2015 ಷೆವರ್ಲೆ ಕ್ರೂಜ್ ಫೇಸ್‌ಲಿಫ್ಟ್ ವರ್ಷನ್
ಪ್ರತಿಷ್ಠಿತ ನ್ಯೂಯಾರ್ಕ್ ಆಟೋ ಶೋ ಮುನ್ನುಡಿಯಾಗಿ ಎಪ್ರಿಲ್ 16ರಂದು ಷೆವರ್ಲೆ ತನ್ನ ಅತಿ ನೂತನ 2015 ಕ್ರೂಜ್ ಆವೃತ್ತಿಯನ್ನು ಅನಾವರಣಗೊಳಿಸಿದೆ. ಮುಂದಿನ ಎರಡು ವರ್ಷದೊಳಗೆ ಎಲ್ಲ ಹೊಸತನದಿಂದ ಕೂಡಿದ ಕ್ರೂಜ್ ಆಗಮನವಾಗಲಿದೆ. ಇದಕ್ಕೂ ಮೊದಲಾಗಿ ಷೆವರ್ಲೆಯಿಂದ ಬಿಡುಗಡೆಯಾಗಲಿರುವ ಕೊನೆಯ ಫೇಸ್‌ಲಿಫ್ಟ್ ಮಾದರಿ ಇದಾಗಿಲಿದೆ.
ಮುಂಬರುವ ಬೀಜಿಂಗ್ ಮೋಟಾರು ಶೋದಲ್ಲಿ ಚೀನಾ ಮಾದರಿಯ ಕ್ರೂಜ್ ಬಿಡುಗಡೆಯಾಗಲಿದೆ. ಇದು ಈಗಾಗಲೇ ಟೆಸ್ಟಿಂಗ್ ವೇಳೆ ಸೆರೆಸಿಕ್ಕಿವೆ.

ನೂತನ ಕ್ರೂಜ್ ಹಲವಾರು ಎಕ್ಸ್‌ಟೀರಿಯರ್ ಬದಲಾವಣೆ ಪಡೆದುಕೊಳ್ಳಲಿದೆ.ಇದು ಎಲ್‌ಟಿ ಹಾಗೂ ಎಲ್‌ಟಿಝಡ್ ವೆರಿಯಂಟ್‌ಗಳಲ್ಲಿ ಲಭ್ಯವಿರಲಿದ್ದು, ಎಲ್‌ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್ ಹೆಚ್ಚು ಆಕರ್ಷಕವಾಗಿರಲಿದೆ.
ಇನ್ನು ಕಾರಿನ ಒಳಮೈ ವೈಶಿಷ್ಟ್ಯಗಳು ನ್ಯೂಯಾರ್ಕ್ ಆಟೋ ಶೋ ವೇಳೆಯಷ್ಟೇ ತಿಳಿದು ಬರಲಿದೆ. ಇದು ಒನ್ ಸ್ಟಾರ್, ಮೈಲಿಂಕ್, ಮೇಸೆಜ್ ಅಲರ್ಟ್, ವೈಫೈ ಜತೆಗೆ 4ಜಿ ಎಲ್‌ಟಿಇ ಹಾಟ್ ಸ್ಪಾರ್ಟ್ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ.
ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಬದಲಾವಣೆ ಕಂಡುಬರುವುದಿಲ್ಲ. ಇದು 1.8 ಲೀಟರ್ ಫೋರ್ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 138 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ ಟರ್ಬೊಚಾರ್ಜ್ಡ್ 1.4 ಲೀಟರ್ ಸಿಲಿಂಡರ್ ಎಂಜಿನ್ ಸಹ ಇರಲಿದೆ. ಇನ್ನು ಹೆಚ್ಚು ಶಕ್ತಿಶಾಲಿ 2.0 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಸಹ ಇರಲಿದೆ.


Click it and Unblock the Notifications








