ಮಹೀಂದ್ರ ಥಾರ್‌ಗೆ ಆಧುನಿಕ ಸ್ಪರ್ಶ ನೀಡಿದ ಡಿಸಿ ಡಿಸೈನ್
ದೇಶದ ಪ್ರಖ್ಯಾತ ಕಾರು ಕಸ್ಟಮೈಸ್ಡ್ ವಿನ್ಯಾಸ ಸಂಸ್ಥೆಯಾಗಿರುವ ಡಿಸಿ ಡಿಸೈನ್, ಆಫ್ ರೋಡ್ ವಾಹನ ಮಹೀಂದ್ರ ಥಾರ್‌ಗೆ ಆಧುನಿಕ ಸ್ಪರ್ಶ ನೀಡುವಲ್ಲಿ ಯಶಸ್ವಿಯಾಗಿದೆ.
ದಿಲೀಪ್ ಚಾಬ್ರಿಯಾ ಒಡೆತನದಲ್ಲಿರುವ ದೇಶದ ಪ್ರೀಮಿಯಂ ಆಟೋಮೋಟಿವ್ ಡಿಸೈನ್ ಸಂಸ್ಥೆಯಾಗಿರುವ ಡಿಸಿ ಡಿಸೈನ್, ಇತ್ತೀಚೆಗೆ ದೇಶದ ಜನಪ್ರಿಯ ಮಾದರಿಗಳನ್ನು ಪರಿಷ್ಕೃತಗೊಳಿಸುವುದರಲ್ಲಿ ಹೆಚ್ಚು ಆಸಕ್ತಿಯನ್ನು ತೋರುತ್ತಿದೆ.

ಅನೇಕ ಮಂದಿ ಬಾಲಿವುಡ್ ಸೆಲೆಬ್ರಿಟಿಗಳು, ಕ್ರಿಕೆಟ್ ಸ್ಟಾರ್ ಹಾಗೂ ಶ್ರೀಮಂತ ಉದ್ಯಮಿಗಳು ಈಗಾಗಲೇ ಡಿಸಿ ಡಿಸೈನ್ ಕಸ್ಟಮೈಸ್ಡ್ ವಾಹನಗಳನ್ನು ಪಡೆದುಕೊಂಡಿದ್ದಾರೆ.

ಇದೀಗ ಮಹೀಂದ್ರ ಥಾರ್‌ಗೆ ಹೊಸ ರೂಪ ನೀಡುವಲ್ಲಿ ಡಿಸಿ ಡಿಸೈನ್ ಯಶಸ್ವಿಯಾಗಿದೆ. ಇದನ್ನು ಪಟ್ಟಣದ ಕನ್ವರ್ಟಿಬಲ್ ಆಫ್ ರೋಡರ್ ಆಗಿ ಕಸ್ಟಮೈಸ್ಡ್ ಮಾಡಲಾಗಿದೆ.

ಹಾಗಿದ್ದರೂ ಸಾಂಪ್ರದಾಯಿಕ ಜೀಪ್ ವಿನ್ಯಾಸವನ್ನು ಇಲ್ಲಿ ಕಾಯ್ದುಕೊಳ್ಳಲಾಗಿದ್ದು, ಫೈಬರ್ ಗ್ಲಾಸ್ ಬಾಡಿ ನೀಡಲಾಗಿದೆ.

ಇಲ್ಲಿ ಉಪಯುಕ್ತ ಒಳಮೈ ವಿನ್ಯಾಸವನ್ನು ನೋಡಬಹುದಾಗಿದೆ. ಆದರೆ ಇದು ಸಂಪೂರ್ಣ ಆಧುನಿಕವಾಗಿರಲಿದ್ದು, ಎಲ್‌ಸಿಡಿ ಮನರಂಜನಾ ಸಿಸ್ಟಂ, ಸೆಂಟ್ರಲ್ ಕನ್ಸೋಲ್ ಮತ್ತು ಕ್ರೀಡಾ ಪೆಡ್ಯಾಲ್ ಪಡೆಯಲಿದೆ.

ನಿಸ್ಸಂಶವಾಗಿಯೂ ಯಾತ್ರಿಕರ ಸುಖ ಪಯಣಕ್ಕಾಗಿ ಎಸಿ ಆಳವಡಿಲಾಗಿದೆ. ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.


Click it and Unblock the Notifications








