ಷೆವರ್ಲೆ ಕಂಪ್ಲೀಟ್ ಕೇರ್ ಪ್ರೋಗ್ರಾಂ
ಕಾರು ಖರೀದಿ ಮಾಡಿದ ಬಳಿಕ ಸರಿಯಾದ ರೀತಿಯಲ್ಲಿನ ನಿರ್ವಹಣೆ ಮಾಡುವುದು ಅಷ್ಟೇ ಮುಖ್ಯ. ಇದು ಕಾರಿನ ದೀರ್ಘ ಬಾಳ್ವಿಕೆಯಲ್ಲಿ ದೊಡ್ಡ ಪಾತ್ರ ವಹಿಸುತ್ತದೆ. ಇದರ ಮಹತ್ವವನ್ನು ಅರಿತುಕೊಂಡಿರುವ ಅಮೆರಿಕ ಮೂಲದ ಜನರಲ್ ಮೋಟಾರ್ಸ್‌ನ ಕಾರು ಬ್ರಾಂಡ್ ಆಗಿರುವ ಷೆವರ್ಲೆ, ಕಂಪ್ಲೀಟ್ ಕೇರ್ ಪ್ರೋಗ್ರಾಂಗೆ ಆರಂಭಿಸಿದೆ. ಈ ಮೂಲಕ ಕಂಪನಿಯ ಉತ್ಪನ್ನಗಳ ಸರ್ವೀಸ್ ವೆಚ್ಚ ಜಾಸ್ತಿ ಹಾಗೂ ಡೀಲರ್‌ಶಿಪ್ ಗ್ರಾಹಕ ಸೇವೆ ಕಳಪೆ ಮಟ್ಟದಲ್ಲಿದೆ ಎಂಬ ಅಪವಾದವನ್ನು ನೀಗಿಸುವ ಇರಾದೆ ಹೊಂದಿದೆ.
'ಷೆವರ್ಲೆ ಕಂಪ್ಲೀಟ್ ಕಾರ್ ಪ್ರೋಗ್ರಾಂ' ಮುಖಾಂತರ ಗ್ರಾಹಕರು ಕಾರು ನಿರ್ವಹಣೆಯ ಬಗ್ಗೆ ಸಂಪೂರ್ಣ ಮಾಹಿತಿ ಗಿಟ್ಟಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲದೆ ಕಾರು ಖರೀದಿ ಬಳಿಕ ಗರಿಷ್ಠ ನಿರ್ವಹಣೆಯನ್ನು ಒದಗಿಸುವ ಮೂಲಕ ಹೆಚ್ಚೆಚ್ಚು ಗ್ರಾಹಕರನ್ನು ಆಕರ್ಷಿಸುವ ಇರಾದೆಯನ್ನು ಸಂಸ್ಥೆ ಹೊಂದಿದೆ. ಇದು ಈಗಿರುವ ಗ್ರಾಹಕರ ಮೆಚ್ಚುಗೆಗೂ ಪಾತ್ರವಾಗಲಿದೆ. ಅಂದ ಹಾಗೆ ಷೆವರ್ಲೆ ಕಾರ್ ಪ್ರೋಗ್ರಾಂನಲ್ಲಿ ಷೆವರ್ಲೆ ಪ್ರೊಮಿಸ್, ಎಕ್ಸ್‌ಕ್ಲೂಸಿವ್ ವಾರಂಟಿ ಪ್ಯಾಕೇಜ್, ಷೆವರ್ಲೆ ಯು-ಫಸ್ಟ್ ಪ್ರೋಗ್ರಾಂ, 24x7 ರೋಡ್ ಸೈಡ್ ಅಸಿಸ್ಟನ್ಸ್ ಪ್ರೋಗ್ರಾಂ ಮತ್ತು ಸ್ಮಾರ್ಟ್ ಫೋನ್ ಅಪ್ಲಿಕೇಷನ್ ಒಳಗೊಂಡಿರಲಿದೆ.

ಷೆವರ್ಲೆ ಪ್ರೊಮಿಸ್
ಇದರ ಮೂಲಕ ಹೆಚ್ಚುವರಿ ಆವರ್ತಕ ಮತ್ತು ನಿಗದಿತ ನಿರ್ವಹಣಾ ವೆಚ್ಚವನ್ನು ಗ್ರಾಹಕರಿಗೆ ಮೂರು ವರ್ಷ ಅಥವಾ 45,000 ಕೀ.ಮೀ. ಬಳಿಕ ಹಿಂದಿರಿಗಿಸಲಾಗುವುದು.

