. ಜೊತೆಗೆ ಪೆಟ್ರೋಲ್ ಆಟೋಮ್ಯಾಟಿಕ್ ವೆರಿಯಂಟ್ ಸಹ ಇರಲಿದೆ.

ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು ಮುಂಭಾಗದ ಪ್ರಯಾಣಿಕರಿಗೆ ಎಬಿಎಸ್, ಇಬಿಡಿ ಮತ್ತು ಡ್ಯುಯಲ್ ಏರ್‌ಬ್ಯಾಗ್ ಸೌಲಭ್ಯವಿರಲಿದೆ. ಈ ಪ್ರೀಮಿಯಂ ಲಗ್ಷುರಿ ಕಾರಿನಲ್ಲಿ ಆಟೋ ವೈಪರ್, ಕೀಲೆಸ್ ಎಂಟ್ರಿ, ಫಾಗ್‌ಲ್ಯಾಂಪ್, ಎಲ್‌ಇಡಿ ಹೆಡ್ ಲೈಟ್ ಜತೆಗೆ ಸ್ಟಾರ್ಟ್/ಸ್ಟಾಪ್ ಬಟನ್ ಸಹ ಲಭ್ಯವಾಗಲಿದೆ.
2014 ಟೊಯೊಟಾ ಕರೊಲ್ಲಾದಲ್ಲಿ ದೊಡ್ಡದಾದ ಏಳು ಇಂಚಿನ ಟಿಎಫ್‌ಟಿ ಪರದೆ ಇರಲಿದೆ. ಇದರಲ್ಲೇ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಗೋಚರವಾಗಲಿದೆ. ಇನ್ನು ಕಾರಿನೊಳಗೆ ಲೆಥರ್ ಸ್ಪರ್ಶ ಪಡೆದಯಲಿದ್ದು, ಕ್ರೂಸ್ ಕಂಟ್ರೋಲ್ ಹಾಗೂ ನೇವಿಗೇಷನ್ ವಿಶಿಷ್ಟತೆಗಳು ಆಟೋಮ್ಯಾಟಿಕ್ ವೆರಿಯಂಟ್‌ಗಳಲ್ಲಿ ಮಾತ್ರ ಲಭ್ಯವಾಗಲಿದೆ.

ಹಿಂದಿನ ಆವೃತ್ತಿಯಲ್ಲಿರುವುದಕ್ಕೆ ಸಮಾನವಾದ ಎಂಜಿನ್‌ನಿಂದ ನೂತನ ಟೊಯೊಟಾ ಕರೊಲ್ಲಾ ನಿಯಂತ್ರಿಸಲ್ಪಡಲಿದೆ. ಇದರ 1.8 ಲೀಟರ್ ಪೆಟ್ರೋಲ್ ಡ್ಯುಯಲ್ ವಿವಿಟಿ-ಐ ಎಂಜಿನ್ 140 ಪಿಎಸ್ ಪವರ್ (140 ಎನ್‌ಎಂ ಪೀಕ್ ಟಾರ್ಕ್) ಉತ್ಪಾದಿಸಲಿದೆ. ಹಾಗೆಯೇ 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅಥವಾ ಸಿವಿಟಿ ಕೂಡಾ ಇರಲಿದೆ.
ಅಂತೆಯೇ 1.4 ಲೀಟರ್ ಡೀಸೆಲ್ ಎಂಜಿನ್ 88.4 ಪಿಎಸ್ ಪವರ್ (205 ಎನ್‌ಎಂ ಟಾರ್ಕ್) ಉತ್ಪಾದಿಸಲಿದ್ದು, 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ. ಅಂತಿಮವಾಗಿ ದರದ ಬಗ್ಗೆ ಯಾವುದೇ ಮಾಹಿತಿಗಳು ಬಂದಿಲ್ಲ. ಹಾಗಿದ್ದರೂ ಈಗಿರುವ ಆವೃತ್ತಿಗಿಂತಲೂ ಸ್ವಲ್ಪ ದುಬಾರಿಯೆನಿಸಲಿದೆ.


Click it and Unblock the Notifications








