ತನ್ನದೇ ಶೋ ರೂಂ ತೆರೆಯಲಿರುವ ದಟ್ಸನ್

By Nagaraja

ಬಹುನಿರೀಕ್ಷಿತ ದಟ್ಸನ್ ಗೊ ಸಣ್ಣ ಕಾರು ಇತ್ತೀಚೆಗಷ್ಟೇ ಲಾಂಚ್ ಆಗಿತ್ತಲ್ಲದೆ ತನ್ನ ಮಾರಾಟವನ್ನು ನಿಸ್ಸಾನ್ ಪ್ರದರ್ಶನ ಮಳಿಗೆ ಮೂಲಕ ತೊಡಗಿಸಿಕೊಂಡಿದೆ. ಇದರಂತೆ ಈ ಹಿಂದೆ ಘೋಷಿಸಿರುವಂತೆಯೇ ದಟ್ಸನ್ ತನ್ನದೇ ಆದ ಶೋ ರೂಂ ತೆರೆದುಕೊಳ್ಳುವ ಯೋಜನೆಯಲ್ಲಿದೆ.

ನಿಮಗೆಲ್ಲರಿಗೂ ತಿಳಿದಿರುವಂತೆಯೇ ದಟ್ಸನ್, ನಿಸ್ಸಾನ್‌ನ ಬಜೆಟ್ ಕಾರು ಬ್ರಾಂಡ್ ಆಗಿದೆ. ಪ್ರಸ್ತುತ ತನ್ನದೇ ಆದ ಪ್ರತ್ಯೇಕ ಶೋ ರೂಂ ತೆರೆದುಕೊಳ್ಳುವುದು ದಟ್ಸನ್ ಗುರಿಯಾಗಿದೆ.

Datsun

ಮುಂದಿನ ಆರೆಂಟು ತಿಂಗಳೊಳಗೆ ಹೊಸ ಶೋ ರೂಂ ತೆರೆದುಕೊಳ್ಳುವುದು ದಟ್ಸನ್ ಗುರಿಯಾಗಿದೆ. ಸಂಸ್ಥೆಯು ಹೇಳುವ ಪ್ರಕಾರ, ತಮ್ಮ ಗ್ರಾಹಕರು ನಿಸ್ಸಾನ್ ಗ್ರಾಹಕರಿಗಿಂತ ಭಿನ್ನವಾಗಿದ್ದು, ಹಾಗಾಗಿ ಹೊಸತಾದ ಶೋ ರೂಂ ತೆರೆದುಕೊಳ್ಳಲಾಗುತ್ತಿದೆ.

ಇದೇ ಸಂದರ್ಭದಲ್ಲಿ ತನ್ನ ನಿರ್ಮಾಣ ಸಾಮರ್ಥ್ಯವನ್ನು ಹೆಚ್ಚಿಸುವ ಇರಾದೆಯನ್ನು ದಟ್ಸನ್ ಹೊಂದಿದೆ. ಇದಕ್ಕಾಗಿ ದೇಶದ ಉತ್ತರ ಹಾಗೂ ಪಶ್ಚಿಮ ಭಾಗಗಳಲ್ಲಿ ಎರಡು ಹೊಸ ಘಟಕಗಳು ತೆರೆದುಕೊಳ್ಳಲಿದೆ. ಈ ಯೋಜನೆಗೆ ಒಂದು ವರ್ಷದಷ್ಟು ಕಾಲವಕಾಶ ತಗುಲಲಿದೆ. ಪ್ರಸ್ತುತ ದಟ್ಸನ್ ಮುಖ್ಯ ಘಟಕ ಚೆನ್ನೈನಲ್ಲಿದೆ.

2014 ಮಾರ್ಚ್ ತಿಂಗಳಲ್ಲಿ ಲಾಂಚ್ ಆಗಿದ್ದ ದಟ್ಸನ್ ಗೊ ಸಣ್ಣ ಕಾರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಂಸ್ಥೆಯು ಈಗಾಗಲೇ 5,000ಕ್ಕೂ ಹೆಚ್ಚು ಬುಕ್ಕಿಂಗ್ ದಾಖಲಿಸಿಕೊಂಡಿದೆ. ಈ ಸಣ್ಣ ಹ್ಯಾಚ್‌ಬ್ಯಾಕ್ ಕಾರಿನ ದರ 3.12 ಲಕ್ಷ ರು.ಗಳಿಂದ 3.70 ಲಕ್ಷ ರು.ಗಳ ವರೆಗಿದೆ.

More from DriveSpark

Article Published On: Friday, May 9, 2014, 14:38 [IST]
English summary
Datsun have successfully launched their hatchback the GO in India. Nissan is the parent company of Datsun and both the Japanese brands are doing well in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+