ಎಕ್ಸ್‌ಕ್ಲೂಸಿವ್ ವಾರಂಟಿ ಪ್ಯಾಕೇಜ್
ಸ್ಟಾಂಡರ್ಡ್ ವಾರಂಟಿ ಪ್ಯಾಕೇಜ್ ಒಂದು ಲಕ್ಷ ಕೀ.ಮೀ. ಅಥವಾ ಮೂರು ವರ್ಷಗಳಿಗೆ ದೊರಕಲಿದೆ. ಅಲ್ಲದೆ ಅತ್ಯಲ್ಪ ವೆಚ್ಚದಲ್ಲಿ ಷೆವರ್ಲೆ ಗ್ರಾಹಕರಿಗೆ ಎರಡು ವರ್ಷಗಳಿಗೆ ಅಥವಾ 1.50 ಕೀ.ಮೀ. ತನಕ ಮುಂದುವರಿಸಬಹುದಾಗಿದೆ. ಹಾಗೆಯೇ ಬಿಡಿಭಾಗ ಮತ್ತು ಆಕ್ಸೆಸರಿಗಳಿಗೂ ಒಂದು ವರ್ಷ ಅಥವಾ 20,000 ಕೀ.ಮೀ. ವರೆಗಿನ ವಾರಂಟಿ ಲಭಿಸಲಿದೆ.

ಷೆವರ್ಲೆ ಯು-ಫಸ್ಟ್ (ಮಹಿಳಾ ಗ್ರಾಹಕರಿಗಾಗಿ)
ಮಹಿಳೆಯ ಹೆಸರಿನಲ್ಲಿ ನೊಂದಾಯಿತ ಕಾರುಗಳಿಗೆ ಸರ್ವಿಸ್ ವೇಳೆ ಷೆವರ್ಲೆ ಅಧಿಕೃತ ವರ್ಕ್‌ಶಾಪ್‌ನಿಂದ ಉಚಿತ ಫ್ರಿ ಪಿಕಪ್ ಹಾಗೂ ಡ್ರಾಪ್ ಸೇವೆ ಒದಗಿಸಿಕೊಡಲಾಗುವುದು.

ರೋಡ್‌ಸೈಡ್ ಅಸಿಸ್ಟಂಟ್
ಅದೇ ರೀತಿ ನೂತನ ಷೆವರ್ಲೆ ಗ್ರಾಹಕರಿಗಾಗಿ ಮೂರು ವರ್ಷಗಳ ತನಕ 24x7 ಉಚಿತ ರೋಡ್ ಸೈಡ್ ಅಸಿಸ್ಟಂಟ್ ಸೇವೆ ಒದಗಿಸಲಾಗುತ್ತದೆ. ಈಗಿರುವ ಗ್ರಾಹಕರು ಸಹ ಅತ್ಯಲ್ಪ ಮೊತ್ತವನ್ನು ಪಾವತಿಸಿ ಈ ಸೇವೆಯನ್ನು ಪಡೆಯಬಹುದಾಗಿದೆ. ಆದರೆ ನಿಮ್ಮ ಕಾರು ಐದು ವರ್ಷಗಿಂತಲೂ ಹಳೆಯದಾಗಿರಬಾರದು.

ರೋಡ್ ಸೈಡ್ ಅಸಿಸ್ಟಂಟ್ ಪ್ರೋಗ್ರಾಂನಲ್ಲಿ ವಾಹನ ಒಯ್ಯುವುದು, ಫ್ಲ್ಯಾಟ್ ಚಕ್ರ ಬದಲಾವಣೆ, ನಿಯಮಿತ ಉಚಿತ ಇಂಧನ, ಕೀ ಲಾಕೌಟ್, ಬ್ಯಾಟರಿ ಬಂಪ್ ಸ್ಟಾರ್ಟ್ ಮತ್ತು ಟ್ಯಾಕ್ಸಿ ಉಪಯೋಗ ಸೇರಿರುತ್ತದೆ. ಅದೇ ರೀತಿ ಷೆವರ್ಲೆ ಗ್ರಾಹಕರು ಗ್ರಾಹಕ ಸ್ನೇಹಿ ಸ್ಮಾರ್ಟ್ ಫೋನ್ ಅಪ್ಲಿಕೇಷನ್ ಸಹ ಡೌನ್‌ಲೋಡ್ ಮಾಡಬಹುದಾಗಿದೆ.


Click it and Unblock the Notifications








